Skip to content

ನವಿಲು ಕುಣಿಯುತಿದೆ ನೋಡ

ಫೆಬ್ರವರಿ 14, 2017

ಗೆಳೆಯ ಮಂಜುನಾಥ್ ಗುಜ್ಜಾಡಿ, ಸಾಫ್ಟ್-ವೇರ್ ಕ್ಷೇತ್ರದಲ್ಲಿದ್ದರೂ ಕೂಡ, ತನ್ನ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೇ ನಮ್ಮ ಕರಾವಳಿಯ ಉಸಿರಾದ ಯಕ್ಷಗಾನ ಕಲೆಗೆ ತನ್ನನ್ನು ತಾನು ಮನಸಾರೆ ತೊಡಗಿಸಿಕೊಂಡವನು.

ಕಾಲೇಜಿನಲ್ಲಿ ಬಹಳ ಮೃದು ಸ್ವಭಾವದಿಂದ ಆತ್ಮೀಯನಾದವನು ಈತ, ಸದಾ ಮುಗುಳ್ನಗುತ್ತಾ, ಕಮ್ಮಿ ಓದಿ, ಹೆಚ್ಚು ಮಾರ್ಕ್ಸ್ ತೆಗೆಯುವ ಈತನ ತಲೆಗೆ ನಾವೆಲ್ಲರೂ ಬೆರಗಾಗಿದ್ದುಂಟು, ಕಾಲೇಜಿನಲ್ಲಿ ನಾವು ಆಗಾಗ ಯಕ್ಷಗಾನದ ಬಗ್ಗೆ ಮಾತಾಡಿದ್ದುಂಟು, ಆದರೆ ಮಂಜು, ಹೆಣ್ಣಿನ ವೇಷದಲ್ಲಿ ಇಷ್ಟು ಚೆನ್ನಾಗಿ ಕಾಣಿಸುತ್ತಾನೆ, ಜೊತೆಗೆ ಇಷ್ಟು ವೈಯಾರಮಯವಾಗಿ, ಹಂಸದಂತೆ ಭಾವದಲೆಗಳನ್ನು ಹರಿಸುತ್ತಾನೆ ಎಂದು ಊಹಿಸಿರಲಿಲ್ಲ, ಇವತ್ತು ಅವನು ಕೆಳುಹಿದ ಯಕ್ಷಗಾನದ ಲಿಂಕ್ ನೋಡಿ, ಮನಸ್ಸು ತುಂಬಿ ಬಂದಿತು,

ವಿಸ್ಮಯ ಹುಟ್ಟಿಸುವಷ್ಟು ಅಂದಗಾತಿಯಾಗಿ “ಕಾರ್ತವೀರ್ಯ” ಆಟದಲ್ಲಿ (ಯಕ್ಷಗಾನವನ್ನು ಆಟ ಎಂದು ಮಂಗಳೂರಿನ ಕಡೆ ಹೇಳುವ ವಾಡಿಕೆ ಉಂಟು) ಹೆಜ್ಜೆ ಹಾಕಿದ್ದಾನೆ, ಕಾರ್ತವೀರ್ಯನಾಗಿ ಕೊಂಡದಕುಳಿ ರಾಮಚಂದ್ರ ಹೆಗ್ಡೆ ಹಾಗು ಇನ್ನೊಬ್ಬ ಸಖಿಯಾಗಿ ಮನೋಜ್ ಭಟ್ ಪಾತ್ರ ಧರಿಸಿದ್ದಾರೆ,

ಬಾಲ್ಯದಲ್ಲಿ ರಾತ್ರಿ ಇಡೀ ಬೆರಗುಗಣ್ಣಿನಿಂದ ಯಕ್ಷಗಾನ ನೋಡಿದವನು ನಾನು, ಅದರಲ್ಲಿನ ಎಷ್ಟೋ ಪಾತ್ರಗಳಿಗೆ ಜೀವ ತುಂಬುವ ಪರಿ ಕಂಡು ಮೂಕನಾಗಿದ್ದೆ, ಯಕ್ಷಗಾನದಲ್ಲಿ ಬರುವ ವಿದೂಷಕರನ್ನು ನೋಡುವುದೇ ಒಂದು ಅಪೂರ್ವ ಅನುಭವ. ಇದನ್ನೆಲ್ಲಾ ನೋಡಿದಾಗ ನನಗೂ ಯಕ್ಷಗಾನದ ವೇಷ ಧರಿಸುವ ಆಸೆ ಆಗುತ್ತಿತ್ತು, ನನ್ನ ದೊಡ್ಡಪ್ಪ ಯಕ್ಷಗಾನದ ಪಾತ್ರದಾರಿ ಆಗಿದ್ದರು, ಕೆಲವೊಮ್ಮೆ ಅವರೊಂದಿಗೆ ಹಠ ಮಾಡಿ ಯಕ್ಷಗಾನದ ವೇಷ ಧರಿಸಿ, ನಾನು ಹಾಗು ಅಣ್ಣಂದಿರು ಸೇರಿ ಮನೆಯಲ್ಲಿಯೇ ಮೇಳ ಎಂದು ಹೇಳಿಕೊಂಡು ಕುಣಿಯುತ್ತಿದ್ದೆವು. ಆ ನವಿರಾದ ಗರಿ ಉಳ್ಳ ಕಿರೀಟ, ಯಾವಾಗಲೂ ಆಕರ್ಷಿಸುತ್ತಿದ್ದ ಪರಿ ನೆನೆದರೆ ಮೈ ಜುಮ್ ಎನ್ನುತ್ತದೆ,

ಮಂಗಳೂರು ಆಕಾಶವಾಣಿಯಲ್ಲಿ, ವಾರಕ್ಕೊಮ್ಮೆ ಪ್ರಸಾರವಾಗುವ ಯಕ್ಷಗಾನ ಕೇಳಲು ನಾನು ಕಾತುರದಿಂದ ಕಾಯುತ್ತಿರುತ್ತಿದ್ದೆ, ಅವೆಲ್ಲ ನೆನೆಪುಗಳು “ಮಂಜುನಾಥ್ ಗುಜ್ಜಾಡಿ” ಯ ಯಕ್ಷಗಾನ ನೃತ್ಯ ನೋಡಿದಾಗ ನೆನಪಾಯಿತು

ಆಗೆಲ್ಲ ಕಾಳಿಂಗ ನಾವಡರ ಧ್ವನಿಯಲ್ಲಿ “ನೀಲ ಗಗನದೊಳು” ಬಾಗವತಿಗೆ ಪದ್ಯ ಕೇಳುವುದೆಂದರೆ ಆಕಾಶದಲ್ಲಿ ತೇಲಿದಷ್ಟು ಸಂತಸ, ಅದೇ ಸಂತಸ, ಅದೇ ಉಲ್ಲಾಸ, “ಮಂಜುನಾಥ್ ಗುಜ್ಜಾಡಿಯ” ವಿಡಿಯೋ ನೋಡಿದಾಗ ಉಂಟಾಯಿತು,

16601843_1366470990105985_9047897723458229322_o

ನಗರದ ಜಂಜಾಟದಲ್ಲಿ ಮೈಮರೆಯದೆ,,,,,, ನಮ್ಮ ಹೆಮ್ಮೆಯ ಕಲೆಯನ್ನು ಒಲಿಸಿಕೊಂಡು, ಅದನ್ನು ಮೈಗೂಡಿಸಿಕೊಂಡು, ಮುಂದುವರೆಸಿಕೊಂಡು ಹೋಗುತ್ತಿರುವುದ್ದಕ್ಕಾಗಿ ಅಭಿನಂದನೆಗಳು ಗೆಳೆಯ, ನಿನ್ನ ಪಾತ್ರ ಪೋಷಣೆ, ಅದಕ್ಕಾಗಿ ನೀನು ಮಾಡಿಕೊಂಡ ತಯಾರಿ ಎಲ್ಲವೂ ಚೆನ್ನಾಗಿದೆ, ಯಕ್ಷಗಾನಡೆದಿಗಿನ ತುಡಿತ ಸದಾ ಹೀಗೆ ಇರಲಿ, ಜನರನ್ನು ರೋಮಾಂಚನಗೊಳಿಸುತ್ತಾ, ಬೆರಗುಗೊಳಿಸುತ್ತಾ, ಪೌರಾಣಿಕ-ಸಾಮಾಜಿಕ ಕಥೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವುದರ ಜೊತೆಗೆ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಿಂತು, ಬದುಕನ್ನು ನೋಡುವ ದೃಷ್ಟಿ ಇನ್ನಷ್ಟು ಹೆಚ್ಚಲಿ ಎಂದು ಆಶಿಸ್ತೇನೆ,

ಶುಭವಾಗಲಿ,,,,,,, ಮುಂದೆ ಬಹಳಷ್ಟು ಇಂತಹ ಯಕ್ಷಗಾನಗಳು ಮೂಡಿಬರಲಿ, ನಿನ್ನ ಮುಗುಳ್ನಗೆ ಹಾಗು ಮುಗ್ಧತೆ, ಮುಂಚಿನಂತೆಯೇ ಇರಲಿ

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: