Skip to content

ಅಯ್ಯೋ ಬೆಂಗಳೂರ್ಯಾಕೆ ಅಳುತ್ತಿದೆ ?

ಜನವರಿ 5, 2017

ಬೆಂಗಳೂರು ಎನ್ನುವ ಈ ಊರಿಗೆ, ಏನೋ ಒಂದು ಸೆಳೆತ ಇದೆ, ಜೀವ ಇದೆ,,,,,,,,,, ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲೊಂದು ಸುಂದರ ಭಾವವಿದೆ,,,,,, ಬೆಂಗಳೂರು ಎಂಬ ಹೆಸರು ಕೇಳಿದ ತಕ್ಷಣವೇ ಇಡೀ ಭಾರತೀಯರ ಕಣ್ಣಲ್ಲಿ ಒಂದು ಮಿಂಚು ಸಂಚಾರವಾಗುತ್ತದೆ,,,,,,,ಬೆಂಗಳೂರು ಟ್ರಾಫಿಕ್ಕು, ಬೆಂಗಳೂರು ತುಂಬಾ ರಶ್, ಬೆಂಗಳೂರು ಹಾಗೆ, ಬೆಂಗಳೂರು ಹೀಗೆ ಎಂದು ಹೇಳುವವರೆಲ್ಲರೂ, ಬೆಂಗಳೂರಿನಲ್ಲೇ ಮೊಳೆ ಹೊಡೆದುಕೊಂಡು ಬದುಕುತ್ತಿದ್ದಾರೆ, ಹಾಗು ಅವರೆಲ್ಲ ಖುಷಿಯಾಗಿಯೇ ಇದ್ದಾರೆ…..

ಅಂತಹ ಪ್ರೇಮಮಯ ಬೆಂಗಳೂರಿಗೆ, ಹೊಸ ವರ್ಷದ ದಿನವೇ ನೋವು,,,,,,,

ಊರಿಗೆ ಜೀವ ತುಂಬುವ ಮಾನವ ಪ್ರಾಣಿಗಳು ನಾವುಗಳು,,,,,,, ಕೃತಕತೆಯ ಬೆನ್ನು ಹತ್ತಿ ಹೋದ ಪರಿಣಾಮ, ನಮ್ಮ ಮನಸ್ಸಿಗೆ ಆಹ್ಲಾದ ತುಂಬಲು ಆಲ್ಕೋಹಾಲ್-ಲೇ ಬೇಕು, ಸ್ವಾಭಾವಿಕತೆ ಕಳೆದುಕೊಂಡು ಎಲ್ಲದಕ್ಕೂ ಡ್ರಗ್ಗನ್ನು
(ಔಷಧ ಗಳನ್ನೂ ಸೇರಿಸಿ) ಅವಲಂಭಿಸಿದ್ದೇವೆ,,,,,,,,,,, ಅದೇನೇ ಇರಲಿ ಇವೆಲ್ಲ ಅವರವರ ಆಲೋಚನೆಗೆ ಬಿಟ್ಟಿದ್ದು,,,,,,,,

ಖುಷಿಯ ಪಾಲ್ಗೊಳ್ಳುವಿಕೆಯಲ್ಲಿ, ಮತ್ತೊಬ್ಬರಿಗೆ ನೋವು ಕೊಡುವುದು ಎಂತಹ ನಾಗರೀಕತೆ? ಹೆಣ್ಣಾಗಲಿ ಗಂಡಾಗಲಿ, ತಮ್ಮ ಪಾಡಿಗೆ ತಾವು ನಲಿದು, ವಿಶೇಷ ದಿನವನ್ನು ಸ್ವಾಗತಿಸುವುದ ಬಿಟ್ಟು, ಹೀಗೇಕೆ ಮಾಡಿದರು?

ಎಲ್ಲ ತಪ್ಪುಗಳನ್ನು ಮಾನವರು ಮಾಡಿ ಊರಿನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದ್ಯಾಕೆ?

ಈ ಎಲ್ಲ ಘಟನೆಗಳಿಗೆ,,,,,,,,, ಸರ್ಕಾರ ಕಾರಣವಲ್ಲ,,,,, ಹೆಣ್ಣು ಕಾರಣವಲ್ಲ,,,,, ಗಂಡು ಕಾರಣವಲ್ಲ,,,,,,, ಬಟ್ಟೆ ಕಾರಣವಲ್ಲ,,,,,, ಕುಡಿತ ಕಾರಣವಲ್ಲ,,,,,,,,,,,

ಕಾರಣ, ನಮ್ಮ ಮನಸ್ಥಿತಿಗಳು ಅಷ್ಟೇ,,,,,, ಶಿಕ್ಷಣ ಸಿಗದ ದಡ್ಡರಾಗಲಿ, ಅಥವಾ ಊಟ ಸಿಗದ ಬಡವರಾಗಲಿ, ಅಥವಾ ರೋಗದಿಂದ ನರಳಿದ ರೋಗಿಗಳಾಗಲಿ ಅಂದು ಅಲ್ಲಿ ಇರ್ಲಿಲ್ಲ,,,,,, ಇದ್ದವರೆಲ್ಲ ಸುಶಿಕ್ಷಿತರು, ಸಮಾಜದ ಪ್ರಜೆಗಳು,,,,,,,,,

ಅಬ್ಬಾ ನಮ್ಮಗಳ ಅಂತರಂಗಕ್ಕೆ ಹಿಡಿದ ಕನ್ನಡಿ,,,,,,,,,,,,,

ಮನುಷ್ಯನ ಭಾವನೆಗಳನ್ನು, ಕಾಮನೆಗಳನ್ನು, ಇನ್ನೊಬ್ಬರ ಮೇಲೆ ಹೇರುವುದು ಬಹಳ ದೊಡ್ಡ ಅಪರಾಧ, ಅವರವರ ಆಸೆಗೆ ತಕ್ಕಂತೆ ಅವರವರು ಬದುಕಲಿ, ಹೆಣ್ಣಾದರೂ ಅಷ್ಟೇ, ಗಂಡಾದರೂ ಅಷ್ಟೇ, ಅವರವರ ಸ್ಪೇಸ್ ಅವರವರಿಗೆ ಇರಬೇಕು,,,,,,,,,,

ಮಾನವ ಪ್ರಾಣಿಗಳು ಮಾಡಿದ ತಪ್ಪಿಗೆ, ಸುಂದರ ಊರನ್ನು ಬೈಯ್ಯೋದು ಬೇಡ,

ಬೆಂಗಳೂರು ಸದಾ ಹಸಿರಾಗಿರಲಿ,,,,,,

ಬೆಂಗಳೂರಿನ ಕಣ್ಣಿನಲಿ ಕಣ್ಣೀರು ತರಿಸುವುದು ಬೇಡ,,,,

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: