Skip to content

ಅಮರಾವತಿ ಸಿನಿಮಾ ರಾಜ್ಯದಲ್ಲಿ,

ಫೆಬ್ರವರಿ 14, 2017

ಸಿನಿಮಾ : ಅಮರಾವತಿ
ನಿರ್ದೇಶಕರು : ಗಿರಿರಾಜ್ ಬಿ.ಎಂ
ನಟನ ಬಳಗ : ಅಚ್ಯುತ್ ಕುಮಾರ್, ಹೇಮಂತ್ ಸುಶೀಲ್, ಕಿರಣ್ ಕುಮಾರ್, ವಿದ್ಯಾ, ವೆಂಕಟ್ ರಾಮ್, ವೈಶಾಲಿ ದೀಪಕ್, ನೀನಾಸಂ ಆಶ್ವತ್, ಹಾಗು ಇತರರು,
ನಿರ್ಮಾಪಕರು : ಸುಷ್ಮಾ ಮತ್ತು ಮಾಧವ ರೆಡ್ಡಿ

ಸಿರಿಯಾದ ಮಗು ಸಾಯುವ ಮುಂಚೆ ಹೇಳಿದ ಮಾತು, “ನಿಮಗೆಲ್ಲ ದೇವರ ಹತ್ರ ಹೇಳಿ ಕೊಡ್ತೀನಿ” ಎಂದು, ನೆನೆಸಿಕೊಂಡಾಗಲೆಲ್ಲ ಎದೆ ಬಿರಿಯುವಷ್ಟು ನೋವಾಗುತ್ತದೆ, ಅಂತಹದೇ ಚಿತ್ರಣ, ವ್ಯವಸ್ಥೆಯ ಹಣಬಾಕರ ದಬ್ಬಾಳಿಕೆಗೆ ಕಣ್ಣು ಕಳೆದುಕೊಳ್ಳುವ ಮಗುವಿನ ಮಾತು ಅಮರಾವತಿ ಸಿನಿಮಾದಲ್ಲಿದೆ. ನೋಡಲೇ ಬೇಕಾದ ಸಿನಿಮಾ,

ಸಿನಿಮಾ ಎಂದರೆ ಕೆಲವರಿಗೆ ಬರಿಯ ಸಿನಿಮಾ ಅಷ್ಟೇ,,,,,,,
ಇದು ಖಂಡಿತಾ ಬರಿಯ ಸಿನಿಮಾ ಅಲ್ಲ, ಇದು ಬದುಕು,,,,,
ಸಿನಿಮಾದ ಒಳಗಿನ ಕತೆಯಾದ ಜನರ ಬದುಕು,,,,
ಸಿನಿಮಾವನ್ನು ಮಾಡಿದವರ ಬದುಕು,,,,,,,
ನೋಡಿ ಆತ್ಮಕ್ಕೆ ತೆಗೆದುಕೊಂಡರೆ, ಅದು ನೋಡಿದವರ ಬದುಕು,,,,,,

ನೀರಿನಂತೆ ನಮ್ಮ ಕೊಳೆಯನ್ನು ಸ್ವಚ್ಛ ಮಾಡುವವರ ಬದುಕು, ಅವರ ಆ ಬದುಕಿನೊಳಗಿನ ಪ್ರೀತಿ, ತಮ್ಮದೇ ಧಾಟಿಯಲ್ಲಿ ಬದುಕನ್ನು ಕಾಣುವ ಪರಿ,,,, ಎಲ್ಲಕ್ಕಿಂತ ಹೆಚ್ಚಾಗಿ, ಬದುಕನ್ನು ಪ್ರೀತಿಸುವ ಆ ಜನರ ಮೇಲೆ ಧನದಾಹಿಗಳ ದಬ್ಬಾಳಿಕೆ, ಪ್ರತೀ ಒಬ್ಬ ಮನುಷ್ಯನೂ ಇಲ್ಲಿ ಬದುಕನ್ನು ನಿರ್ಮಿಸಿಕೊಳ್ಳ ಹೊರಡುತ್ತಾನೆ, ಆದರೆ ದಾರಿಗಳು ಬೇರೆ ಬೇರೆ,

ದೇವರ ಮಕ್ಕಳ ಬದುಕಿನ ಚಿತ್ರಣದ ಹೊರತಾಗಿ, ಇಲ್ಲೊಂದು ಚಿಕ್ಕ ಪ್ರೀತಿಯ ಎಳೆಯೂ ಇದೆ, ಪ್ರೇಮ ಎಂದರೆ ಬಂದನವಲ್ಲ, ಪ್ರೇಮ ಎಂದರೆ ಒಪ್ಪಂದವಲ್ಲ ,,,,,,ಪ್ರೇಮ ಎಂದರೆ ಅರಿವು ಎನ್ನುವುದನ್ನು ಪ್ಯಾರಲಲ್ ಆಗಿ, ಚಿಕ್ಕದಾಗಿ ಹೇಳಿದ್ದಾರೆ.

ಹೊಸವರ್ಷದ ದಿನ ಗಿರಿರಾಜ್ ಬಿ.ಎಂ ಅವರು ಜಟ್ಟ ಸಿನಿಮಾದ ಕುರಿತಾಗಿ ಒಂದು ಮಾತು ಹೇಳಿದ್ರು, “ಜಟ್ಟ ಎಲ್ಲರೂ ಮೆಚ್ಚಿ, ಯಾರೂ ನೋಡದೆ ಇರುವ ಸಿನಿಮಾ” ಎಂದು, ಅವರ ಅಗಾಧ ನೋವು ಮಾತಿನಲ್ಲಿ, ಮುಗುಳ್ನಗುವಿನೊಂದಿಗೆ ಹೊರಬಂದಿತ್ತು.

16708258_1382883848400231_721828074079953657_n

ಒಂದು ಸಮುದಾಯದ ನೋವಿನ ಚಿತ್ರಣ, ಪಾತ್ರವೊಂದು ಹೇಳುವ ಮಾತು “ನಾವು ಕ್ರಾಂತಿ ಮಾಡಲು ಹೊರಟಿಲ್ಲ, ಒಂದು ಡೀಸೆಂಟ್ ಬದುಕನ್ನು ಬದುಕೋಕೆ ಅವಕಾಶ ಮಾಡಿ ಕೊಡಿ ಅಂತ ಕೇಳ್ತಾ ಇದ್ದೀವಿ”,,,,,,,,, ಅಬ್ಬಾ ಬದುಕನ್ನು ಬೇಡಬೇಕೆ ಇನ್ನೊಬ್ಬರ ಬಳಿ ಎಂದು ಖೇದವೆನಿಸುತ್ತದೆ,

ಹೇಮಂತ್ ಅಹಿಂಸೆಯ ಬಗ್ಗೆ ಒಂದು ಮಾತನಾಡ್ತಾರೆ “ಅಹಿಂಸೆ ಎಂದರೆ, ನಿಮ್ಮ ಕ್ರೌರ್ಯವನ್ನು, ನಮ್ಮ ಮೇಲೆ ಹಾಕಿಕೊಂಡು, ನಿಮ್ಮ ಎದುರಲ್ಲಿ ಅದನ್ನು ದಹಿಸುವುದು, ಎನ್ನುವ ಭಾವಾರ್ಥದಲ್ಲಿ” ಇಂತಹ ವ್ಯಾಖ್ಯಾನ, ಅಹಿಂಸಾ ಚಳುವಳಿಗಳಲ್ಲೂ ಕೂಡ ಹಿಂಸಾತ್ಮಕ ಚಳುವಳಿಗಳಷ್ಟೇ ಜನ ಸಾಯ್ತಾರೆ ಅನ್ನುವ ಕಟು ಸತ್ಯ ಕಾಡದೆ ಬಿಡದು

ಐಷಾರಾಮದ ಈ ನಗರ ನಿಂತಿರುವುದೇ, ಕೊಳಚೆಯನ್ನು ಎತ್ತುವವರ ಭುಜದ ಮೇಲೆ ಎನ್ನುವ ವಾಸ್ತವ, ಸತ್ಯ, ಈ ಸಿನಿಮಾ

ಸಿನಿಮಾಗೆ ಯಾಕೆ “ಎ” ಸರ್ಟಿಫಿಕೇಟ್ ಕೊಟ್ರು ಅನ್ನೋದು, ಸಿನಿಮಾ ಮುಗಿದ ನಂತರ ಉಳಿಯುವ ಪ್ರಶ್ನೆ,

ಈ ಸಿನಿಮಾವನ್ನು ನೋಡದೆ ಇದ್ದರೆ, ಅಮೂಲ್ಯವಾದ ಅನುಭವ ಕಳೆದುಕೊಳ್ಳುತ್ತೀರಿ, ಅಪರೂಪದ ಲೋಕವೊಂದು ಮಿಸ್ ಆಗಬಹುದು,,,,,,

ದಯಮಾಡಿ, ಮಿಸ್ ಮಾಡದೆ ಬೇಗ ಹೋಗಿ ನೋಡಿ, ಚಿತ್ರಮಂದಿರಗಳಿಂದ ಈ ಚಿತ್ರ ಹೋಗುವ ಮೊದಲು, ಚಿತ್ರವನ್ನು ಸವಿದು ಬನ್ನಿ,

ಇಂತಹ ಅಪರೂಪದ ಚಿತ್ರಕ್ಕೆ ಧನ್ಯವಾದಗಳು “ಗಿರಿರಾಜ್ ಬಿ.ಎಂ. ಸರ್”

-ಜಿ ಕೆ ನವೀನ್ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: