Skip to content

ನೆನಪನ್ನು ಹುಟ್ಟಿಸುವುದೇ ನಗರ ?

ಅಕ್ಟೋಬರ್ 17, 2016

ನಿನ್ನೆಯ ಬೆಂಗಳೂರಿನ ಮಂಜಿನಲ್ಲಿ,
ಗಾಲ್ಫ್-ಕೋರ್ಟ್ ಪಕ್ಕದಲ್ಲಿ ಬೈಕಿನಲ್ಲಿ ಸಾಗುವಾಗ
ಹಾರಿ ಬಂದ ಹುಲ್ಲಿನ ಪರಿಮಳ,,,,,,,
ಬಾಲ್ಯದಲ್ಲಿ ಗದ್ದೆಯ ಕೊಯ್ಲಿನ ನಂತರದ
ಪರಿಮಳವನ್ನು ನೆನಪಿಸುವಂತಿತ್ತು

ನಗರಕ್ಕೂ ನೆನಪು ನೀಡುವ ಶಕ್ತಿ ಇದೆಯೇ?
ಕಪ್ಪು ರೋಡಿನ ತುಂಬಾ ತುಂಬಿದ
ವಾಹನಗಳ ಮಧ್ಯ, ನಾನೆಂಬ ಮಷಿನ್ನು
ಹೊಟ್ಟೆ ಪಾಡಿಗೆ ಅವಿರತ ದುಡಿಯುವ ಪರಿ
ನನಗೆ ಸೋಜಿಗವೆನಿಸಿತ್ತು

ಬೆಂಗಳೂರಿನಲಿ
ಬೆಳದಿಂಗಳನ್ನು ಹುಡುಕುತ್ತ
ಮೈಲುಗಟ್ಟಲೆ ನಡೆದಿದ್ದೇನೆ,,,
ಸಿಕ್ಕಿದ್ದು
ಬರಿಯ ಬೀದಿ ದೀಪಗಳು, ವಾಹನ ದೀಪಗಳು
ಬೆಳದಿಂಗಳಿಗೂ ಬರ ಬಂದ ಊರಿಗೆ
ನೆನಪನ್ನು ಹುಟ್ಟಿಸುವ ತಾಕತ್ತಿದೆಯೇ

ಚಿಕ್ಕಂದಿನಲ್ಲಿ ಕಂಡ,
ಹೊಲದಲ್ಲಿ ಕೆಲಸ ಮಾಡುವ
ಕೆದರಿದ ಕೂದಲ, ಕಪ್ಪು ಕಂಗಳ
ಮಾದಕ ಚೆಲುವೆ,
ಈ ನಗರದ ಯಾವ ಮೂಲೆಯಲ್ಲೂ
ಕಾಣ ಸಿಗಲಿಕ್ಕಿಲ್ಲ, ಬಹುಷಃ,
ನೆನಪುಗಳನ್ನು ಮೆಲಕು ಹಾಕುವ
ಪಾಡು ನನ್ನದು.

ಮುಖವಾಡಗಳಲ್ಲಿ
ನಗುವನ್ನು ಹುಡುಕುವುದು ಬಹಳ ಕಷ್ಟ,,,,,,,,
ನಿಂತ ನಗರದಲ್ಲಿ
ಎಡೆಬಿಡದೆ ಓಡಿದ ನಾವುಗಳು
ಮತ್ತೆ ಬಂದು ಸೇರುವುದು, ಹೊರಟ ಮೊದಲ ತುದಿಗೆ
ಅಂತ್ಯಕ್ಕೊಂದು ಕಾರಣ,

ಮನದ ಮುಲೆಯಲ್ಲಿ ನೆಲೆ ನಿಲ್ಲುವ ತವಕ ಸತ್ತಿಲ್ಲ

-GK NAVEEN

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: