Skip to content

ಅಂತರಂಗದ ಲಾಟೀನು

ನವೆಂಬರ್ 3, 2016

ಎದೆಯ ಆಳಕ್ಕೆ ಇಳಿಬಿಟ್ಟ ಹಗ್ಗಕ್ಕೆ
ಸಿಕ್ಕಿಹಾಕಿಕೊಂಡ ಭಾವಗಳನ್ನು,,,
ಬಲವಾಗಿ ಮೇಲೆಳೆದು,
ಸೂರ್ಯನ ಬಿಸಿಲಿಗೆ ಒಣಗಿಸಿದ್ದೇನೆ,

ಅದೆಷ್ಟೋ ವರ್ಷ ಹಳೆಯ ನೆನಪುಗಳೂ
ಅದರ ಪಕ್ಕಕ್ಕೆ ಸಿಕ್ಕಿ ಹಾಕಿಕೊಂಡಿವೆ,
ಎಳೆದಷ್ಟೂ ಬರುವ
ಟೈಲರ್ ಅಂಗಡಿಯ
ದಾರದ ಉಂಡೆಯ ಹಾಗೆ,

ನಾನೊಮ್ಮೆ ಆಕಾಶದಲ್ಲಿ ಹಾರಿದರೆ
ನೆಲ ಕಾಣುವ ತವಕ ಇನ್ನಷ್ಟು ಹೆಚ್ಚಾಗುವುದು,,,,
ಕಾರಣ
ಇಲ್ಲಿಯ ಈ ಭಾವಗಳೇ,

ಮಳೆಯ ಹನಿಯಲ್ಲಿ ನೆನೆದು ಬಂದ
ತರುಣಿಯ ಸುತ್ತಾ, ಎಡೆಬಿಡದೆ ಸುತ್ತಿದ
ದೃಷ್ಟಿಗಳು,,,,
ಆ ಕ್ಷಣಕ್ಕೆ ಪಡೆದುಕೊಂಡಿದ್ದೇನು?
ಒಂದಷ್ಟು ನೆನಪಿರಬಹುದೇ !
ಒಂದಷ್ಟು ಮರೆವಿರಬಹುದೇ !

ನೆನಹುಗಳ ಪದೇ ಪದೇ ನೆನೆಯುತ್ತ
ನೆನಪುಗಳ ನೀರಿನಲಿ ಓಡಿಸುವ
ಬದುಕಿನ ದೋಣಿಗೆ,,,,,
ನಾವಿಕರವರವರೇ

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: