Skip to content

ಕಿರಿಕ್ ಪಾರ್ಟಿ – ಮೋಡಿ

ಜನವರಿ 16, 2017

ಒಂದಷ್ಟು ದಿನ ನನ್ನ ಹೊಟ್ಟೆ ಪಾಡು ಕೇರಳದಲ್ಲಿತ್ತು, ಆಗೆಲ್ಲ ನಾನು ಮಲಯಾಳಂ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೆ,
ಮಲಯಾಳಿ ಗೆಳೆಯರ ಬಳಗದಿಂದ ಆಗಾಗ ಕೇಳಿಬರುತ್ತಿದ್ದ ಅಪಸ್ವರ “ನಿಮ್ಮ ಕನ್ನಡದಲ್ಲಿ ಇಂತಹ ಸುಂದರ ಚಿತ್ರಗಳು ಇವೆಯಾ” ಎಂದು

ಲೂಸಿಯಾ ಬಂದಾಗ, ನಾನು ಅವರಿಗೆಲ್ಲ ಲೂಸಿಯಾದ ಬಗ್ಗೆ ಹೇಳಿ ಹೆಮ್ಮೆ ಪಟ್ಟಿದ್ದೆ, ಆ ನಂತರದ ದಿನಗಳಲ್ಲಿ, ಉಳಿದವರು ಕಂಡಂತೆ, ಜಟ್ಟ, ಗೋದಿಬಣ್ಣ, ಮೈತ್ರಿ,  ಹೀಗೆ ಹಲವಾರು ಚಿತ್ರಗಳು ಕನ್ನಡದಿಂದ ನನ್ನ ಪರವಾಗಿ ವಾದ ಮಾಡಲು ಸಹಾಯ ಮಾಡಿದವು, ಮಲಯಾಳಿ ಗೆಳೆಯರೆಲ್ಲ “ಹೊ ಪರವಾಗಿಲ್ಲ, ಕನ್ನಡದಲ್ಲೂ ಒಳ್ಳೆಯ ಪ್ರಯತ್ನಗಳು ನಡೆಯುತ್ತಿವೆ” ಎಂದು ನನ್ನ ಟ್ರಾಕಿಗೆ ಬಂದು ನಿಂತಿದ್ದರು,

ಉಪೇಂದ್ರರ ಸಿನಿಮಾಗಳನ್ನು ಅವರಿಗೆ ತೋರಿಸಿದಾಗಲಂತೂ, ಅಬ್ಬಾ ಸಿನಿಮಾಗಳನ್ನು ಹೀಗೂ ಮಾಡಬಹುದೇ ಎಂದು ಸಂಭ್ರಮಿಸಿದ್ದರು, ಅವರೆಲ್ಲರೂ ಉಪೇಂದ್ರರಿಗೆ ಫ್ಯಾನ್ ಈಗ.

ಒಂದು ಸಿನಿಮಾ ಹೇಗೆಲ್ಲ ನಮ್ಮನ್ನು ಗೆಲ್ಲಿಸುತ್ತದೆ ಅಲ್ಲವೇ,,,

ಹೀಗೆ ನಾರ್ತ್ ಕಡೆಯ ಹುಡುಗನಿಗೆ ಉಪೇಂದ್ರ ಸಿನಿಮಾಗಳ ಹುಚ್ಚು ಹಿಡಿಸಿದ, “ಕಿರಿಕ್ ಪಾರ್ಟಿಯ” ಅನುಭವಗಳು ನನಗೆ ಕನ್ನಡಿಯಂತೆ ನಿಂತವು,,,,,,,,,

ಕಿರಿಕ್ ಪಾರ್ಟಿ ಸಿನಿಮಾದ ಸನ್ನಿವೇಶಗಳು —- ನನ್ನದೇ ಕಾಲೇಜಿನಲ್ಲಿ ನಾನು ಓಡಾಡಿದಂತೆ ಅನುಭವ, ಹೇಳಿ ಕೇಳಿ ನನ್ನದೂ ಮೆಕ್ಯಾನಿಕಲ್ ಇಂಜಿನೀರಿಂಗ್, ಇಡೀ ಕಾಲೇಜಿನಲ್ಲಿ, ನಮ್ಮ ಡಿಪಾರ್ಟ್ಮೆಂಟ್ ಅಂದರೆ ಏನೋ ಭಯ-ಭಕ್ತಿ (ಭಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ, ಭಯವಂತೂ ಖಂಡಿತಾ), ನಾವು ಏನೇ ಮಾಡಿದರೂ ವಿಚಿತ್ರ ಹಾಗು ವಿಶೇಷ,

ಆದರೆ ಜಾಸ್ತಿ ಹೊತ್ತು ಕ್ಲಾಸ್ ರೂಮಿನಲ್ಲಿ ಪಾಠ ಕೇಳುತ್ತಿದ್ದವರು ನಾವು ಮಾತ್ರ, ನಮ್ಮ ಕ್ಲಾಸಿನ ಕಾರಿಡಾರಿನ ಕಡೆಗೆ ನಡೆದು ಬರಲು, ಅಥವಾ ಕಾರಿಡಾರಿನಲ್ಲಿ ಹಾದು ಹೋಗಲು, ಬೇರೆ ಬ್ರಾಂಚಿನವರಿಗೆ ಏನೋ ಒಂದು ರೀತಿಯ ಸಂಕಟ, ಹ ಹ,

ಹೇಳುತ್ತಾ ಹೋದರೆ ಮುಗಿಯದು,,,

ನೇರವಾಗಿ ಸಿನಿಮಾಗೆ ಬರುತ್ತೇನೆ, ಒಂದು ಒಳ್ಳೆಯ ಸಿನಿಮಾ ನೀಡಿದ್ದಕ್ಕೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ತಂಡಕ್ಕೆ ಧನ್ಯವಾದಗಳು, ಬಹಳ ಆಸ್ಥೆಯಿಂದ ಮಾಡಿದ ಸಿನಿಮಾ, ನಮಗೆಲ್ಲರಿಗೂ ಇಷ್ಟವಾಯಿತು,,,,

ಇನ್ನಷ್ಟು ಸಿನಿಮಾಗಳು ಮೂಡಿಬರಲಿ,

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: