Skip to content

ಪ್ರೇಮ ಗೀಮ ಜಾನೆದೊ ಎಂಬ ಮನೋಹರ ಚೆಲುವಿನ ಸಿನಿಮಾ

ಸೆಪ್ಟೆಂಬರ್ 5, 2016

ಚೇತನ್ ಕುಮಾರ್ ನಿರ್ದೇಶನದ, ಪ್ರೇಮ ಗೀಮ ಜಾನೆದೊ ಚಿತ್ರವನ್ನು ನೋಡಲು ಓರಾಯಿನ್ ನ ಹವಾ ನಿಯಂತ್ರಿತ ಥಿಯೇಟರಿಗೆ ಕುಟುಂಬ ಸಮೇತ ಹೋಗಿದ್ದೆ,,,,,,,, ಹೋಗಿ ಕುಳಿತು ಮೊದಲ ಶಾಟ್, ಹೊಗೆಯ ಬಗ್ಗೆ ಬರುವ ಮಾತುಗಳು ತುಟಿಯ ಅಂಚಲ್ಲಿ ನಗು ತರಿಸಿತ್ತು,,,,,, ಪಕ್ಕ ಕುಳಿತ ತಮ್ಮ ತಂಗಿ ಹಾಗು ಇತರರು ಬಿದ್ದು ಬಿದ್ದು ನಗಲಾರಂಭಿಸಿದ್ದರು. ತದನಂತರ ಮತ್ತಷ್ಟು ನಗೆ ಚಿಮ್ಮಿಸುವ ಹಾಡು,,,,,,,, ಆ ಹಾಡನ್ನು ಥಿಯೇಟರಿನಲ್ಲಿ ಕೇಳುವುದೇ ಒಂದು ತರದ ರೋಮಾಂಚನ,,,,,

ನಿಧಾನವಾಗಿ ಕತೆ ತೆರೆದುಕೊಳ್ಳುತ್ತದೆ, ನಾನಿಲ್ಲಿ ಕಥೆ ಹೇಳುವುದಿಲ್ಲ,,,,,,, ಏಕೆಂದರೆ,,,,, ಆ ಕೆಥೆಯ ಗಮ್ಮತ್ತು ಇರುವುದೇ ಸಿನಿಮಾದ ದೃಶ್ಯ ಕಾವ್ಯದಲ್ಲಿ,,,

download

ನಗರದ ದಟ್ಟ ಸಿಮೆಂಟಿನ ಕಟ್ಟಡಗಳಲ್ಲಿ ಕುಳಿತು, ಯಾವ ಕಡೆ ನೋಡಿದರೂ ಬರಿಯ ಟ್ರಾಫಿಕ್ಕನ್ನೆ ಕಣ್ಣಿಗೆ ಅಂಟಿಸಿಕೊಳ್ಳುವ ಸನ್ನಿವೇಶದಲ್ಲಿ ಬದುಕುವ ನಾವುಗಳು, ಹೊಟ್ಟೆಗೆ ಹಾಕುವ ಆಹಾರದಲ್ಲಿ ಮಾತ್ರ ಕಲುಷಿತವನ್ನು ತಿನ್ನುತ್ತಿಲ್ಲ, ಕಣ್ಣಿಗೆ ಕಾಣಿಸುವ ದೃಶ್ಯಗಳಲ್ಲೂ ಕೂಡ ಬಡವರಾಗಿದ್ದೇವೆ,,,,,,, ಆ ಬಡತನವನ್ನು ನೀಗಿಸಲು ಸರಿಯಾದ ಸಮಯಕ್ಕೆ ಸಿಕ್ಕ ಪ್ರಕೃತಿಯ ರಮಣೀಯತೆಯನ್ನು ನಮ್ಮ ಮುಂದೆ ತಂದು ಬಡಿಸಿದ್ದಾರೆ ಈ ಚಿತ್ರದಲ್ಲಿ,,,, ಅದಲ್ಲದೆ, ಮನಸ್ಸಿಗೆ ನಾಟುವ ಕಥೆ, ಮನಬಿಚ್ಚಿ ನಗುವ ತಮಾಷೆ, ಸ್ವಲ್ಪ ಭಯ, ಸ್ವಲ್ಪ ಪ್ರೀತಿ, ಸ್ವಲ್ಪ ಇನ್ನೇನೋ (ಸಿನಿಮಾ ನೋಡಿದಾಗ ಗೊತ್ತಾಗುತ್ತದೆ),,,,,,,ಎಲ್ಲವನ್ನು ಹದವಾಗಿ ಮಿಶ್ರಣ ಮಾಡಿ ಬಡಿಸಿದ್ದಾರೆ ನಿರ್ದೇಶಕರು,,,,

p2

p1

ಕುಟುಂಬ ಸಮೇತರಾಗಿ ಯಾವುದೇ ಮುಜುಗರ ಇಲ್ಲದೆ ನೋಡಬಹುದಾದ ಚಿತ್ರ,,,,,,,,,ಅಪ್ಪ, ಅಮ್ಮ, ಮಕ್ಕಳು, ಅಜ್ಜ , ಅಜ್ಜಿ, ಎಲ್ಲರೂ ಒಂದೇ ಥಿಯೇಟರಿನ ಅಡಿಯಲ್ಲಿ ಕುಳಿತು ನೋಡುವ ಸಿನಿಮಾ ಎಂದರೆ ತಪ್ಪಲ್ಲ,,,,,,, ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳಿಲ್ಲ ಎಂದು ಹೀಗಳೆಯುವ ಮುನ್ನ ಈ ಸಿನಿಮಾ ನೋಡಿದರೆ ಒಂದು ಸುಮಧುರ ಸವಿ ಸವಿದ ಅನುಭವ ಖಂಡಿತಾ,,,,

ಯಾವುದೇ ಕಲಾಕೃತಿಗೆ ವಿಮರ್ಷೆ ಬರೆಯುವುದು ತಪ್ಪು ಎಂದು ನನ್ನ ಅನಿಸಿಕೆ ,,,,,, ಆದರೆ ಆ ಕಲಾಕೃತಿಯ ಹಿಂದಿನ ಶ್ರಮ ಹೊಗಳುವುದು ತಪ್ಪಲ್ಲ,,,,,,,, ಚಿತ್ರದ ಹಿಂದೆ ಹೊಸ ತಂಡದ ಶ್ರಮ ಇದೆ,,,,, ಎಲ್ಲರ ಹೃದಯವೇ ಈ ಸಿನಿಮಾದಲ್ಲಿದೆ, ನೋಡಿ ಅಭಿನಂದಿಸುವುದು ನಮ್ಮ ಕೈಲಿದೆ,

ತಾರಾಗಣ :

ಚೇತನ್ ಕುಮಾರ್ ನಿರ್ದೇಶಿಸಿರುವ,
ಗೌತಮ್, ಶೃತಿ ತಿಮ್ಮಯ್ಯ, ಪಲ್ಲವಿ ಗೌಡ, ರಮೇಶ್ ಭಟ್, ಪ್ರಶಾಂತ್ ಸಿದ್ದಿ ಮುಖ್ಯ ಭೂಮಿಕೆಯಲ್ಲಿ,

-ಜಿ ಕೆ ನವೀನ್

Advertisements
One Comment
  1. Badarinath Palavalli permalink

    ಒಳ್ಳೆಯ ವಿಮರ್ಷೆ.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: