Skip to content

ಗಿರಿರಾಜರಿಗೊಂದು ಸಿಟ್ಟಿನ ಪತ್ರ

ಡಿಸೆಂಬರ್ 25, 2016

ಗಿರಿರಾಜರ ಫೇಸ್ ಬುಕ್ ಸ್ಟೇಟಸ್

ನನಗೆ ಸಿನಿಮ ಮಾಡೋದು ಬರುತ್ತೆ. ಆದರೆ ಅದನ್ನ ಮಾರೋದು ಬರಲ್ಲ. ಇವತ್ತಿನ ಮಾತಿನ ಮಾಯಾಮೋಡಿ ಕಾಲದಲ್ಲಿ ನನ್ನಂತಹ ಪ್ಯಾದೆ ಎಷ್ಟು ಅಸಹಾಯಕ ಅನ್ನುವುದು ಜಟ್ಟ ಬಿಡುಗಡೆ ಸಮಯದಲ್ಲೇ ನನಗೆ ಗೊತ್ತಾಗಿತ್ತು. ಬಡ ತಂದೆಯೊಬ್ಬ ಕಷ್ಟಪಟ್ಟು ತನ್ನ ಮಗುವನ್ನ ದೊಡ್ಡ ಶಾಲೆಯೊಂದಕ್ಕೆ ಸೇರಿಸಿ, ಅವರ ಪೇರೆಂಟ್ ಟೀಚರ್ ಮೀಟಿಂಗಲ್ಲಿ ಇಂಗ್ಲಿಷಲ್ಲಿ ಮಾತಾಡೋ ಜನರೆದುರು ಪಡುವ ಪಾಡೇ ನನ್ನದು. ತನ್ನ ಮಗುವನ್ನೂ ಸಹ ಎಲ್ಲರು ತಿರುಗಿ ನೋಡುವ ಹಾಗೆ ಮಾಡಬೇಕು ಅಂತ ಆಸೆ ಪಟ್ಟರೂ. ಏನು ಮಾಡುವುದು ಹೇಗೆ ಮಾಡುವುದು ಅಂತ ಗೊತ್ತಾಗದೆ ವಿವಶವಾಗುತ್ತೇವೆ, ಸಮಸ್ಯೆ ನನ್ನದೆ. ಯಾರಾದರು ಹೇಗ್ ಬಂದಿದೆ ಸಿನಿಮ ಅಂತ ಕೇಳಿದರೆ, ಚೆನ್ನಾಗಿ ಬಂದಿದೆ ಅನ್ನುವ ಧೈರ್ಯವೂ ನನಗಿಲ್ಲ. ಯಾಕಂದ್ರೆ ನನಗೆ ಬರೀ ನನ್ನ ತಪ್ಪುಗಳೇ ಕಾಣಿಸುತ್ತಿರುತ್ತವೆ. ಅದರೆ ಪ್ರೀತಿ ಕುರುಡು. ಅದಕ್ಕೆ ನಿಮ್ಮೆ ಪ್ರೀತಿ ನಿಮ್ಮನ್ನ, ನನ್ನ ಐಬಿನ ಕಡೆಗೆ ಕುರುಡಾಗಿಸಿ, ನೀವು ನನ್ನ ಮೇಲೆ ನಂಬಿಕೆ ಇಡುವ ಹಾಗೆ ಮಾಡಿದೆ. ಈ ಕೆಳಗಿನ ಚಿತ್ರ ‘ಅಮರಾವತಿ’ ಚಿತ್ರದ ಕೊನೆಯ ದಿನದ ಫೋಟೊ. ಈ ಸಿನಿಮ ನನ್ನ ಅತ್ಯಂತ ಪ್ರಾಮಾಣಿಕ ಚಿತ್ರ. ಒಂದು ವೇಳೆ (ಪರಿಸ್ಥಿತಿಗಳು ನೋಡಿದರೆ ಹಾಗೆ ಅನಿಸುತ್ತೆ) ನಾನು ಮತ್ತೆ ಸಿನಮ ಮಾಡಲು ಆಗದೆ, ಇದೇ ನನ್ನ ಕೊನೆಯ ಸಿನಿಮ ಆದರೂ, ನೀವೇನಂತೀರೋ ಗೊತ್ತಿಲ್ಲ, ಆದರೆ ನನಗೆ ಒಬ್ಬ ಕನ್ನಡದ ನಿರ್ದೇಶಕನಾಗಿರೋದರ ಬಗ್ಗೆ ಈ ಚಿತ್ರ ಹೆಮ್ಮೆ ತಂದಿದೆ. ಆ ಬಡ ತಂದೆಯ ಮಗು ಕಷ್ಟ ಪಟ್ಟು ಓದಿ, ವೇದಿಕೆ ಹತ್ತಿದಾಗ ಆಗುವ ಭಾವವೇ ನನ್ನಲ್ಲಿದೆ. ಟೀಸರ್ ಶೀಘ್ರದಲ್ಲೇ ಬರಲಿದೆ. ‘ಇದ್ದಾಗ ಇಷ್ಟು. ಉಳಿದದ್ದು ನಾಳೆಯ ಮಾತು’

amaravathi

 

*******************************************************************

ಗಿರಿರಾಜ್ ಬಿ ಎಂ ಎಂಬ ಸಿನಿಮಾ ಮಾಂತ್ರಿಕ ಚಿಕ್ಕ ನೋವಿನಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ, ನನಗೆ ಗಿರಿರಾಜ್ ಬಿ ಎಂ ಎಂಬ ವ್ಯಕ್ತಿಯ ಪರಿಚಯವಾದದ್ದು “ನವಿಲಾದವರು” ಸಿನಿಮಾದ ಮೂಲಕ, ಪರಿಚಯ ಎಂದರೆ ಭೇಟಿಯ ಪರಿಚಯವಲ್ಲ, ಸಿನಿಮಾ ಮಾಡುವವರಾಗಿ ಅವರು ಜನರಿಗೆ ಪರಿಚಯಿಸಲ್ಪಟ್ಟಿದ್ದರು, ಅಂತಹ ಜನರಲ್ಲಿ ನಾನೊಬ್ಬ

ಒಂದು ಚಿಕ್ಕ ಕಥೆಯನ್ನು ಹೇಗೆ ಪರಿಣಾಮಕಾರಿಯಾಗಿ ದೃಶ್ಯಕ್ಕೆ ಅಳವಡಿಸಬಹುದು ಎಂಬುದನ್ನು ಈ ವ್ಯಕ್ತಿ ಆ “ನವಿಲಾದವರು” ಸಿನಿಮಾದ ಮೂಲಕವೇ ನಮಗೆ ಪ್ರೂವ್ ಮಾಡಿ ಆಗಿದೆ. ಜಟ್ಟ, ಮೈತ್ರಿಗಳಲ್ಲಿ ಅದರ ಇನ್ನಷ್ಟು ಹೊಳಪು ಸಿಕ್ಕಿದೆ,,,,,,, ಇನ್ನೇನಿದ್ದರೂ ಹೊಸ ಹೊಳವುಗಳ ಪಯಣ ಅಷ್ಟೇ ಬಾಕಿ.

ಆದರೆ ಇವತ್ತಿನ ಗಿರಿರಾಜರ ಫೇಸ್ಬುಕ್ ಸ್ಟೇಟಸ್ ಮನಸ್ಸಿಗೆ ನೋವು ತಂದಿದೆ,

ಅವರ ಹೊಸ ಚಿತ್ರ “ಅಮರಾವತಿ” ಯಾ ಶೂಟಿಂಗ್ ಮುಗಿದಿದೆ, ಅವರ ತಂಡದ ಭಾವಚಿತ್ರದ ಜೊತೆಗೆ ಒಂದಷ್ಟು ನೋವಿನ ಛಾಯೆಯ ನುಡಿಗಳನ್ನು ಅವರು ಆಡಿದ್ದಾರೆ.

ಅವರ ನುಡಿಗಳಿಗೆ ಸಿನಿಮಾ ಪ್ರೇಮಿಯಾಗಿ ಹಾಗು ಸಿನಿಮಾ ಮಾಡಲು ಹೊರಟಿರುವ ಹುಳದ ರೀತಿಯ ಚಿಕ್ಕ ನಿರ್ದೇಶಕನಾಗಿ ಒಂದೆರಡು ಮಾತಗಳು.

” ಸರ್ ನಿಮ್ಮ ಆ ನೋವಿನ ಮಾತಿಗೆ ಕಾರಣ ನನಗೆ ಗೊತ್ತಿಲ್ಲ,

ಆದರೆ ನಿಮ್ಮ ಸಿನಿಮಾಗಳನ್ನು ನೋಡಿ, ಅದರಿಂದ ಅಂಶಗಳನ್ನು ಆರಿಸಿ, ಸಿನಿಮಾ ಮೇಕಿಂಗ್ ಕಲಿಯುತ್ತಿರುವ ನನ್ನಂತಹ ಎಷ್ಟೋ ಜನರಿಗೆ ನೀವು ಸ್ಪೂರ್ತಿಯಾಗಿದ್ದೀರಿ,

ನಿಮ್ಮ ನವಿಲಾದವರು, ಮೈತ್ರಿ, ಎಷ್ಟೊಂದು ಸಾಮಾಜಿಕ ಕಳಕಳಿ ಉಳ್ಳ ಚಿತ್ರಗಳು ಸಾರ್, ಈ ನಿಮ್ಮ ಸಿನಿಮಾ ಜರ್ನಿಯಿಂದಾ, ನಿಮ್ಮ ಶಕ್ತಿ ಕುಂದುತ್ತದೆ ಎಂದಾದರೆ, ಕಲಿಕೆಯ ಹಂತದ ನಮ್ಮಂತವರ ಮನಸ್ಥಿತಿಗೆ ಎಷ್ಟೊಂದು ಭಯವಾಗಬಹುದಲ್ಲವೇ ಸಾರ್,

ಪೇರೆಂಟ್ ಟೀಚರ್ ಮೀಟಿಂಗ್ನಲ್ಲಿ ತೊದಲಿದ ಮಾತ್ರಕ್ಕೆ ಅಪ್ಪ,,,, ಅಸಹಾಯಕ ಅಪ್ಪನೆಂದು ಹೇಗಾಗುತ್ತದೆ ಸರ್, ಅಪ್ಪನೆಂಬ ಮಹಾಜೀವಿ, ತಾನು ದುಡಿದು, ನಮ್ಮ ಮುಖದ ನಗುವಿಗೆ ಕಾಯುವ ಭಾವನೆಯ ಮುಂದೆ, ಪೇರೆಂಟ್ ಟೀಚರ್ ಮೀಟಿಂಗ್ನಲ್ಲಿ ಅಪ್ಪ ಮೌನಿಯಾಗಿದ್ದು ಸಾಸಿವೆ ಕಾಳಿನ ಲೆಕ್ಕಕ್ಕೂ ಬರುವುದಿಲ್ಲ ಸರ್,

ಅಪ್ಪನ ತೋಳ್ಬಲದ ಶಕ್ತಿ – ನಿಮ್ಮ ಸಿನಿಮಾಗಳು.

ಏನು ಹೇಳಬೇಕೆಂದು ತೋಚದೆ ಇರುವ ಈ ಸಂಧರ್ಭದಲ್ಲಿ, ಒಂದಂತೂ ಸತ್ಯ “ನಿಮ್ಮ ಸಿನಿಮಾ ಶಕ್ತಿ, ನಮಗೆ ನೀವು ನೀಡುವ ದೊಡ್ಡ ಶಕ್ತಿ”

ನಿಮ್ಮ ಎದೆಯ ಒಳಗೆ ಕುಳಿತು ಈ ಸ್ಟೇಟಸ್ ಬರೆಯಲು ಸಹಾಯ ಮಾಡಿದ ಆ ವ್ಯಕ್ತಿ ಆದಷ್ಟು ಬೇಗ ಸಾಯಲಿ,,,,,,,, ಪ್ರತಿಕೂಲ ಪರಿಸ್ಥಿಯಲ್ಲಿ ನವಿಲಾದವರು ಸಿನಿಮಾ ಮಾಡಿಸಿದ ಆ ಆತ್ಮವಿಶ್ವಾಸದ ವ್ಯಕ್ತಿ, ಮೈ ಕೊಡವಿ ಮೇಲೆ ಬರಲಿ.

ಇನ್ನಷ್ಟು ಸಿನಿಮಾಗಳು ಮೂಡಿಬರಲಿ.

ಅಮರಾವತಿ ಅಮರವಾಗಲಿ,

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: