ವಿಷಯದ ವಿವರಗಳಿಗೆ ದಾಟಿರಿ

ಅವಳಿಗೆ

ಸೆಪ್ಟೆಂಬರ್ 25, 2016

ಮೋಡದ ಮರೆಯಿಂದ ಬಿದ್ದ ಹನಿಯೊಂದು,
ಅವಳನ್ನೇ ಸೋಕಲು ಹವಣಿಸಿದ್ದೇಕೆ
ಎನ್ನುವ ಪ್ರಶ್ನೆಗೆ,,,,,
ಅವಳ ಮುಗುಳ್ನಗುವೆ ಉತ್ತರ,,,,,,

ಮಿಂಚುಹುಳಗಳು,ಅವಳ ಕೈಯ ಒಳಗೆ,
ಮಿಂಚುವುದು ಹೆಚ್ಚಿಸಿದ್ದು ಯಾಕೆ,,,,
ಅವಳ ಸ್ಪರ್ಶಕೆ,,
ಅವಕ್ಕೆ ಮಿಂಚು ಹೊಡೆದಿರಬೇಕು,,,,,

ಮುದ್ದು ಮುದ್ದು ಮಾತಿಗೆ,ಜೇನು ನೊಣಗಳು
ದಾಳಿ ಮಾಡಲೇ ಇಲ್ಲ,,,,
ಹಾರಿಹೋದವು ಪಕ್ಕದಲಿ,,,
ಅವಳಿಗೆ ಕಣ್ಣು ಹೊಡೆಯುತ್ತಾ.

ಪದೇ ಪದೇ,
ನನ್ನ ನೆನಪೊಳಗೆ ಬರುವ
ಕೇರಳದ ಹುಡುಗಿಗೆ,
ಒಂದಷ್ಟು ಗ್ಯಾಲಕ್ಸಿಯನು ತಂದು
ಆಡಲು ಕೊಡಲೇ?

-ಜಿ ಕೆ ನವೀನ್ ಕುಮಾರ್

ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮ ಟಿಪ್ಪಣಿ ಬರೆಯಿರಿ