Skip to content

ಮರೆಯಲಾದೀತೆ ಆ ಮುಂಜಾನೆ

ಜನವರಿ 25, 2017
 ಕೊಯಮತ್ತೂರಿನಿಂದ ಮೈಸೂರಿಗೆ ಬರುವಾಗ ಸತ್ಯಮಂಗಲಂ ಘಾಟಿ ಸಿಗುತ್ತದೆ, ಘಾಟಿಯ ರಸ್ತೆ ಹಾವಿನ ಹಾಗೆ ಸುರುಳಿಯಾಗಿ ಮಲಗಿ, ತನ್ನ ಮೂಲಕ ನೂರಾರು ವಾಹನಗಳನ್ನು ಹರಿಬಿಡುತ್ತದೆ, ರಾತ್ರಿಯ ವೇಳೆ ಆ ರಸ್ತೆಯಲ್ಲಿ ಬರುವಾಗ ಸಿಗುವ ಮಜವೇ ಬೇರೆ,,,,,,, ಸುತ್ತಲಿನ ಕಪ್ಪು ಕತ್ತಲಿನ ಜೊತೆ ನಿಧಾನವಾಗಿ ಬೆಟ್ಟ ಏರುವಾಗ, ದೂರದಲ್ಲಿ ಯಾವುದೋ ಊರಿನ ಲೈಟುಗಳು ನಕ್ಷತ್ರದಂತೆ ಹೊಳೆಯುತ್ತಿರುತ್ತವೆ, ಜೊತೆಗೆ ಒಂದಿಷ್ಟು ಚಳಿ ಇರುತ್ತದೆ,
,
      ಆಗಾಗ ಕಾಡಾನೆ ಎದುರಾಗುವುದೂ ಉಂಟು. ಮರಿ ಆನೆಗಳು ಕಂಡರೆ ಏನೋ ಒಂದು ಖುಷಿ, ಅವು ಬಹಳ ಚಂಚಲವಾಗಿ ಆಡುತ್ತಿರುತ್ತವೆ, ಹತ್ತಿರ ಹೋಗಿ ಎತ್ತಿಕೊಂಡು ಮುತ್ತಿಡೋಣ ಎನ್ನುವಷ್ಟು ಮುದ್ದಾಗಿ ಕಾಣುತ್ತಿರುತ್ತವೆ, ಆದರೆ ಮರಿ ಆನೆಗಳು ಇದ್ದಾಗ ಸ್ವಲ್ಪ ಹುಷಾರಾಗಿ ಇರಬೇಕು ಏಕೆಂದರೆ ಪಕ್ಕದಲ್ಲೇ ಅದರ ತಾಯಿ-ಆನೆ ಕಾವಲಾಗಿ ನಿಂತಿರುತ್ತದೆ. ಸ್ವಲ್ಪ ಹೆಚ್ಚು ಕಮ್ಮಿ ಎನಿಸಿದರೂ ಆನೆ ಬಂದು ಅಟ್ಟ್ಯಾಕ್ ಮಾಡುವುದು ಗ್ಯಾರಂಟಿ. ಸ್ವಲ್ಪ ಜಾಸ್ತಿ ಲಕ್ ಇದ್ದರೆ ಕೆಲವೊಮ್ಮೆ ಜಿಂಕೆ ಕಾಣಸಿಗುತ್ತದೆ. ಇದೆ ಸತ್ಯಮಂಗಲಂ ಕಾಡಿನಲ್ಲಿ ವೀರಪ್ಪನ್ ತನ್ನ ಸಾಮ್ರಾಜ್ಯ ಸ್ಥಾಪಿಸಿ ಮೆರೆದಿದ್ದ.
,
      ಒಂದು ರಾತ್ರಿ ಇದೆ ತಿರುವು ಮುರುವು ರಸ್ತೆಯ ಮೂಲಕ, ಸಾಗಿ ಹೋಗುವಾಗ, ಹೊರಗಿನ ತಣ್ಣನೆಯ ಹವಾ ನನ್ನನ್ನು ಸವರಿ ಸವರಿ ಹೋಗುತ್ತಿತ್ತು, ಮೊಬೈಲ್ ತೆಗೆದು “ಸಂಗಾತಿ ನೀನು ದೂರಾದ ಮೇಲೆ” ಹಾಡನ್ನು ಕೇಳುತ್ತಾ ಕುಳಿತಿದ್ದೆ,,,,,,,,,,, ಏನೋ ಒಂತರ ಮಜ ಕೊಡುತ್ತಿತ್ತು,,,,,,,,,,,,, ಸುಂದರ ರಾತ್ರಿ, ಮುತ್ತಿಡುವ ತಂಗಾಳಿ, ವಾಹನದ ಲೈಟ್ ಬೆಳಕಿಗೆ ಅಡ್ಡ ಸಿಗುವ ಸಣ್ಣ ಪುಟ್ಟ ಚಿಟ್ಟೆಗಳು, ಆಗಾಗ ಕೈ ಸವರಿ ಹೋಗುವ ದಾರಿ ಬದಿಯ ಮರದ ಕೊಂಬೆಗಳು, ಎಲೆಗಳು, ಈ ಎಲ್ಲ ಅನುಭವ ಮನಸ್ಸಿನ ಆಳದಲ್ಲಿ ಗೊತ್ತಿಲ್ಲದಂತೆ ಉಲ್ಲಾಸ ತರಿಸುತ್ತಿತ್ತು, ಹೊರಗಿನ ಕಾಡನ್ನು ನೋಡುತ್ತಾ ನಿಧಾನವಾಗಿ ನಿದ್ರೆಗೆ ಜಾರಿದ್ದೆ, ಬೆಳಗಿನ ಜಾವ ನಾಲ್ಕು ಗಂಟೆಗೆ ಎಚ್ಚರವಾದಾಗ ಬಸ್ಸು ಕರ್ನಾಟಕದ ಗಡಿ ಬಾಗ ತಲುಪಿತ್ತು, ಇದ್ದಕಿದ್ದಂತೆ ಢಮಾರ್ ಶಬ್ಧ, ಬಸ್ಸಿನ ತುಂಬಾ ದೂಳು, ಏನೂ ಕಾಣುತ್ತಿರಲಿಲ್ಲ, ಏನೋ ಎಡವಟ್ಟಾಗಿದೆ ಎಂದು ತಕ್ಷಣಕ್ಕೆ ಅರಿವಾಯಿತು, ಆದರೆ ಏನೂ ಮಾಡಲಾಗದ ಪರಿಸ್ಥಿತಿ, ಹೃದಯ ಕಿತ್ತು ಬಾಯಿಗೆ ಬಂದ ಅನುಭವ, ಏನಾಯಿತು ನಿದ್ದೆಯಲ್ಲಿ ಇದ್ದವರೆಲ್ಲ ಏಳುವ ಮುನ್ನವೇ ಸಾಯುವರೇನೋ ಎಂಬ ಭಯ, ಯಾವುದೋ ಬ್ರಿಡ್ಜ್-ಯಿಂದ ಬಸ್ ಕೆಳಗೆ ಬೀಳುತ್ತಿದೆಯೇನೋ ಎಂದು ಗೆಸ್ ಮಾಡ್ತಾ ಇದ್ದೆ, ಟಕ್ಕನೆ ಬಸ್ ನಿಂತಿತು, ದೂಳು ನಿಧಾನಕ್ಕೆ ಕಡಿಮೆ ಆಯಿತು,,,,,,,, ಅಬ್ಬಾ ಎಲ್ಲರು ಬದುಕಿದ್ದೇವೆ, ಇದ್ದಕ್ಕಿದ್ದಂತೆ ಹಸುವೊಂದು ಬಸ್ಸಿಗೆ ಅಡ್ಡ ಬದಿದ್ದುರಿಂದ ಡ್ರೈವರ್ ಬಸ್ಸನ್ನು ತಿರುಗಿಸಿದರಂತೆ, ಆಗ ಬಸ್ ಡಿವೈಡರನ್ನು ಹಾರಿ ಇನ್ನೊಂದು ಬದಿಯ ರಸ್ತೆಗೆ ಹಾರಿ ನಿಂತಿತ್ತು,  ಹಸು ಏನು ಅರಿಯದೆ ಮಾಯವಾಗಿತ್ತು. ನಮ್ಮ ಜೀವ ನಮಗೆ ತಿರುಗಿ ಸಿಕ್ಕಿತ್ತು, ಸ್ವಲ್ಪ ದೂರದಲ್ಲೇ ಚಾಮರಾಜನಗರ ಎಂಬ ಬೋರ್ಡು ದೂಳು ತುಂಬಿ ಕಾಣಿಸುತ್ತಿತ್ತು.
,
ಏನೂ ಮಾಡಲು ತೋಚದ ಡ್ರೈವರನ ಪರಿಸ್ಥಿತಿ ನೆನೆದು ದುಃಖವಾಯಿತು, ಕೆಲವರು “ಸರಿಯಾಗಿ ಓಡ್ಸಪ್ಪ ಎಂದು ಡ್ರೈವರಿಗೆ ಬಯ್ಯುತ್ತಿದ್ದರು”, ಆದರೆ ನನಗೆ ಡ್ರೈವರಿನ ಮೇಲೆ ಸಿಟ್ಟು ಬರಲೇ ಇಲ್ಲ, ಏಕೆಂದರೆ ಇನ್ನೇನೋ ಆಗುವುದನ್ನು ಸಣ್ಣದರಲ್ಲೇ ಮುಗಿಸಿ ನಿಟ್ಟುಸಿರು ಬಿಡುತ್ತಿದ್ದ ಡ್ರೈವರ್, ಎಲ್ಲರನ್ನೂ ಒಮ್ಮೆ ತಿರುಗಿ ನೋಡಿದ, ಯಾರಿಗೂ ಏನೂ ಪೆಟ್ಟಾಗಿಲ್ಲ ಎಂದು ಖಾತ್ರಿ ಮ್,ಮಾಡಿಕೊಂಡು, ಯಾರ ಮಾತಿಗೂ ಪ್ರತ್ಯುತ್ತರ ಕೊಡದೆ ಇಳಿದು ಹೋಗಿ, ಬಸ್ಸಿನ ಸುತ್ತಲೂ ಪರಿಶೀಲಿಸಿದ. ಸಣ್ಣ ಹೊಟ್ಟೆ ಪಾಡು ಆತನದು, ಬಸ್ಸಿಗೆ ಏನಾದರೂ ಆದರೆ ಜವಾಬ್ದಾರಿ ಆತನದ್ದೇ ಅಲ್ಲವೇ, ತಿಂಗಳ ಸಂಬಳದಲ್ಲಿ ಕಟ್ ಮಾಡಿಬಿಡುವರೇನೋ ಎಂಬ ಭಯ. ಬಾಟಲಿಯಲ್ಲಿ ನೀರು ತಂದು ಗ್ಲಾಸನ್ನು ಸಂಪೂರ್ಣ ಒರೆಸಿದ, ಮತ್ತೆ ಪ್ರಯಾಣ ಪ್ರಾಂಭವಾಯಿತು, ಮೈಸೂರಿನಲ್ಲಿ ಬಸ್ ನಿಂತು, ನಿಧಾನಕ್ಕೆ ಬಸ್ಸಿನಿಂದ ಕೆಳಗೆ ಕಾಲಿಟ್ಟಾಗ, ಏನೋ ಖುಷಿ, ಏನೋ ತಲ್ಲಣ,,,,,,,, ಅಲ್ಲಿಂದ ನಿಧಾನವಾಗಿ ನಡೆದುಕೊಂಡು ರೈಲ್ವೆ ಸ್ಟೇಷನ್ನಿಗೆ ಸಾಗಿದೆ, ಅಲ್ಲಿ ಪೊಲೀಸ್ ಸ್ಟೇಷನ್ನಿನ ಮುಂದೆ, ಮರದಲ್ಲಿ ಸಾವಿರಾರು ಗಿಳಿಗಳು ಗಿಜಿಗುಡುತ್ತಾ ಇದ್ದವು,,,,,,, ಮುಂಜಾನೆ ಸೂರ್ಯ ನಿಧಾನಕ್ಕೆ ಏಳುತ್ತಿದ್ದ,,,,,,ನಾನಂತೂ ಮರೆಯುವ ಹಾಗಿಲ್ಲ ಆ ಮುಂಜಾನೆ,
,
,
,
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: