Skip to content

ನಾನು ಎಂದಿನಂತೆ ಮತ್ತೆ ಮೌನ,,,,, ನನ್ನ ಕೆನ್ನೆಯ ಮೇಲೆ ಒಂದೇ ಒಂದು ಹನಿ

ನವೆಂಬರ್ 17, 2016

ಕೇರಳದ ಮಡಿಲಲ್ಲಿ ಮಲಗಿ ನಿದ್ರಿಸಲು ಹವಣಿಸಿದ ರಾತ್ರಿ, ಚಂದ್ರ ಎಂದಿಗಿಂತ ದೊಡ್ಡದಾಗಿ ಹೊಳೆಯುತ್ತಿದ್ದ, ಅವನನ್ನು ನೋಡಲು ಕೋಟ್ಯಂತರ ಕಣ್ಣುಗಳು ಎಡೆಬಿಡದೆ ಕಾಯುತ್ತಿದ್ದವು,,,ಅದರಲ್ಲಿ ಆಕೆಯ ಕಣ್ಣೂ ಇತ್ತು,,,,ನಾನು ಕೇರಳದಲ್ಲಿ ಇದ್ದಿದ್ದರೆ ಅಲ್ಲಿನ ನದಿಯ ಪಕ್ಕ ಇದ್ದು ಚಂದ್ರನಿಗೆ ಕ್ಯಾಮರಾ ಇಟ್ಟು ಕಾಯುತ್ತಿದ್ದೇನೆ ಎಂಬ ಭ್ರಮೆ ಅವಳಿಗೆ,,,,,,,

ಚಂದ್ರನನ್ನೇ ದಿಟ್ಟಿಸುತ್ತಾ ನನ್ನ ಮೊಬೈಲಿಗೆ ಮೆಸೇಜು ಮಾಡಿದಳು,,,,

ಚಂದ್ರನಿಲ್ಲಿ ಶುಭ್ರವಾಗಿದ್ದಾನೆ, ಅಲ್ಲಿ ಹೇಗಿದೆ, ನೀ ಬದುಕಲು ಹವಣಿಸಿ ಹೋದ ಬೆಳಕಿನ ನಗರದಲ್ಲಿ!

ನಾನು ನಕ್ಕು ಸುಮ್ಮನಾದೆ,

ಏನೀ ನಗುವಿನ ಅರ್ಥ??

ನಾನು ಈಗಲೂ ಕೇರಳದಲ್ಲಿಯೇ ಇದ್ದೇನೆ,,,, ಆದರೆ ಅದೇಕೋ ಚಂದ್ರನನ್ನು ನೋಡುವ ಮನಸ್ಸಿಲ್ಲ, ಆತ ನನ್ನವನಲ್ಲ ಎಂಬ ಭಾವ ಕಾಡುತ್ತಿದೆ,

ಕೇರಳದಲ್ಲಿದ್ದೀಯ,,, ಎಲ್ಲಿ? ಯಾವಾಗ ಬಂದೆ, ಹೇಗೆ !!!

ಏನೋ ಸ್ವಲ್ಪ ಕೆಲಸದ ಮೇಲೆ, ಇವತ್ತು ಬೆಳಿಗ್ಗೆ ಬಂದೆ,

ಮರೆತಂತಿದೆ ನಮ್ಮನ್ನೆಲ್ಲ,,,

ನನ್ನೇ ನಾನು ಮರೆತಾಗಿದೆ, ನಾನು ಬದುಕಲು ಹೋದ ನಗರದಲ್ಲಿ, ಯಾರು ಬದುಕಿಲ್ಲ,,,, ಎಲ್ಲರೂ ಬದುಕಿದಂತೆ ನಟಿಸುತ್ತಿದ್ದಾರೆ,,,,,,,, ಮೌನ ಸವಾರಿಯಾಗಿದೆ,,,,

ಧೈರ್ಯ ಕಳೆದುಕೊಂಡಿದ್ದೀಯ ನೀನು,,,,,, ಬಾ ಈಗಲೇ ಮನೆಗೆ, ಅಂದು ನೀ ನೆಟ್ಟು ಹೋದ ಹಸಿರು ಸಸಿ ಎಷ್ಟು ಎತ್ತರಕ್ಕೆ ಬೆಳೆದಿದೆ ನೋಡುಬಾ,,,,,,, ಅಮ್ಮನೂ ನಿನ್ನನ್ನು ಕೇಳುತ್ತಿದ್ದಾರೆ,,,,,,, ಅಪ್ಪ ಆಗಾಗ ನೆನೆಯುತ್ತಾರೆ,,,,,, ನೀನು ಬಹಳ ಇಷ್ಟ ಪಡುತ್ತಿದ್ದ ಕಾಲುದಾರಿ ಈಗ ಮತ್ತಷ್ಟು ಹಸಿರಾಗಿದೆ, ನಾನು ದಿನವೂ ನೀರು ಚಿಮುಕಿಸುತ್ತೇನೆ,

ಇಲ್ಲ ಗೆಳತೀ, ನನಗೆ ಬರುವ ಧೈರ್ಯವಿಲ್ಲ, ಮತ್ತೆ ನಾನು ಹಸಿರನ್ನು ಪ್ರೇಮಿಸಿ ಇಲ್ಲೇ ಅಂಟಿಕೊಳ್ಳುವ ಭಯವಿದೆ,,,, ಅಮ್ಮನಿಗೆ ನನ್ನ ಇರುವಿಕೆ ತಿಳಿಸಬೇಡ,

ಹಹ,,,,, ಹೇ ನೀನು ನೀನಾಗಿ ಉಳಿದಿಲ್ಲ, ನಿನ್ನೊಳಗೊಂದು ಕತ್ತಲೆಯ ಭೂತ ಕಾಡುತ್ತಿದೆ, ನಗರಕ್ಕೆ ಹೊಂದಿಕೊಳ್ಳುವ ನಿನ್ನ ಮನಸ್ಥಿತಿ ನಿನ್ನನ್ನು ಬದುಕಿನಿಂದ ದೂರ ಕರೆದೊಯ್ಯುತ್ತಿದೆ,,,,,,,ಅದು ಹಾಗಿರಲಿ,,, ಅಮ್ಮನಿಗೆ ನೀ ಹೇಳಬೇಡ ಎನ್ನುವ ಮುಂಚೆಯೇ ನೀ ಬಂದದ್ದು ಹೇಳಿಬಿಟ್ಟೆ,,,,,,,

ಹೌದಾ,,,,,, ಏನು ಮಾಡಲಿ,,,,,,,,,, ಮೌನ,,,,,,,

ಅಯ್ಯೋ ನಿನ್ನ ಮೌನ ಕೇಳಿ ಕೇಳಿ ಸಾಕಾಗಿದೆ ನನಗೆ,,,,,,, ಅಣ್ಣ ಕೇಳ್ತಾ ಇದ್ದ, ಅವನೊಂದಿಗೆ ನೀ ಈಜಲು ಹೋಗ್ತಾ ಇದ್ದ ಹೊಳೆಯಲ್ಲಿ ಮೊನ್ನೆ ದೊಡ್ಡ ಮೀನು ಸಿಕ್ಕಿತ್ತು,,,,,, ನಿನ್ನನ್ನು ಬಹಳ ನೆನೆಸಿಕೊಂಡ,,,,, ಅವನಿಗಾಗಿಯಾದರು ಬಂದು ಹೋಗು,,,,,ನೋಡು ಎಷ್ಟು ಅಹಂಕಾರ ನಿನಗೆ, ಇಲ್ಲೇ ಹತ್ತಿರದಲ್ಲೇ ಇದ್ದರೂ ಮನೆಗೆ ಬರುತ್ತಿಲ್ಲ,,,,,

ಹಹ,,,,,,, ಹೌದು,,,, ಅತಿಯಾಗಿದೆ ಅಹಂಕಾರ ನನಗೆ,,,,,,

ಮಾತಿಗೆ ಮಾತು ಉತ್ತರವಲ್ಲ,,,,,,,, ನೆನಪಿಟ್ಟುಕೋ,,,,

ನಾನೇ ನಿನಗೆ ಹೇಳಿದ್ದು ಅಲ್ವ,,,,,,,

ನೀನು ಹೇಳಿದ ಮಾತ್ರಕ್ಕೆ,,,,, ನಾನು ನಿನಗೆ ಹೇಳ್ಬಾರದ??

ಅಯ್ಯೋ ಆಯ್ತು ಮಹರಾಯ್ತಿ, ಹೇಳು ಕೇಳ್ತೇನೆ,,,,,

ಇನ್ನು ಅರ್ಧ ಗಂಟೆಯಲ್ಲಿ ಅಣ್ಣ ನೀನಿರುವಲ್ಲಿಗೆ ಬಂದು ನಿನ್ನನ್ನು ಕರೆದುಕೊಂಡು ಬರುತ್ತಾನೆ,,,,,,,, ಬಂದು ಊಟ ಮಾಡಿ ಹೋಗು,,,,,,

ಅಯ್ಯೋ ನಿನ್ನಾ,,,,,,,,, ಹೇಗೆ ಗೊತ್ತಾಯಿತು ನಿನಗೆ ನಾನು ಎಲ್ಲಿ ಉಳಿದುಕೊಂಡಿದ್ದೇನೆ ಎಂದು,,,,,

ಅದನ್ನು ಹುಡುಕೋದು ಕಷ್ಟ ಅಲ್ಲ,,,,, ಡ್ಯಾಮಿಗೆ ಹೋಗುವ ದಾರಿಯ ದೊಡ್ಡ ದೊಡ್ಡ ಮರಗಳ ಮಧ್ಯದ ಆ ಚಿಕ್ಕ ಹೋಟಿಲಿನ ಯಾವುದೋ ಒಂದು ರೂಮಿನ ಬಾಲ್ಕಾನಿಯಲ್ಲಿ ಕುಳಿತು ಪಕ್ಕದ ಕಾಡನ್ನೂ ಹಾಗು ಮಿಂಚು ಹುಳಗಳನ್ನ ನೋಡ್ತಾ ಇರ್ತೀಯ, ಅಲ್ವ,,,,,, ನೋಡು ಇನ್ನು ಹತ್ತು ನಿಮಿಷದಲ್ಲಿ ಅಣ್ಣ ಬೈಕಿನಲ್ಲಿ ಬರ್ತಾನೆ,,,,,,,

ಅಯ್ಯೋ,,,,,, ನಂದು ಊಟಾ ಆಯಿತು,,,,,

ಸುಳ್ಳು ಹೇಳಬೇಡ, ಒಂದು ವೇಳೆ ಸತ್ಯವೇ ಆದರೂ,,,,,,, ನೀನು ನಮ್ಮ ಮನೆಯಲ್ಲಿ ಒಮ್ಮೆ ಹತ್ತು ಮೀನು ಫ್ರೈಯನ್ನು ಒಂದೇ ಸಲಕ್ಕೆ ತಿಂದಿದ್ದು ಮರೆತಿಲ್ಲ, (ನಾಲಿಗೆ ಹೊರ ಹಾಕಿದ ಸ್ಮೈಲಿ)

ಆಯಿತು ಮಾರೇತಿ ಬರ್ತೇನೆ,,,,,,,,

ಮೀನಿನ ಪರಿಮಳ,,,,,, ಆ ಕಾಲುದಾರಿ,,,,,, ಆ ಹಂಚಿನ ಮನೆಯ ಮಾಡಿನಲ್ಲಿ ಸುಳಿದ ಚಂದ್ರನ ಬೆಳಕು,,,,,, ಅವಳ ನಗು,,,,,,, ಅವಳ ಅಮ್ಮನ ಮೃದುತ್ವ,,,,,,, ಅಣ್ಣನ ಪ್ರೀತಿ,,,,,,,ನಾನ್ಯಾರು ಎನ್ನುವ ಪ್ರಶ್ನೆಗೆ ಪ್ರೇಮದ ಉತ್ತರ,,,,,,,,,,,

ಊಟದ ಬಳಿಕೆ,,,,, ಅಣ್ಣನ ಬೈಕು ಹತ್ತಿ, ಟಾರ್ಚು ಹಿಡಿದು, ರಾತ್ರಿಯ ಮೀನು ಹಿಡಿಯುವ ಸಾಹಸಕ್ಕೆ ಹೊರಟೆವು,,,,,, ರಾತ್ರಿ ಹನ್ನೆರಡರ ಹೊತ್ತಿಗೆ ನಮಗೆ ನಾಲ್ಕೈದು ಹಾವುಗಳು ಎದುರಾದವು,,,,, ಅರ್ಧ ಕೆಜಿಯಷ್ಟು ಮೀನು ಸಿಕ್ಕಿತು,,,,,,,, ಅಷ್ಟನ್ನು ತಂದು ಮನೆಯಲ್ಲಿಟ್ಟು ನನ್ನನ್ನು ಹೋಟೆಲಿನ ರೂಮಿಗೆ ಬಿಟ್ಟು ಹೋದ,,,,,,, ಬೆಳಿಗ್ಗೆ ಏಳುವಷ್ಟರಲ್ಲಿ ಅಣ್ಣ ಮತ್ತೆ ಹಾಜರು,,,,,,, ಮನೆಯಲ್ಲಿ ತಿಂಡಿ,, ಜೊತೆಗೆ ಕೊಬ್ಬರಿ ಎಣ್ಣೆಯಲ್ಲಿ ಕರಿದ ಮೀನು,,,,,,, ನನಗೆ ಇಷ್ಟವಾದ ಪುಟ್ಟು-ಕಡಲೆ,,,,,,,, ಅದೇ ಪ್ರೇಮ,,,,,

ಅಂದು ಸಂಜೆ ಆಕೆ ನನ್ನ ಬೆನ್ನಿಗೆ ಗುದ್ದಿದಳು,,,, ಅದೇ ನಿಷ್ಕಲ್ಮಶ ನಗು,,,,,,,, ಹೊರಡುವಾಗ,,,,,,,,, ನನ್ನ ಬಸ್ಸಿಗೆ ಟಾಟಾ ಮಾಡಲು ಅವರೆಲ್ಲ ಹಾಜರು,,,,,,,,,, ಅವರೆಲ್ಲರ ಅಷ್ಟು ಪ್ರೇಮಕ್ಕೆ,,,,,,,, ಗೆಳೆತನಕ್ಕೆ,,,,,,, ಆತ್ಮೀಯತೆಗೆ,,,,,, ನಾನೇನು ಹಿಂತಿರುಗಿ ಏನನ್ನು ಕೊಡಬಲ್ಲೆ ? ಅಷ್ಟರಲ್ಲಿ ಅವಳ ಹಾಗು ಅಣ್ಣನ ಮೆಸೇಜು,,,,,,,, ಕಾಡು ಪ್ರಾಣಿ ಊರಿನಲ್ಲಿ ಖುಷಿಯಾಗಿರಲಿ ಎಂದು,,,,,,,

ನಾನು ಎಂದಿನಂತೆ ಮತ್ತೆ ಮೌನ,,,,, ನನ್ನ ಕೆನ್ನೆಯ ಮೇಲೆ ಒಂದೇ ಒಂದು ಹನಿ,,

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: