ಕ್ಷಣ
ಒಂದು ಕ್ಷಣಕ್ಕೆ ಅದೆಷ್ಟು ಶಕ್ತಿ ಇದೆ, ಜಗತ್ತಿನ ಅನಾಹುತಗಳೆಲ್ಲ ಆಗಿದ್ದು ಬರಿಯ ಕ್ಷಣದಲ್ಲಿ,,,,, ಹುಟ್ಟು ಒಂದು ಕ್ಷಣ, ಸಾವು ಒಂದು ಕ್ಷಣ, ಆ ಒಂದು ಕ್ಷಣ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸಬಲ್ಲದು, ಆ ಒಂದು ಕ್ಷಣ ಎತೇಚ್ಚ ನಲಿವನ್ನೂ ಕೊಡಬಲ್ಲದು, ಅದಕ್ಕೆ ದೊಡ್ಡವರು ಹೇಳಿದ್ದಿರಬೇಕು, ಎಲ್ಲವು ಕ್ಷಣಿಕ ಎಂದು.
ಒಂದೊಮ್ಮೆ ಇದ್ದ ಬಾಲ್ಯ, ಕ್ಷಣದೊಳಗೆ ಮಾಯವಾಯಿತೇ ಎನಿಸುತ್ತದೆ , ಇರುವ ಯವ್ವನ ಕ್ಷಣದೊಳಗೆ ಮುಪ್ಪಾಗುವುದೋ ಎಂದು ಭಯವಾಗುತ್ತದೆ. ಕ್ಷಣದೊಳಗೆ ಇಲ್ಲೇ ಪಕ್ಕದಲ್ಲೇ ಕುಳಿತಿದ್ದ ಹಕ್ಕಿ ಮಾಯವಾಗಿರುತ್ತದೆ, ಸಂಜೆಯ ಒಂದು ಕ್ಷಣದಲ್ಲಿ ಸೂರ್ಯ ಕಣ್ಮರೆಯಾಗುತ್ತಾನೆ, ನಮ್ಮ ಕಣ್ಣೆದುರಲ್ಲೇ ನಮ್ಮವರೆಲ್ಲ ಕ್ಷಣದಲ್ಲಿ ಇಲ್ಲವಾಗುತ್ತಾರೆ, ಕೆಲವೊಮ್ಮೆ ಅನಿಸುವುದುಂಟು ಅದೆಷ್ಟು ಕ್ರೂರ ಈ ಕ್ಷಣ ಎಂದು. ಆದರೇನು ಜಗದ ನಿಯಮವೇ ಹಾಗಲ್ಲವೇ, ಕ್ಷಣ ಮಾತ್ರ.
ಒಂದೊಂದು ಕ್ಷಣಗಳಿರುತ್ತವೆ, ಬದುಕಿನ ದೃಷ್ಟಿಕೋನವನ್ನೇ ಬದಲಿಸಿ ಎತ್ತಲಿಗೂ ನಮ್ಮನ್ನು ಎಸೆದು ಬಿಡುತ್ತವೆ. ಆದರೆ ಬದುಕಿನ ಹುಚ್ಚುತನ, ನಾವು ಬದುಕಲೇ ಬೇಕಾಗಿ ಬದುಕುತ್ತೇವೆ,
ಸಿಯಾಚಿನ್ ನ ಹಿಮದಲ್ಲಿ ಸಿಲುಕಿ ಕ್ಷಣ ಗಣನೆ ಮಾಡಿದ ಆ ಯೋಧನ ಪರಿಸ್ಥಿತಿ ಹೇಗಿದ್ದರಬಹುದು, ಕ್ಷಣಗಳೆಲ್ಲ ವರ್ಷಗಳಂತೆ ಅನಿಸಿರಬೇಕು ಅವನಿಗೆ, ಅವನ ತ್ಯಾಗಕ್ಕೊಂದು ಸಲಾಂ. ಆಹಾರವಿಲ್ಲದೆ, ನೀರಿಲ್ಲದೆ, ಕಡೆ ಪಕ್ಷ ಉಸಿರಾಡಲು ಆಮ್ಲಜನಕವೂ ಇಲ್ಲದೆ ಕಳೆದ ಕ್ಷಣಗಳು ಅವನ ಪಾಲಿನ ಎಂತಹ ಕ್ಷಣಗಳಾಗಿರಬಹುದು, ಊಹಿಸಲೂ ಅಸಾಧ್ಯ.
ಕ್ಷಣಗಳ ಅಂತರದಲ್ಲಿ ಏನೆಲ್ಲಾ ಆಗಬಹುದು,,,,,,,,,
ಒಂದು ಹುಟ್ಟು ಮತ್ತು ಒಂದು ಸಾವಿಗೆ ಅಂತರ ಬಾರಿಯ ಕ್ಷಣವಷ್ಟೇ,,,,,,
ಕ್ಷಣದ ಹೊಡೆತಕ್ಕೆ ನಿರ್ಜೀವವಾಗಿದೆ ಭಾವ.