Skip to content

ಮತ್ತೆಂದೂ ಹಿಂತಿರುಗಿ ಬಾರೆಯ ಓ ನನ್ನ 2016

ಡಿಸೆಂಬರ್ 31, 2016

ಬದುಕೆಂದರೆ ಅದು ಒಂದು ಬಾರಿ ಮಾತ್ರ ಎಂದು ಚಿಕ್ಕಂದಿನಲ್ಲಿ ಎಲ್ಲೋ ಓದಿದ ನೆನಪು, ಅದೇ ಒಂದು ಸೋಜಿಗ ಎನಿಸಿತ್ತು ನನಗಾಗ, ಕಳೆದು ಒಂದು ಕ್ಷಣ ಮತ್ತೆಂದೂ ಬಾರದು ಎಂದು ತಿಳಿದಾಗ ಮನಸಿಗೆ ಬಹಳ ನೋವಾಗಿತ್ತು. ಬಾಲ್ಯ ಕಳೆದು, ನಿಧಾನವಾಗಿ ಯವ್ವನಕ್ಕೆ ಕಾಲಿಟ್ಟಾಗಲೇ ಗೊತ್ತಾಗಿದ್ದು, ಅಯ್ಯೋ ನಿನ್ನೆ ಮೊನ್ನೆ ತನಕ ಇದ್ದ ಬಾಲ್ಯ ಕಳೆದು ಹೋಯಿತೇ ಎಂದು. ಬದುಕಿನ ಹಾದಿಯಲ್ಲಿ ನಾವೆಷ್ಟು ಕಳೆದುಕೊಂಡೆವು? ಎನ್ನುವ ಯೋಚನೆ ಮಾಡಿದಾಗಲೇ ಗೊತ್ತಾಗುವುದು, ನಾವು ಕಳೆದುಕೊಂಡಿದ್ದೆಲ್ಲ ಹಿಂದೊಂದು ದಿನ ನಮ್ಮ ಜೊತೆಯೇ ಇತ್ತಲ್ಲ ಎಂದು,

ಕಳೆದು ಹೋದ ನೋವುಗಳು
ಕಳೆದು ಹೋದ ನಲಿವುಗಳು
ಕಳೆದು ಹೋದ ವಸ್ತುಗಳು
ಕಳೆದು ಹೋದ ಸಂಬಂಧಗಳು
ಇಷ್ಟೆಲ್ಲಾ ಕಳೆಯುವುದರ ನಡುವೆ ನಾವು ಮತ್ತೆ ಮತ್ತೆ ಏನನ್ನೋ ಪಡೆದುಕೊಂಡಿದ್ದೇವೆ, ಈ ಕಳೆ-ಕೂಡುಗಳ ಮಧ್ಯ ಬದುಕು ಮಾತ್ರ ಗಟ್ಟಿಯಾಗಿ ನಿಲ್ಲುತ್ತದೆ ಅದೊಂದು ದೊಡ್ಡ ವಿಸ್ಮಯ.
ಆದರೆ ಜಗದ ನಿಯಮ “ಎಲ್ಲವನ್ನು ಕಳೆಯುವುದು ಮಾತ್ರ”, ಎಂತಹ ಅಮುಲ್ಯ ವಸ್ತುವೂ ಇಲ್ಲಿ ಶಾಶ್ವತವಲ್ಲ, ನಮ್ಮನ್ನೂ ಸೇರಿಸಿ ಎಲ್ಲವೂ ನಶ್ವರ,,,,,, ಹೀಗೆ ಯೋಚಿಸಿದರೆ ಒಂದೊಮ್ಮೆ ದುಃಖವಾಗುತ್ತದೆ, ಆದರೆ ಮತ್ತದೇ ಬದುಕು ಎಲ್ಲವನ್ನು ಮರೆಸಿ ಎತ್ತರಕ್ಕೆ ಏರಿಸುತ್ತದೆ ಏರಿಳಿತ ಕೊನೆಗೊಂಡ ದಿನ ಎಲ್ಲವೂ ತಟಸ್ಥ,,,,
ಇಷ್ಟೆಲ್ಲಾ ನೆನಪಾಗಲು ಕಾರಣ, ಈ ೨೦೧೬, ಇವೆಲ್ಲ ಮಾನವರಾದ ನಾವೇ ಮಾಡಿಕೊಂಡ ದಿನಾಂಕ, ವರ್ಷಗಳಾದರೂ, ಈ ಎಲ್ಲಾ ಸಂಖ್ಯೆಗಳು ನಮ್ಮ ಬದುಕಿನಲ್ಲಿ ಭಾವನಾತ್ಮಕವಾಗಿ ಎಷ್ಟೊಂದು ಬೆರೆತಿವೆ ಅಬ್ಬಾ, ನೆನೆಗುದಿಗೆ ಬಿದ್ದ ನೆನಪುಗಳೆಲ್ಲ ತಟ್ಟನೆ ಧಾವಿಸಿ ಬಂದು ಹಾವಳಿ ಇಟ್ಟಾಗ, ಅದೇನು ಮಾಡಲೂ ತೋಚದ ಸನ್ನಿವೇಶ,
ಆದರೆ ಹಳೆಯದೆಲ್ಲ ಇಲ್ಲೇ ಎಲ್ಲೋ ಮುಗಿದು, ಹೊಸದಾಗಿ ಏನಾದರೂ ಸಂಭವಿಸಬಹುದೇ ಎನ್ನುವ ಕಾತುರ ಸದಾ ಇರುತ್ತದೆ. ಹೊಸ ವರ್ಷದ ಮೇಲೆ ಏನೋ ಒಂತರ ಪ್ರೀತಿ, ಹಳೆಯ ವರ್ಷದ ಮೇಲೆ ಇನ್ನೊಂತರ ಪ್ರೀತಿ,
ಹೆಚ್ಚೇನು ಹೇಳಲು ಇಲ್ಲ,,,,,,,
ಶುಭವನ್ನು ತಾ ಹೊಸ ವರ್ಷವೇ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
-GK Naveen Kumar
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: