Skip to content

ನಾಚಿಕೆ ಇಲ್ಲದ ಸಾಲುಗಳು – ೧೧

ಜನವರಿ 24, 2017

ಬಡತನವನ್ನು ಕಿತ್ತು ಒಗೆಯುತ್ತೇನೆ ಎಂದು ಬಂದವನೊಬ್ಬ
ರಾತ್ರೋ ರಾತ್ರಿ
ಬಡವನನ್ನು ಕೊಲೆ ಮಾಡಿ, ಪರಾರಿಯಾದ,

**********************************************

“ಪ್ರಾಣಿ ಹಿಂಸೆ ಸಲ್ಲದು” ಎನ್ನುವ
ಕಾರ್ಯಕ್ರಮದ ಕೊನೆಯಲ್ಲಿ
ಮಾಂಸದೂಟ ಎಲ್ಲರ ಮನಸೆಳೆದಿತ್ತು

**********************************************

ಸಿನಿಮಾದ ತೆರೆಯಲ್ಲಿ
ನಕ್ಕು ನಲಿಸಿದ ಹಾಸ್ಯ ಪಾತ್ರದಾರಿ
ಮರುದಿನ ಹಸಿವಿನಿಂದ ಸತ್ತಿದ್ದು, ತೆರೆ ಮೇಲೆ ಬರಲಿಲ್ಲ

**********************************************

ಆಗ :-
ಹಣ್ಣೆಲೆ ಉದುರುವಾಗ,
ಚಿಗುರೆಲೆ ನಗುತ್ತಿತ್ತು,

ಈಗ :-
ಹಣ್ಣೆಲೆ ಉದುರುವಾಗ
ಚಿಗುರೆಲೆ ಮೊಬೈಲ್-ನಲ್ಲಿ ಬ್ಯುಸಿ ಇತ್ತು

**********************************************

ಮುಂಚೆಲ್ಲ
ವ್ಯಕ್ತಿಯ ಮುಖವನ್ನು ನೆನಪಿಟ್ಟುಕೊಳ್ಳುತ್ತಿದ್ದರು,
ವ್ಯಕ್ತಿಯ ವ್ಯಕ್ತಿತ್ವ ನೆನಪಿಟ್ಟುಕೊಳ್ಳುತ್ತಿದ್ದರು,

ಈಗ
ವ್ಯಕ್ತಿಯ ಮುರ್ನಾಲ್ಕು ಮೊಬೈಲ್ ನಂಬರ್ ನೆನಪಿಡುವುದೇ ಕಷ್ಟ

,

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: