Skip to content

ಇಷ್ಟು ಬೇಗ ಮುಗಿದುಹೋಯಿತೆ ?

ಸೆಪ್ಟೆಂಬರ್ 27, 2016

ಬೆಳಕಲ್ಲಿ ದಣಿದು
ಕತ್ತಲಲ್ಲಿ ಹೆದರಿ
ಅವ್ವನ ಮಡಿಲಲ್ಲಿ ಮುದುರಿ ಕುಳಿತಿದ್ದ
ಬಾಲ್ಯ
ಇಷ್ಟು ಬೇಗ ಮುಗಿದುಹೋಯಿತೆ ?

ನಿನ್ನೆ ಮೊನ್ನೆ ವರೆಗೂ
ಬದುಕೆಂದರೆ ಹಾಗೆ,,,,, ಹೀಗೆ,,,,
ಎಂದು ಕನಸು ಕಟ್ಟಿ,
ಮನೆಯ ಜಗುಲಿಯಲ್ಲಿ
ಭವಿಷ್ಯ ರೂಪಿಸಿದ
ಬಾಲ್ಯ
ಇಷ್ಟು ಬೇಗ ಮುಗಿದುಹೋಯಿತೆ ?

ನನ್ನ ಜೊತೆ ಕುಳಿತು
ಎಂಟಾಣೆ ಚಾಕಲೇಟು ತಿಂದ,
ಹಸಿರು ಲಂಗದ ಹುಡುಗಿಗೆ ಮದುವೆಯಾಗಿ
ಆಕೆಯ ಮಗು ಶಾಲೆಗೆ ಹೋಗುತ್ತಿದೆಯಲ್ಲ,,,
ಆ ನೆನಪುಗಳನ್ನು ಕಟ್ಟಿ ಕೊಟ್ಟ
ಬಾಲ್ಯ
ಇಷ್ಟು ಬೇಗ ಮುಗಿದುಹೋಯಿತೆ ?

ಮಣ್ಣಿನಲ್ಲಿ ಆಡಿ,
ಬಿದ್ದು ಆದ ಗಾಯಕ್ಕೆ,
ಲಾಂಟನ ಗಿಡದ ಎಲೆಯ ರಸವನ್ನು
ತಿಕ್ಕಿ, ಉಜ್ಜಿ, ಅಪ್ಪನ ಕೈಲಿ
ಬೈಸಿಕೊಂಡ
ಬಾಲ್ಯ,
ಇಷ್ಟು ಬೇಗ ಮುಗಿದುಹೋಯಿತೆ ?

ನದಿಗೆ ಬಾಗಿದ ಮರದ ಕೊಂಬೆಯಿಂದ
ಜಿಗಿದು,,,,,, ಈಜುವಾಗ,
ದಾರಿಬದಿಗೆ ನೇತುಹಾಕಿದ
ಕೆಂಪು ಅಂಗಿಯನ್ನು ಮಂಗ ಹೊತ್ತೊಯ್ದು
ಬರಿ ಮೈಲಿ ಮನೆಗೆ ಹೋದ
ಬಾಲ್ಯ
ಇಷ್ಟು ಬೇಗ ಮುಗಿದುಹೋಯಿತೆ ?

-ಜಿ ಕೆ ನವೀನ್ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: