Skip to content

ಸಿನಿಮಾ ಹೆತ್ತವನ ಜೊತೆ ಕುಳಿತು ನೋಡಿದ ಕ್ಷಣ

ಜನವರಿ 2, 2017
     ನಿನ್ನೆ ಸಂಜೆ ಹೊಸ ವರ್ಷದ ಪ್ರಯುಕ್ತ ಕಲಾಗ್ರಾಮದಲ್ಲಿ “ಜಟ್ಟ” ಸಿನಿಮಾದ ಪ್ರದರ್ಶನ  ಇತ್ತು, ಸಿನಿಮಾವನ್ನು ಹೆತ್ತವರೇ ಇದನ್ನು ನಮಗೆ ಹೊಸವರ್ಷದ ಕೊಡುಗೆಯಾಗಿ ಕೊಟ್ಟರು, ಕರ್ನಾಟಕದಲ್ಲಿ ಜಟ್ಟ ಬಿಡುಗಡೆಯಾದಾಗ, ನಾನು ಹೊಟ್ಟೆ ಪಾಡಿನ ಕೆಲಸದ ಮೇಲೆ ಕೇರಳದಲ್ಲಿದ್ದೆ, ಹಾಗಾಗಿ ಸಿನಿಮಾ ನೋಡಲಾಗಲಿಲ್ಲ, ಆದ್ದರಿಂದ ಈ ಅಪರೂಪದ ಅವಕಾಶ ಖುಷಿ ಕೊಟ್ಟಿತು.
,
        ಸ್ವಲ್ಪ ಬೇಗವೇ ಹೋಗಿ ಕಲಾಗ್ರಾಮದ ಸುತ್ತಲಿನ ಪ್ರಕೃತಿಯನ್ನು ನೋಡುತ್ತಾ ನಿಂತಾಗ, ದೂರದಲ್ಲಿ ಗಿರಿರಾಜರು ಕುಟುಂಬದ ಜೊತೆ ಮೆಟ್ಟಿಲಿಳಿದು ಬರುತ್ತಿದ್ದರು. ನಾನು ಪರಿಚಯ ಹೇಳಿಕೊಂಡು ಹಸ್ತಲಾಘವ ಮಾಡುತ್ತಾ ಏನು ಮಾತನಾಡುವುದು ಎಂದು ತಿಳಿಯದೆ ಬ್ಬೆ ಬ್ಬೆ ಎನ್ನುತ್ತಿದ್ದಾಗ, ಅವರೇ, ಕಾರ್ಯಕ್ರಮ ಸಮಯ ಹಾಗು ಜಾಗವನ್ನು ಹೇಳಿ ಅಲ್ಲಿಂದ ನಿಧಾನವಾಗಿ ನಡೆದು ಪ್ರಕೃತಿಯ ಮಧ್ಯ ಎಲ್ಲೋ ಕಾಣೆಯಾದರು, ಪುಟ್ಟ ಮಗ ಮಾತ್ರ ನೆಲದ ಇಂಚಿಂಚನ್ನೂ ಬಿಡದೆ ಓಡುತ್ತಾ, ಬಾಲ್ಯವನ್ನು ಹಾಗು ಆ ಸುಂದರ ಸಂಜೆಯನ್ನು ಆಸ್ವಾದಿಸುತ್ತಿದ್ದ.
                 ನಂತರ ಅಲ್ಲಿಯೇ ಆಡಿಟೋರಿಯಂ ನ ಮುಂದೆ ನಿಂತು ನೋಟಿಸ್ ಬೋರ್ಡ್ ದಿಟ್ಟಿಸುತ್ತಿದ್ದೆ, ಆಗಲೇ ಮೆಟ್ಟಿಲನ್ನು ಹಾರಿಕೊಂಡು, ಪಟ-ಪಟನೆ ಉಲ್ಲಾಸದಲ್ಲಿ “ಸಂಚಾರಿ ವಿಜಯ್” ಬರುತ್ತಿರುವುದು ಕಂಡಿತು, ರಾಷ್ಟ್ರ ಪ್ರಶಸ್ತಿ ವಿಜೇತ ನಟನೊಬ್ಬ ಇಷ್ಟೊಂದು ಸರಳವಾಗಿ ಬರುತ್ತಿದ್ದಾರಲ್ಲ ಎನ್ನುವ ಆಲೋಚನೆ ಬರುವಷ್ಟರಲ್ಲಿ ಅವರು ನನ್ನ ಮುಂದೆ ನಿಂತಿದ್ದರು. ನಾನು ಸಂಕೋಚದಿಂದ ಮುಗುಳ್ನಕ್ಕೆ, ಅವರು ಗಾಂಭೀರ್ಯದಿಂದ ನಕ್ಕು, ಗಿರಿರಾಜ್,,,,,, ಸಿನಿಮಾ,,,, ಎಂದು ಕೇಳಿ ಮೌನವಾದರು, ನಾನು ವಿವರಗಳನ್ನು ಕೊಟ್ಟೆ, ಅವರೂ ಕೂಡ ಪ್ರಕೃತಿಯ ಮಧ್ಯಕ್ಕೆಲ್ಲೋ ಮಾಯವಾದರು, ಅಬ್ಬಾ ಎಷ್ಟು ಆಕ್ಟಿವ್ ಇದಾರಲ್ಲ ಎಂದುಕೊಳ್ಳುತ್ತಾ ಹೊರಬಂದೆ, ಸಂಜೆಯ ಸೂರ್ಯ ಚಿನ್ನದ ಬಣ್ಣವನ್ನು ನಮ್ಮ ಮೇಲೆ ಚೆಲ್ಲುತ್ತಿದ್ದ, ಆ ವಾತಾವರಣ ರಂಗೇರಿತ್ತು ಅನೇಕ ಜನರ ಆಗಮನ ಆಯಿತು, ದೂರದ ಕಾರೊಂದು ಹತ್ತಿರ ಬಂದು, ಅದರಿಂದ ಸರಳ ವ್ಯಕ್ತಿಯೊಬ್ಬರು ಕೆಳಗಿಳಿದು, ಎಲ್ಲರಿಗೂ ಹೊಸವರ್ಷದ ಶುಭಾಷಯ ಕೋರಿದರು, ಅವರೇ ನಮ್ಮೆಲ್ಲರ ಮೆಚ್ಚಿನ ನಟ “ಅಚ್ಚುತ್ ಕುಮಾರ್”. ನಾನು ವಿಸ್ಮಿತನಾಗಿ ಸುಮ್ಮನೆ ನೋಡುತ್ತಿದ್ದೆ.
,
           ಸಿನಿಮಾ ನೋಡಲು ಮೇಲ್ಮನೆಗೆ ಬಂದೆವು, ಸಿನಿಮಾಗೆ ಮುಂಚೆ ಸ್ವಲ್ಪ ಗಜಿಬಿಜಿ ಮಾತುಗಳು, ಗಿರಿರಾಜ್ ಹೇಳಿದರು “೨೦೧೬ ರಲ್ಲಿ ನನ್ನ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ, ಆದ್ದರಿಂದ, ಹಳೆಯ ಸಿನಿಮಾವನ್ನೇ ತೋರಿಸುತ್ತಿದ್ದೇನೆ,,,,,,,,, ಜಟ್ಟ ಸಿನಿಮಾ ಎಲ್ಲರೂ ಮೆಚ್ಚಿ, ಯಾರೂ ನೋಡದ ಸಿನಿಮಾ” ಎಂದಾಗ ನಾವೆಲ್ಲಾ ನಕ್ಕೆವು ಅವರ ಮಾತಿನ ಹಿಂದಿನ ಕನ್ನಡಿಗ ನಿರ್ದೇಶಕನ ಹತಾಶ ಭಾವ ನನಗೆ ಕುಕ್ಕಿತು,,,,,,
,

       ಸಿನಿಮಾ ಪ್ರಾರಂಭ, ಟಕ್ಕನೆ ಹಾರಿ ಬಂದ ಸುಂದರ ಹುಡುಗಿ ಜನರ ಮಧ್ಯ ಎಲ್ಲೋ ಕುಳಿತರು,,,,,,,, ಅವರೇ ಲೂಸಿಯಾ ಖ್ಯಾತಿಯ ಶ್ರುತಿ ಹರಿಹರನ್,

                ಸಂಸ್ಕೃತಿಗೆ ಮುನ್ನುಡಿ, ಭಾರತೀಯತೆಗೆ ವ್ಯಾಖ್ಯಾನ, ಹೀಗೆ ತೆರೆದುಕೊಂಡ “ಜಟ್ಟ” ಎನ್ನುವ ಪ್ರಾಮಾಣಿಕ ಫಾರೆಸ್ಟ್ ಗಾರ್ಡಿನ ಕಥೆ ನಿಧಾನವಾಗಿ ನಮ್ಮ ಇಡೀ ಭಾರತೀಯ ಸಮುದಾಯದತ್ತ ತಿರುಗುತ್ತದೆ, ಬದುಕು ಎಂದರೆ, ಅದು ಪ್ರಕೃತಿ(ಇಲ್ಲಿ ಇದು ಕಾಡು ಹಾಗು ಅಲ್ಲಿನ ಪ್ರಾಣಿಗಳು) ಗಂಡು ಜೀವಿ, ಹೆಣ್ಣು ಜೀವಿ, ಇವರ ಸಂಘರ್ಷ, ಯಾರೋ ಹೇಳಿದ್ದನ್ನು ತಲೆಗೆ ತೆಗೆದುಕೊಂಡು ಹೆಣ್ಣಿಗೆ ಪಾಠ ಕಲಿಸುತ್ತೇನೆ ಎಂದು ಹೊರಡುವ “ಜಟ್ಟ” ನಿಧಾನವಾಗಿ ಸತ್ಯಕ್ಕೆ ತೆರೆದುಕೊಳ್ಳುತ್ತಾನೆ, ಹೆಣ್ಣು ಗಂಡೆಂಬ ದೇಹಗಳ ನಡುವೆ ಮನಸ್ಸು ಎನ್ನುವ ಕಾಮನ್ ಫ್ಯಾಕ್ಟರ್ ಇದೆ ಎನ್ನುವ ಸತ್ಯ ತೆರೆಯುತ್ತದೆ, ಕಾಡಿನ ಒಂಟಿತನ ಹಾಗು ಬೆಂಗಳೂರಿನ ಮಹಾನಗರಿಯ ಒಂಟಿತನ ಎರಡರಲ್ಲಿ ಕಾಡಿನ ಒಂಟಿತನವೇ ವಾಸಿ ಎನ್ನುವ ಬೆಳ್ಳಿಯ ಮಾತಿಗೆ ನಗು ಬರುತ್ತದೆ, ಹೆಣ್ಣಿನ ಮನಸ್ಸಾಗಿ, ಸಬಲತೆಗೆ ಹೋರಾಡುವ ಪ್ರತಿನಿಧಿಯಾಗಿ ಸುಕೃತಾ ವಾಗ್ಲೆ ಅಭಿನಯ ಮನಮುಟ್ಟುತ್ತದೆ, (ನನಗಾಗ ರಾಹುಲ ಸಂಸ್ಕೃತಾಯನ ಬರೆದ “ವೋಲ್ಗಾ ಟು ಗಂಗಾ” ಎಂಬಾ ಪುಸ್ತಕದ ನೆನಪಾಯಿತು, ಸಂಸಾರ ಆಳುವ ಅಂದಿನ ಹೆಣ್ಣು)  ಸಾಮಾನ್ಯ ಜನರ ಪ್ರತಿನಿಧಿಯಾಗಿ ಜಟ್ಟ ಕಾಡುತ್ತಾನೆ,,,,,,, ಸಾಮಾನ್ಯನ ಮೇಲೆ ಹೇಗೆ ಭಾವನೆಗಳನ್ನು ಸಂಸ್ಕೃತಿಯನ್ನು ಹೇರಲಾಗುತ್ತದೆ, ಯಾವ ರೀತಿ ಆಲೋಚನೆಗಳಿಂದ ನಾವು ಮುಕ್ತಿ ಹೊಂದಬಹುದು ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟಂತೆ ಮಾಡಿ ಚಿಂತನೆಗೆ ಹಚ್ಚುತ್ತದೆ ಸಿನಿಮಾ. ಒಳ್ಳೆತನದ ಆಫೀಸರ್, ತನ್ನ ಮಕ್ಕಳನ್ನು ಕರೆದು, ಜಟ್ಟನ ಪರಿಚಯ ಮಾಡಿಸಿ,,,, ಜಟ್ಟನಂತಾಗಿ ಎನ್ನುವಾಗ, ಜಟ್ಟನ ಒಳಮನಸು ತನ್ನ ತಪ್ಪಿನ ಬಗ್ಗೆ ಆಲೋಚಿಸುತ್ತಿರುತ್ತದೆ,,,,,,,
,
         ಏನೂ ಓದದ ಜಟ್ಟ ಪ್ರಕೃತಿಯನ್ನು ಕಾಯುತ್ತಾನೆ. ನಾಗರೀಕ ಎನಿಸಿಕೊಂಡವ ಪ್ರಕೃತಿಯನ್ನು ಕೊಲ್ಲುತ್ತಾನೆ, ನಿಜವಾದ ನಾಗರೀಕ ಯಾರು? ಪ್ರಶ್ನೆ ಹುಟ್ಟುತ್ತದೆ.
,
         ಭಯಕ್ಕೂ, ಪ್ರೇಮಕ್ಕೂ ಇರುವ ಸಣ್ಣ ತೆಳು ಪರದೆ ಹರಿದು, ಕಟ್ಟಿಕೊಂಡವಳನ್ನು ಪ್ರೇಮದ ಮಡಿಲಿಗೆ ಅರ್ಪಿಸುವ ಜಟ್ಟನ ಗುಣ, ಕಾಡದೆ ಬಿಡದು,
,
        ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಗೋಜಿಗೆ ಹೋಗದ, ಸಾಗರಿಕ,,,,,, ಸತ್ಯದ ಅರಿವಾದಾಗ ನೋವಿನ ಮಡಿಲಿಗೆ ಜಾರಿದಂತೆ ಭಾಸವಾಗುತ್ತದೆ.
,
        ಸಹಜ ಮಾನವನ ಗುಣಗಳೊಂದಿಗೆ ಸಿನಿಮಾ ವಿಜೃಂಭಿಸುತ್ತದೆ, ಯಾವುದೇ ಭಾವಗಳನ್ನು ಅತಿರೇಖವಾಗಿ ಹೇರಲ್ಲ,,,,,,,,,,, ಎಲ್ಲರೂ ಮನುಷ್ಯರೇ ಎನ್ನುವ ಭಾವ ಖಂಡಿತಾ ಇದೆ, ಸಿನಿಮಾ ಶುರುವಾದಾಗ ಇದ್ದ ನನ್ನ ಮನಸಿನ ಸ್ಥಿತಿಗೂ, ಮುಗಿದಾಗ ಇದ್ದ ಮನಸಿನ ಸ್ಥಿತಿಗೂ, ಅಜಗಜಾಂತರ, ನನ್ನಂತಹ ದಡ್ಡನಿಗೆ ಒಂದು ಬಾರಿಗೆ ಈ ಸಿನಿಮಾ ದಕ್ಕುವುದಿಲ್ಲ ಎನ್ನುವ ಭಾವ ಕಾಡಿತು, ಮತ್ತೊಮ್ಮೆ ನೋಡಬೇಕು.
,
,
ಸಿನಿಮಾ ಮುಕ್ತಾಯ,,,,,,,,, ಆಲೋಚನೆ ಆರಂಭ
,
ನಗುತ್ತ ಸ್ಟೇಜಿಗೆ ಬಂದರು, ಸಿನಿಮಾವನ್ನು ಹೆತ್ತವರು,,,,, ಮುಗುಳ್ನಗೆಯೊಂದಿಗೆ ಮಾತು ಶುರು,,,,ಏನೋ ಒಂದು ಸಾರ್ಥಕತೆಯ ಮನೋಭಾವ,,,,,,,, ಸಿನಿಮಾದ ತಂಡವನ್ನು ಪರಿಚಯಿಸಿಕೊಟ್ಟರು,,,,,,,,,,,,
15820600_1045159052250643_1822832235_o
ಮುಂದಿನ ಚಿತ್ರ “ಅಮರಾವತಿ” ಹಾಗು “ತುಂಡ್ ಹೈಕ್ಳ ಸಾವಾಸ” ಚಿತ್ರಗಳ ತುಣುಕುಗಳನ್ನು ತೋರಿಸಿದರು, ಅಮರಾವತಿ ಕಾಡುವ ಕೆಲವು ಡಯಲಾಗ್ ಗಳೊಂದಿಗೆ ಮನ ಸೆಳೆಯಿತು,,,,,, ಅಚ್ಚುತ್ ಕುಮಾರ್,,,,,, ಮಹಾನಗರದ ಸ್ವಚ್ಛತೆಯ ರಾಯಭಾರಿಯಂತೆ ಕಂಡರು,,,,,,,, ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದವರು ಹಾಗು ಪುಟಾಣಿ ಹುಡುಗ ಇಬ್ಬರ ಪರಿಚಯ ಆಯಿತು,,,,,,,,,,,
,
,
ಈ ಸಿನಿಮಾ ನೋಡದವರು, ಹೇಗಾದರೂ ಮಾಡಿ ನೋಡಿ,,,,,,, ಹೊಸ ಹೊಳವು ಹುಟ್ಟುವುದು ಖಂಡಿತಾ
,
,
ಹೊರಡುವ ಮುನ್ನ ವಿಧಾಯ,,,,,,,,,
,
,
ಬಹಳಷ್ಟು ಕನಸುಗಳು ಅಲ್ಲೆಲ್ಲ ಹುಟ್ಟಿ ಮೇಲೇರುತ್ತಿದ್ದುದನ್ನು ನೋಡಿದೆ
,
,
ಜಟ್ಟ ಸಿನಿಮಾ ಹೆತ್ತವರು, ಮುಗುಳ್ನಗೆಯಲ್ಲಿ ಎಲ್ಲರನ್ನೂ ಬೀಳ್ಕೊಡುತ್ತಿದ್ದರು,,,,,,,
,
,
ಬೆಂಗಳೂರಿನ, ಕತ್ತಲೆ ಹಾಗು ಚಳಿ ಬಂದು ನನ್ನನ್ನು ಅಪ್ಪಿ ಹಿಡಿಯಿತು
,
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: