Skip to content

ನನಗೊಂದು ಕನ್ನಡಿ ಬೇಕೆನಿಸಿತು

ಸೆಪ್ಟೆಂಬರ್ 29, 2016

ಜರ್ಮನಿಯ ನಗರದ ಹಾದಿಯಲ್ಲಿ ಹಾದುಹೋಗುವಾಗ ನನಗೆ ಬದುಕುವವರು ಕಾಣಲೇ ಇಲ್ಲ,ಎಲ್ಲರೂ, ಓಡುತ್ತಲೇ ಇದ್ದರು,,,,ಯಾರನ್ನಾದ್ರೂ ತಡೆದು ಕೇಳೋಣ ಎಂದುಕೊಂಡೆ, ಎಲ್ಲಿಗೆ ಪಯಣ ಎಂದು ?

ಒಂದಷ್ಟು ದಿನದ ನಂತರ, ಕೊಡಚಾದ್ರಿಯ ಪರ್ವತದ ತಪ್ಪಲಲ್ಲಿ ಕುಳಿತಿದ್ದೆ,,,,,ಆಗ ಮೂವರು ಜರ್ಮನಿಯ ಪ್ರಜೆಗಳು ಸಿಕ್ಕಿದ್ದರು, ಬಹಳ ಚೆಂದವಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು, ಜರ್ಮನಿಯ ನಗರದ ಓಟದ ಬಗ್ಗೆ, ನೇರವಾಗಿ ಪ್ರಶ್ನಿಸಿದೆ, ಅವರು ನನ್ನ ಪ್ರಶ್ನೆಗೆ ನಗಲಾರಂಭಿಸಿದರು, ನಂತರ, “ನೀನು ನೋಡಿದ ದೃಷ್ಟಿಕೋನ ಬೇರೆ,,,,,,, ಅಲ್ಲಿ ಎಲ್ಲರೂ ಓಡುತ್ತಾರೆ ನಿಜ, ಆದರೆ ಅವರವರಿಗೆ ಬೇಕಾದ್ದನ್ನು ಪಡೆಯಲು ಮಾತ್ರ ಓಡುತ್ತಾರೆ, ಈಗ ನಮ್ಮನ್ನೇ ನೋಡು, ನಾವು ನಗರದಲ್ಲಿ ಒಂದಷ್ಟು ದಿನ ಓಡಿ ಈಗ ಪ್ರಪಂಚ ಸುತ್ತಲು ಬಂದಿದ್ದೇವೆ, ನಮ್ಮ ಗುರಿ ಅಲ್ಲಿ ಓಡುವುದಲ್ಲ, ಪ್ರಪಂಚ ಸುತ್ತುವುದು,,,,,, ಹಾಗೆಯೇ ಅವರವರ ಗುರಿ ಅವರವರಿಗೆ,,,,,, ಓಟದ ವೇಗ, ಓಟದ ದಿಕ್ಕು ಎಲ್ಲವೂ ಅವರವರ ಆಸೆಗೆ ತಕ್ಕಂತೆ,,,,,, ಆ ಮಾತು ಕೇಳಿ ನನಗೊಂದು ಕನ್ನಡಿ ಬೇಕೆನಿಸಿತು.

ಜಿ ಕೆ ನವೀನ್ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: