Skip to content

ಒಂದಷ್ಟು ಮುನಿಸಿಕೊಂಡವಳಿಗೆ

ಫೆಬ್ರವರಿ 1, 2017

ತುಂತುರು ನದಿಯ ಕಲರವ,,,, ನೋಡಿಲ್ಲಿ
ಈ ಎದೆಯ ಒಳಗೆ
ಮಳೆಯ ಮರೆತ ಮೋಡ ಯಾಕಿನ್ನೂ ಕೋಪ
ನನ್ನೊಲವ ಮೇಲೆ

ಬಾ ಇಲ್ಲಿ ಸುರಿ, ನಿನ್ನೊಡಲ ಪ್ರೇಮವನ್ನು
ನನಗಿಂತ ಗಂಡು ಬೇಕೇ, ನಿನ್ನೊಲವ ಕಾಯಲು

ಕಣ್ಣು ಕಾಡಿಗೆಯು ಚೂರೂ ಅಲ್ಲಾಡದಂತೆ
ಕಾವಲಿರುವೆ,
ಕಾಲು ದಾರಿಯಲಿ, ಚಿಮುಣಿ ದೀಪವ ಹಿಡಿದು
ಕಾಯುವೆ

ನಿನ್ನ ಹೆಜ್ಜೆ-ಗೆಜ್ಜೆ ಸಪ್ಪಳದಿ ಸಂಗೀತವ ಹುಡುಕುವೆ
ನಡು ಮದ್ಯ ಆಗಸದಿ, ಬಿಸಿಲಿಗೆ ಅಡ್ಡವಿರುವೆ

ಕೈ ರೇಖೆ, ಹಣೆ ಬರಹ, ನಂಬಬೇಡ ಏನನ್ನೂ
ಬಾ ಇಲ್ಲಿ, ನಂಬು ನನ್ನೆದೆಯ ಪ್ರೇಮವನ್ನು
ಹನಿ ಮಳೆಯ ಮಧ್ಯದಲ್ಲಿ, ಕೈ ಹಿಡಿದು ನಡೆಯೋಣ

ಬೆಳಕಾಗುವ ಮುನ್ನವೇ, ಬೈಕಿನಲ್ಲಿ ಸಾಗೋಣ
ಬಹುದೂರ, ಬಾನಿನೆಡೆಗೆ
ಅತಿ ದೊಡ್ಡ ಬದುಕು, ಬೇಡುತಿದೆ ನಮ್ಮನ್ನು,,,
ಬದುಕನ್ನು ಬದುಕಲು,

ಕಾದಷ್ಟು ಕಳೆವುದು, ಕಾಲದ ನಿಯಮ,,,
ಬಂದಷ್ಟು ಹೊತ್ತು, ಜೊತೆಯಾಗುವ

ಜೀವನವು ನಗ್ನ, ನಾವದಕೆ ಬಟ್ಟೆ
ನಾವುಟ್ಟ ಭಾವವನು ಧರಿಸುವ ನಾಳೆಗಳು
ನಾವ್ಯಾಕೆ ಬದುಕಿಗೆ ಭಾವವನು ಬೆರೆಸಬಾರದು

ರಾತ್ರಿಗಳು ಹಗಲುಗಳು,,, ಜಗದೊಂದು ನಿಯಮ,
ಪ್ರೇಮದಲ್ಲಿ ಕಾಮನ್ನು ಒಂದಷ್ಟು ವಿರಹ

ಹಠಮಾರಿ ಮುಖದಲ್ಲಿ, ಒಂದಷ್ಟು ಮೌನ
ಅರಿಯಲಾರೆನೇ ನಾ ನಿನ್ನೆದೆಯ ಗಾನ

ಭರಪೂರ ಬಾನುಂಟು, ಇಳಿದಷ್ಟು ನಂಟುಂಟು
ಬಾ ಬೇಗ ಗಂಟು ಮೂಟೆ ಕಟ್ಟಿಕೊಂಡು,
ಸೀರೆಗೆ ನೆರಿಗೆಯ ಹಾಕಿಸಿಕೊಳ್ಳುವ ನೆಪದಲ್ಲಿ

-GK Naveen Kumar

Advertisements
2 ಟಿಪ್ಪಣಿಗಳು
  1. “ನನಗಿಂತ ಗಂಡು ಬೇಕೆ, ನಿನ್ನೊಲವ ಕಾಯಲು”
    ಸೂಪರ್ ಸಾಲು

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: