Skip to content

ಸಿನಿಮಾ ವ್ಯವಸ್ಥೆಗೆ ಹಿಡಿದ ಕನ್ನಡಿ,

ನವೆಂಬರ್ 8, 2016

ನಿನ್ನೆಯ ಸಹಿಸದ ಅಗಾಧ ನೋವು, ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ಘಟನೆ ಖಂಡನೀಯ. ಅದರ ಜೊತೆಗೆ ಏಳುವ ಹಲವು ಪ್ರಶ್ನೆಗಳು ಸಿನಿಮಾದವರ ಬದುಕಿನ ಪರಿಯನ್ನು ಅವಲೋಕಿಸುವಂತೆ ಮಾಡುತ್ತದೆ. ಎಷ್ಟೋ ಸಿನಿಮಾಗಳಲ್ಲಿ ಬಂದು ಹೋದ ದೃಶ್ಯವನ್ನು ಮತ್ತೆ ಮತ್ತೆ ಜನರ ಮುಂದೆ ತಂದಿಡುವ ಪ್ರಯತ್ನ ಮಾಡಿ, ನಾವಿಲ್ಲಿ ಹೊಸದನ್ನು ಮಾಡಿದ್ದೇವೆ ಎನ್ನುವ ವಿಚಿತ್ರ ಚಪಲಕ್ಕೆ ಎರಡು ಜೀವಗಳು ಬಲಿಯಾಗಿವೆ,

ಸಿನಿಮಾದ ಉದ್ದೇಶ ಜನರನ್ನು ರಂಜಿಸುವುದೇ ಆದರೂ, ಎಷ್ಟೋ ವರ್ಷ ಹಳೆಯದಾದ ದೃಶ್ಯಗಳನ್ನು ಪದೇ ಪದೇ ಪರದೆಯ ಮೇಲೆ ನೋಡುವಷ್ಟು ಮೂರ್ಖರೇ ಜನ? ಇಂತಹ ದೃಶ್ಯಕ್ಕೆ ಪರ್ಯಾಯ ಇಲ್ಲವೇ? ಎಂತಹವರಿಗೂ ಸಿನಿಮಾದ ದೊಡ್ಡ ದೊಡ್ಡ ಟೆಕ್ನಿಕ್ಗಳು ಕೈಗೆಟುಕುವಂತೆ ಇರುವಾಗ ಹುಚ್ಚುತನ ಪ್ರದರ್ಶಿಸುವ ಅವಶ್ಯಕತೆ ಏನಿತ್ತು ?

ಕೆಲವು ವರ್ಷಗಳ ಹಿಂದೆ ಮುಂಬೈ ಪಕ್ಕದ ಮಾಲೇಗಾವ್ ಎಂಬ ಗ್ರಾಮದ ಯುವಕನೊಬ್ಬ, ತನ್ನ ನೇಟಿವಿಟಿಗೆ ತಕ್ಕಂತೆ ಸೂಪರ್ ಮ್ಯಾನ್ ಸಿನಿಮಾವನ್ನು ಬದಲಾಯಿಸಿ, ತನಗೆ ಸಿಕ್ಕ ಚಿಕ್ಕ ಪುಟ್ಟ ತಂತ್ರಜ್ಞಾನದಲ್ಲಿ ತನ್ನ ಗ್ರಾಮದವರಿಗೆ ಬೇಕಾದ ಹಾಗೆ “ಮಾಲಗಾವ್ ಕ ಸೂಪರ್ ಮ್ಯಾನ್” ಎನ್ನುವ ಸಿನಿಮಾ ತೆಗೆದಿದ್ದಾನೆ, ಆ ಸಾಮಾನ್ಯ ಮನುಷ್ಯನಿಗೆ ಹೊಳೆದ ಸೇಫ್ಟಿಯ ವಿಚಾರ, ಎಷ್ಟೋ ಸಿನಿಮಾದ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ ಇವರಿಗ್ಯಾಕೆ ತಿಳಿಯಲಿಲ್ಲ ಎನ್ನುವುದು ಖೇದಕರ.

ಆಗಿದ್ದು ಆಯಿತು ಎಂದು ಸುಮ್ಮನಿರುವ ಹಾಗಿಲ್ಲ, ಇಡೀ ದೇಶದ ಭವಿಷ್ಯವನ್ನು ತನ್ನ ಕೈಯಲ್ಲಿ ಹಿಡಿದ ಬಹಳ ಗಟ್ಟಿಮುಟ್ಟು ಮಾಧ್ಯಮ ಈ ಸಿನಿಮಾ, ಇದರ ಒಳ ಹೊರ ಚರ್ಚೆಗಳು ನಡೆಯಬೇಕು, ಪ್ರತೀ ಸಾಹಸ ದೃಶ್ಯದಲ್ಲಿ ಕಲಾವಿದನ ಹಾಗು ಇತರ ತಂತ್ರಜ್ಞರ ಸೇಫ್ಟಿಗೆ ತೆಗೆದುಕೊಂಡ ಪಟ್ಟಿಯನ್ನು ಸಿನಿಮಾ ತಂಡ ಫಿಲಂ ಚೇಂಬರಿಗೆ ಸಲ್ಲಿಸುವಂತೆ ಇರಬೇಕು, ಇಂತಹ ದೃಶ್ಯಗಳನ್ನು ಆದಷ್ಟು ಆಲೋಚಿಸಿ, ಯಾರಿಗೂ ಸ್ವಲ್ಪವೂ ಹಾನಿಯಾಗದಂತೆ ಚಿತ್ರಿಸುವ ಪರಿ ಕಂಡುಕೊಳ್ಳಬೇಕು. ಇಂದಿನ ಎಷ್ಟೋ ಸಿನಿಮಾಗಳಲ್ಲಿ ಏನೂ ಇಲ್ಲದಿದ್ದರೂ ಹಣ ಮಾಡುವುದೇ ಉದ್ದೇಶವಾಗಿ ತೆರೆಗೆ ಬರುತ್ತಿವೆ, ಕ್ರಿಯೇಟಿವಿಟಿಗೆ ಹೆಚ್ಚಿನ ಬೆಲೆ ಕೊಡದ, ಹಾಗು ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಿನಿಮಾಗಳನ್ನು ಆದಷ್ಟು ಒಳ್ಳೆಯ ಹಾದಿಗೆ ತರುವ ಪ್ರಯತ್ನವನ್ನು ಚೇಂಬರ್ ಮಾಡಬೇಕು, ಕೊನೆ ಪಕ್ಷ ಕಲಾವಿದ ಇಂತಹ ದೃಶ್ಯಗಳಲ್ಲಿ ಎಷ್ಟು ಪಳಗಿದ್ದಾನೆ ಎನ್ನುವುದನ್ನಾದರೂ ಗಣನೆಗೆ ತೆಗೆದುಕೊಳ್ಳಬೇಕು, ಯಾಕೆಂದರೆ ನಿನ್ನೆ ಅವರಿಬ್ಬರಿಗೂ ಈಜು ಬರುವುದಿಲ್ಲ ಎನ್ನುವ ಸತ್ಯ ತಿಳಿದಿದ್ದರೂ, ಉಡಾಫೆ ಮಾಡಿರುವುದು ಕಂಡುಬರುತ್ತದೆ.

ನೋಡುಗರಾಗಿ ನಾವು ಇನ್ನಷ್ಟು ಪ್ರೌಢರಾಗಬೇಕು, ಇಂತಹ ಹಳಸಲು ದೃಶ್ಯಗಳನ್ನು ನೋಡುವಷ್ಟು ಬರಗೆಟ್ಟಿಲ್ಲ ಹಾಗು ಅಷ್ಟು ಕ್ರೂರ ದೃಶ್ಯಗಳನ್ನು ಆನಂದಿಸುವಷ್ಟು ಸಂವೇದನಾ ರಹಿತರಲ್ಲ ಎಂದು ಹೇಳಬೇಕಿದೆ,

ಇನ್ನೆಷ್ಟೇ ಕಿರುಚಿ ಕೂಗಾಡಿದರೂ ಹೋದ ಜೀವಗಳು ಹಿಂತಿರುಗಿ ಬಾರವು, ಮುಂದಾದರೂ ಇಂತಹ ವಿಚಾರಗಳಲ್ಲಿ ಜೀವದ ಬೆಲೆಯನ್ನು ಅರಿತು ಮುನ್ನೆಡೆಯುವುದು ಒಳಿತು. ಜೀವಕ್ಕಿಂತ ದೊಡ್ಡದು ಯಾವುದೂ ಅಲ್ಲ, ತೆರೆಯ ಮೇಲಿನ ಹುಚ್ಚು ಹಿರಿಮೆಗೆ, ಕಲಾವಿದರನ್ನು ಬಲಿಕೊಡುವುದು ಸರಿಯಲ್ಲ. ಜೀವವೊಂದಿದ್ದರೆ ಇಂತಹ ನೂರಾರು ಚಿತ್ರಗಳನ್ನು ತೆರೆಗೆ ತರಬಹುದು, ಹುಚ್ಚುತನ ಮಾಡುವ ಮುನ್ನ ದಯವಿಟ್ಟು ಹುಷಾರಾಗಿರಿ, ಒಬ್ಬರ ಬದುಕು ಎಂದಿಗೂ ಒಬ್ಬರ ಬದುಕಾಗಿ ಇರುವುದಿಲ್ಲ, ಅದು ಎಷ್ಟೋ ಜನರ ಅನ್ನ ಉಸಿರು, ಭವಿಷ್ಯ, ನೆರಳು, ಪ್ರೇಮ ಎಲ್ಲವೂ.

-G.K.Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: