Skip to content

ಬದಲಾದ ಜೀವನ ಪಥ

ನವೆಂಬರ್ 29, 2016

BBMkannada ದಿಂದ ಆಯ್ದುಕೊಂಡ ಬರಹ,

ಬರಹದಲ್ಲಿದ್ದ ದಿಟ್ಟ ಮಹಿಳೆಯ ಕಥೆ ಮನಸೆಳೆಯಿತು

ಹೈಸ್ಪಿಡ್ ನಲ್ಲಿ ಬಸ್ ಬರುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಯುವತಿಯೊಬ್ಬಳು ಬಸ್ ಎದುರಿಗೆ ನಿಂತಿದ್ದಾಳೆ. ಕೆಲವೇ ಕ್ಷಣಗಳಲ್ಲಿ ತನ್ನ ಸಾವು ಖಚಿತ. ಸತ್ತ ಮೇಲೆಯಾದರೂ ನೆಮ್ಮದಿಯಾಗಿ ಇರಬಹುದು ಎಂದು ಆ ಯುವತಿ ಮನಸ್ಸಿನಲ್ಲಿ ಭಾವಿಸಿದ್ದಾಳೆ. ಅದೇ ಸಮಯದಲ್ಲಿ ಆಕೆಯ ಅಂತರಾತ್ಮ…
ಸತ್ತು ನೀನು ಸಾಧಿಸುವುದಾರೂ ಏನು? ಬದುಕಿ ನಿನ್ನ ಅಸ್ತಿತ್ವವನ್ನು ನಿರೂಪಿಸು ಎಂದು ಬುದ್ಧಿಮಾತು ಹೇಳುತ್ತದೆ. ತಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ತನ್ನ ಆಲೋಚನೆಯನ್ನು ಬಿಟ್ಟು, ಅದೇ ಬಸ್’ಗೆ ಕೈ ಅಡ್ಡ ಇಟ್ಟು ನಿಲ್ಲಿಸಿ, ಬಸ್ ಹತ್ತಿ, ಟಿಕೆಟ್ ತೆಗೆದುಕೊಂಡು ಕುಂತಳು ಸೆಲ್ವಿ.

14 ವರ್ಷಕ್ಕೆ ಅಕೆಯ ತಾಯಿತಂದೆಯರು ಮದುವೆ ಮಾಡಿ ಅತ್ತೆ ಮನೆಗೆ ಕಳುಹಿಸಿದರು. ಮೊದಲೇ ಚಿಕ್ಕ ವಯಸ್ಸು, ಕುಡಿದು ಬರುವ ಗಂಡ, ಸಣ್ಣಪುಟ್ಟ ವಿಷಯಕ್ಕೆ ಬೈಯುವ ಅತ್ತೆ. ಜೊತೆಗೆ ನಾದನಿಯರ ಕಾಟ ಬೇರೆ…! ಮತ್ತೆ ಮತ್ತೆ ವರದಕ್ಷಿಣೆ ತರುವಂತೆ ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೆ ಸಾವಿಗೆ ಶರಣಾಗುವುದೆ ವಾಸಿ ಎಂದು ಆ ನಿರ್ಣಯ ತೆಗೆದುಕೊಂಡಿದ್ದಳು ಸೆಲ್ವೀ.

ಬಸ್ ಲಾಸ್ಟ್ ಸ್ಟಾಪ್ ಗೆ ಬಂದು ನಿಂತಿದೆ. ಅಕೆಯ ಮೈಮೇಲಿನ ಬಟ್ಟೆ ಬಿಟ್ಟರೆ ಮತ್ತೇನು ಇಲ್ಲ. ಆದರೆ ತಾನು ಬದುಕಬೇಕು, ನಾನೇನು ಎಂದು ಸಾಧಿಸಿ ತೋರಿಸಬೇಕು ಎಂಬ ಅತ್ಮಸ್ಥೈರ್ಯ ಮಾತ್ರ ಇದೆ. ಮೊದಲು ಒಂದು ಹೋಟೆಲ್’ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಆದರೆ ಒಂಟಿ ಹೆಣ್ಣು ಅಂದರೆ ಸಾಕು ಕಣ್ಣಿನಲ್ಲೇ ರೇಪ್ ಮಾಡುವ ಹಾಗೆ ನೋಡುವ ಸಮಾಜ. ಮೊದಮೊದಲು ಅಕೆಗೆ ತುಂಬ ಭಯವಾಗುತ್ತಿತ್ತು. ಆದರೆ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಧೈರ್ಯವಾಗಿ ಮುಂದೆ ಸಾಗಿದಳು.

ಹೀಗೆ ಕೆಲಸಕ್ಕೆ ಹೋಗುವಾಗ ಮಹಿಳೆಯೊಬ್ಬಳು ಬೆಂಜ್ ಕಾರುನ್ನು ಡ್ರೈವಿಂಗ್ ಮಾಡುವುದನ್ನು ನೋಡಿ ಮಹಿಳೆಯರೂ ಡ್ರೈವಿಂಗ್ ಮಾಡುತ್ತಾರಾ..? ಎಂದು ಅಚ್ಚರಿಯಾಯಿತು ಸೆಲ್ವೀಗೆ. ಅದನ್ನು ತನ್ನ ಜೊತೆ ಕೆಲಸ ಮಾಡುವ ಮತ್ತೊಬ್ಬರಿಗೆ ಹೇಳಿದಾಗ ಅದೇನು ದೊಡ್ಡ ವಿಷಯ… ಇಲ್ಲೇ ಪಕ್ಕದಲ್ಲಿ ಡ್ರೈವಿಂಗ್ ಸ್ಕೂಲ್ ಇದೆ, ಬೆಳಿಗ್ಗೆ ಎಷ್ಟು ಜನ ಮಹಿಳೆಯರು ಅಲ್ಲಿಗೆ ಕಲಿಯಲು ಬರುತ್ತಾರೆ ನೋಡು ಎಂದು ಸೆಲ್ವೀ ಜೊತೆ ಕೆಲಸಮಾಡುವಕೆ ಹೇಳಿದಳು.

ಆಕೆ ಹೇಳಿದಂತೆ ಸೆಲ್ವೀ ಡ್ರೈವಿಂಗ್ ಸ್ಕೂಲ್ ಹತ್ತಿರ ಹೋದಳು. ಹೋಗಿ ಬರುವವರಿಂದ ಬ್ಯುಸಿಯಾಗಿದೆ ಆ ಡ್ರೈವಿಂಗ್ ಸ್ಕೂಲ್. ಅವರೆಲ್ಲರನ್ನೂ ನೋಡುತ್ತಾ ನಿಂತಳು ಸೆಲ್ವೀ. ಸೆಲ್ವೀಯನ್ನು ನೋಡಿದ ಅಲ್ಲಿನ ವ್ಯಕ್ತಿಯೊಬ್ಬ ಏನು ಬೇಕು? ಎಂದು ಕೇಳಿದ.
ನಾನು ಕೂಡ ಡ್ರೈವಿಂಗ್ ಕಲಿಯಬೇಕೆಂದಿದ್ದೆನೆ ಎಂದು ಹೇಳಿದಳು ಸೆಲ್ವೀ.  ಫೀಜು 5000 ಎಂದು ಹೇಳಿದ. ತಾನು ಕೂಡಿಟ್ಟ ಹಣವನ್ನು ಕೊಟ್ಟಳು. ಮರುದಿನ ಕಾರ್ ಸ್ಟೀರಿಂಗ್ ಹಿಡಿದಳು ಸೆಲ್ವೀ. ಪಕ್ಕದ ಸೀಟಿನಲ್ಲಿ ಕಾರು ಕಲಿಸುವ ವ್ಯಕ್ತಿ. ಕಾರು ನಿಧಾನವಾಗಿ ಮೂವ್ ಆಯಿತು……1,2,3,4,5,6,7……….
ಸರಿಯಾಗಿ ಒಂದು ವಾರದ ನಂತರ ಸೆಲ್ವೀ ಒಬ್ಬಳೇ ಕಾರನ್ನು ಓಡಿಸುವುದನ್ನು ಕಲಿತಳು. ಟಾಪ್ ಗೇರ್, ರಿವರ್ಸ್ ಗೇರ್… ಎಲ್ಲಾ ಗೇರ್’ಗಳನ್ನು ಕಲಿತಳು. ಈಕೆ ಕರ್ನಾಟಕದ ಮೊದಲ ಮಹಿಳಾ ಟ್ಯಾಕ್ಸಿ ಡ್ರೈವರ್, ಮೊದಲ ಮಹಿಳಾ ಲಾರಿ ಡ್ರೈವರ್, ಮೊದಲ ಮಹಿಳಾ ಟ್ರಾಕ್ ಡ್ರೈವರ್…. ಈಗ ಆಕೆಯ ಅಂತರಾತ್ಮ ಹೇಳುತ್ತಿದೆ…..
ನೀನು ಸಾಧಿಸಿದೆ ಸೆಲ್ವೇ….!!!

ಹೊಸ ಜೀವನವನ್ನು ಆರಂಭಿಸಿದ ಸೆಲ್ವೇ, ಇನ್ನೊಬ್ಬರು ಇಷ್ಟಪಟ್ಟು ವಿವಾಹವಾಗಿದ್ದಾಳೆ. ಈಗ ಆಕೆಗೆ ಇಬ್ಬರು ಮಕ್ಕಳು, ಅವರ ಉತ್ತಮ ಭವಿಷ್ಯಕ್ಕೆ ಈಗಿನಿಂದಲೇ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾಳೆ.

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: