Skip to content

ಹೆಸರು ಕೇಳಿಲ್ಲ

ನವೆಂಬರ್ 5, 2016

ನಕ್ಷತ್ರಗಳನ್ನೆಲ್ಲ ಗಾಳ ಹಾಕಿ ಹಿಡಿದು,
ಕೇರಳದ ಪುಟ್ಟ ಹುಡುಗಿಯ ಹೋಟೆಲಿನ
ಮೀನು ಬಾಂಡಲಿಗೆ ಹಾಕುವ ನೆಪದಲ್ಲಿ ಬಳಿಹೋದೆ,
ತಟಕ್ಕನೆ ತಪ್ಪಿಸಿಕೊಂಡ ನಕ್ಷತ್ರಗಳು,
ಅವಳ ಎದೆಯಲ್ಲಿ ಶಾಶ್ವತ ಮುತ್ತಾದವು,

ಇಡೀ ಎಳನೀರನ್ನು ರೆಫ್ರಜಿರೇಟರಿನಲ್ಲಿಟ್ಟು
ಕುಡಿಯುವ
ಸ್ವಚ್ಛ ಆಸೆಗೆ, ಹೆಚ್ಚಿಗೆ ನಾನೇನು ಹೇಳುವ ಹಾಗಿಲ್ಲ,,,

ಪ್ರತಿ ಹೆಣ್ಣ ಎದೆಯಲ್ಲೊಂದು, ಅವ್ವ ಇರುವಳೆಂದು
ಕೇಳಿದ್ದೆ,
ನೋಡಿದ್ದು ಈಗಲೇ,,,,
ರಸ್ತೆಗೆ ಬಿದ್ದ ರಕ್ತ-ಸಿಕ್ತ ಹಕ್ಕಿಯನು,
ಮಮತೆಯಲಿ ಆರೈಕೆ ಮಾಡಿದಳು,
ಅದೀಗ ಆಕಾಶಕ್ಕೆ ಹಾರುತ್ತಿದೆ,,,
ನಮ್ಮವ್ವ ನಮ್ಮನ್ನು ಹಾಗೆ ಅಲ್ಲವೇ ಬೆಳೆಸಿದ್ದು,,,
ಮಾಂಸದ ಮುದ್ದೆಗೆ ಜೀವ ತುಂಬಿದ್ದು,

ಅವಳ ಮನೆಯ ಹೆಂಚಿನ ಮಾಡು,
ನಿಂತಿರುವುದು ಇವಳ ಕನಸಿನ ಮೇಲೆ,
ಪ್ರತೀ ಹೆಂಚಿನಲ್ಲೂ, ಒಂದೊಂದು ಕನಸುಗಳು,
ಬದುಕಿನ ಆಸೆಗೆ ನೆರಳಾಗಿ ಕಾಪಾಡಿವೆ,

ನನಗೆ ಚಾ ಕೊಡುವ ನೆಪದಲ್ಲಿ,
ಕಾಣಿಸಿಕೊಳ್ಳುವ ಅವಳ ಮುಖದಲ್ಲಿ
ಅಂದು ಸ್ನಿಗ್ಧ ಚೆಲುವು,
ಅವಳಿಗೊಬ್ಬ ಪುಟ್ಟ ತಮ್ಮ ಬಂದ ಖುಷಿ,

ಶಾಲೆಗೇ ಹೋಗುವ ದಾರಿಯಲಿ,
ನನ್ನ ಕೈಗೆ ಎರಡು ಇಡಿಯಪ್ಪವನ್ನು ಕೊಟ್ಟು ಹೋಗುವುದು
ಕಾಡುವುದು ಅವಳ ಮುಗ್ಧತೆ,,,
ಚಿಕ್ಕ ವಯಸ್ಸಿನಲ್ಲೂ ಎಲ್ಲವನೂ, ಎಲ್ಲರನೂ
ಅತಿಯಾಗಿ ಪ್ರೀತಿಸುವ ಕಲೆ ಕಲಿಸಿದ್ದು
ಬಡತನವೇ?

-GK Naveen kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: