Skip to content

ನಾನವನ ತಾಯಿ, ಅವನು ನನ್ನ ತಂದೆ

ಫೆಬ್ರವರಿ 20, 2017

ಹೇ ನೀನು,,,,,,,,,,,,,,

ನೀನೇ, ನಾ ಹೇಳುವ ಒಂದು ಮಾತನ್ನಾದರೂ ಹೃದಯದ ಆಳಕ್ಕೆ ತೆಗೆದುಕೊಳ್ಳುತ್ತಿದ್ದೀಯಾ?

ನೀನು ನನ್ನ ಮಗಳು, ನಾನು ನಿನ್ನ ತಾಯಿ, ನಾ ಕಂಡ ಇಷ್ಟು ವರ್ಷದ ಬದುಕನ್ನು ಹುಸಿ ಎಂದು ಎರಡೇ ದಿನದಲ್ಲಿ ಸಾಧಿಸಲು ಹೊರಟಿರುವೆಯ ನೀನು?

ಮಣ್ಣಿನ ಹೆಂಟೆಗಳ ನಡುವೆ ಕಲ್ಲನ್ನು ಎತ್ತಿ ಹೊರಹಾಕಬೇಕು, ಮಣ್ಣಿನ ಆಳಕ್ಕೆ ಗುದ್ದಲಿಯ ಪೆಟ್ಟು ಕೊಟ್ಟು, ಮಣ್ಣನ್ನು ಕೈ ಮೈಗೆ ಸವರಿಕೊಂಡು, ಮಣ್ಣಿನ ಪರಿಮಳ ಅರಿಯಬೇಕು, ಉಗುರುಗಳ ಮಧ್ಯ ಮಣ್ಣು ಸಿಕ್ಕಿಕೊಳ್ಳಬೇಕು, ಅನ್ನ ಉಣ್ಣುವಾಗ ಮಣ್ಣಿನ ಕಣಗಳು ಹೊಟ್ಟೆ ಸೇರಬೇಕು, ಮಣ್ಣಿನ ಜೊತೆಯಲ್ಲಿ ಗುದ್ದಲಿಗೆ ಸಿಕ್ಕುವ ಏರೆ ಹುಳಗಳು ನಮ್ಮನ್ನು ಮಣ್ಣಿನೊಂದಿಗೆ ಸಂಪರ್ಕ ಕಲ್ಪಿಸುವ ಚಿಕ್ಕ ಚಿಕ್ಕ ಸರಪಳಿಗಳಂತೆ ಭಾಸವಾಗಬೇಕು, ಅದು ನಮ್ಮ ಉಸಿರು, ನಮ್ಮ ಕೆಸರಾದ ಕೈಯನ್ನು ನೋಡಿ ನೀನು ನಕ್ಕೆ ಎಂದಾದರೆ, !!!!!!!!!! ಛೆ

ಬೆದೆ ಬಂದ ಎದೆಗೆ ಕುಪ್ಪಸವ ಧರಿಸುವ ಶಕ್ತಿ ಬಂದಾಕ್ಷಣ ನೀನು ದೊಡ್ಡವಳಾದೆ ಎಂದೇ ಬೀಗಿದರೆ. ನನ್ನ ಮೊಲೆಯ ಹಾಲನ್ನು ಎದೆ ಬತ್ತುವ ವರೆಗೂ ಉಣಿಸಿದ ನನಗೆಷ್ಟು ಸ್ವಾಭಿಮಾನ ಇರಬೇಕು. ಅಪ್ಪನೆದೆಯ ಬೆವರಿನ ವಾಸನೆಗೆ ಮೂಗು ಸಿಂಡರಿಸುವ ನಿನ್ನ ಮುಖ, ಕನ್ನಡಿಯಲ್ಲೊಮ್ಮೆ ನೋಡು, ನಿನ್ನಾತ್ಮ ಮಾನವತೆ ಹೊಂದಿದ್ದರೆ ಕನ್ನಡಿ ಒಡೆದು ಚೂರಾದೀತು,

ಏನೆಂದು ಹೇಳಿದೆ ನೀನು, ? ನಾಲ್ಕು ಜನರ ನಡುವೆ ತಲೆ ಎತ್ತಿ ನಡೆಯುವ ನಾಜೂಕು ನಮಗೆ ಇಲ್ಲ ಎಂದೇ ಅಲ್ಲವೇ, ನಯ ನಾಜೂಕಿನ ಬದುಕಿನ ಆಸೆ ಯಾರಿಗಿಲ್ಲ ಹೇಳು, ಆದರೆ ಸತ್ಯವೇನು? ಬದುಕಿನೊಳಗಿನ ಆತ್ಮವೇನು? ಅರಿತಿದ್ದೀಯಾ ನೀನು ? ನಾಜೂಕಿನ ನಾಟ್ಯಮಣಿಯರು, ಕೊನೆಗೆ ಬಂದು ಸೇರಿದ್ದು ಇದೆ ಮಣ್ಣಿಗೆ.

ಮಹಡಿ ಮನೆಯ ಮೋಸಗಾರ ಸಾಯಲೇಬೇಕು,,,,,,,,,,,,, ಇದೆ ಮಣ್ಣೊಳಗೆ ಕೊಳೆತು ಎರೆಹುಳಕ್ಕೆ ಆಹಾರವಾಗಬೇಕು, ತತ್ವ ಅಲ್ಲ ಇದು, ನಿಜ,,,,,,,,,,ನಿನ್ನ ಹೆತ್ತವಳು ನಾನು,

ನಿನ್ನನ್ನು ಗರ್ಭದಲ್ಲಿ ಇರಿಸಿ, ನಿನ್ನಪ್ಪನಿಗೆ ಅಡಿಗೆ ಮಾಡಿ ಕೊಟ್ಟಿದ್ದೇನೆ, ಹೆರಿಗೆಯ ಮುಂಚಿನ ದಿನವೂ ಎತ್ತುಗಳಿಗೆ ಬೂಸಾ-ಹಿಂಡಿ ಕೊಟ್ಟಿದ್ದೇನೆ, ನಿನ್ನ ಅಪ್ಪನ ರಟ್ಟೆಯ ಶಕ್ತಿ, ಆಗೋ ಕಾಣುತ್ತಿದೆಯಲ್ಲ, ಆ ಬಿಳಿ ಎತ್ತುಗಳ ಭುಜದ ಶಕ್ತಿ, ನೀನು ಉಣ್ಣುವ ಅನ್ನ.

ಕೆಂಪು ಗುಲಾಬಿಯನ್ನು ಇಷ್ಟಪಟ್ಟ ಮಾತ್ರಕ್ಕೆ ನೀನು ನನ್ನ ಮಗಳಾಗಲಾರೆ, ಕಸ-ಮುಸುರೆ ಮುಟ್ಟಿದ ಮಾತ್ರಕ್ಕೆ ನೀ ಮೈಲಿಗೆಯಾಗಲಾರೆ, ನೀ ಕಲಿತ ಎರಡಕ್ಷರ ವಿನಯದಲಿ ತಾಯ್ತನವ ಕಾಯಬೇಕು.

ನಿನ್ನಪ್ಪನ ಆರ್ಭಟವನ್ನು ನೋಡಿ, ಅವನನ್ನು ದ್ವೇಷಿಸುವೆಯಲ್ಲ, ಕತ್ತಲೆಯ ಕೋಣೆಯಲ್ಲಿ ಅವನ ಕಣ್ಣೀರು ಕಂಡಿದ್ದೀಯಾ ನೀನು? ನಿನ್ನನು ಸಾಕುವ ದಾವಂತದಲ್ಲಿ, ತನ್ನ ಬದುಕನ್ನೇ ಮರೆತವನು ಆತ. ಇರುವಷ್ಟು ಭೂಮಿಯಲಿ, ಬಾಣಂತಿಯಂತೆ ಹಸಿರನ್ನು ಪೋಷಿಸಿದವನು ಆತ, ಆತನ ಆತ್ಮ, ಅವನ ಮಾತಿನಷ್ಟು ಒರಟಲ್ಲ.

ಕಣ್ಣಿನ ಕಾಡಿಗೆಗೆ, ಮುಖದ ಮೇಲಿನ ಪೌಡರಿಗೆ, ನಿನ್ನ ತುಟಿಯ ಬಣ್ಣಕ್ಕೆ, ಅರ್ಧ ಕಾಣುವ ಹೊಕ್ಕಳಿಗೆ, ನಿನ್ನ ರೋಮವಿಲ್ಲದ ಕೈಗಳಿಗೆ ಮರುಳಾದ ಮಂಕುದಿಣ್ಣೆಯನು ನಂಬಿ ಹೋಗುವೆ ಎನ್ನುತ್ತಿರುವೆಯಲ್ಲ,

ನಿನ್ನೊಳಗಿನ ಹೆಣ್ತನಕ್ಕೆ ಬೆಲೆಕೊಡುವ ಗಂಡು ನಿಂಗ್ಯಾರು ಸಿಗಲಿಲ್ಲವೇ,
ದಿನ ಕಳೆದಂತೆ ಮಾಸುತ್ತದೆ ನಿನ್ನ ಚರ್ಮ,
ಸುಕ್ಕುಗಟ್ಟುತ್ತದೆ ಕೆನ್ನೆ,
ಬಣ್ಣ ಕಳೆದುಕೊಳ್ಳುತ್ತದೆ ತುಟಿ,
ತುಂಬಿದ ಎದೆ ಮಸುಕಾಗುತ್ತದೆ,
ಇರುತ್ತಾನೆಯೇ ಆಗವನು ನಿನ್ನ ಜೊತೆಗೆ? ಕಾಯುತ್ತಾನೆಯೇ ನಿನ್ನೊಲವ ಆತ್ಮವನ್ನು ?

ಹೆಣ್ಣು ಗಂಡು ಎಂಬ ಭೇದ ಬರುವುದು, ಕಾಮದ ಕ್ರೌರ್ಯದಲ್ಲಿ ಮಾತ್ರ, ಉಳಿದಂತೆ ನೀನೊಂದು ಜೀವ ಅಷ್ಟೇ, ಬರಿಯ ಜೀವ, ಆಗೆಲ್ಲ ಆತ ನಿನ್ನನು ಗೌರವಿಸಬೇಕು,

ಎಲ್ಲ ಹಸಿವುಗಳು ಮುಗಿದ ಮೇಲು, ನಿನ್ನನ್ನು ಅವನ ಬಿಸಿ ತೆಕ್ಕೆಯಲಿ ಇಟ್ಟು ಕಾಪಾಡಬೇಕು, ಅವನೇ ನಿಜವಾದ ಗಂಡು.

ಹೊರ ಬಾ,,,,,,,
ಬೆತ್ತಲಾಗು ಒಮ್ಮೆ,,,,,,,,,,ವಾಸ್ತವದಂತೆ ತೋರುವ ಈ ಹುಸಿತನದಿಂದ,

ನಿನ್ನ ಕಣ್ಣಿಗಂಟಿದ ಪೋರ್ ಕಳಚಿ ನೋಡು.

ಒಂದೂ ಪುಸ್ತಕವನು ಓದಿದವಳಲ್ಲ ನಾನು, ಆದರೆ ನಿನ್ನ ಹೆತ್ತವಳು, ನೀನು ಎಡವುವ ಮುನ್ನವೇ ನಿನ್ನನು ಕೈ ಹಿಡಿದು ಎತ್ತುವವಳು. ನಿನ್ನಪ್ಪನಿಗಿಂತ ಒರಟಿ,,,,,

ನನ್ನ ಬದುಕನ್ನು ನೋಡಿ, ಇಂತಹ ದಡ್ಡ ಅಪ್ಪನ ಕೈಯಲ್ಲಿ ಏಗುವ ನಾನೊಬ್ಬ ಮೂರ್-ಖಿ ಎಂದು ಜರೆದಿದ್ದಿ ಅಲ್ಲವೇ, ನಿನ್ನಪ್ಪ ನನಗೆ ಬೈದು, ತವರು ಮನೆಗೆ ನಡಿ ಎಂದಾಗ,
“ಬಾ ಅವ್ವ ಹೋಗೋಣ, ಅಜ್ಜಿಯ ಮನೆಗೆ ಎಂದೆಯಲ್ಲ”
ಆದರೆ ಅಪ್ಪ ಹೋಗು ತವರು ಮನೆಗೆ ಎಂದು ಪ್ರತಿ ಭಾರಿ ಹೇಳಿದಾಗಲೂ, ಎಲ್ಲಿಯೂ ಹೋಗದೆ ಬಂದು ನನ್ನನ್ನು ಅಪ್ಪು ಎನ್ನುವ ಅವನ ಆತ್ಮದ ನುಡಿ ನನಗೆ ಕೇಳಿಸುತ್ತಿತ್ತು.

ಆತ ಹಾಗೆಯೇ, ಪ್ರೀತಿಯನು ವ್ಯಕ್ತಪಡಿಸಲು ಬರದೇ, ಸುಮ್ಮನೆ ಕೂಗುವ ಎತ್ತಿನಂತೆ,

ಆ ರಾತ್ರಿ, ಅಷ್ಟು ಮೌನದ ಒಳಗೆ, ಆತನ ಪಕ್ಕ ಕುಳಿತೆ ನಾನು, ಅವನ ತಲೆಯೊಳಗೆ ಕೈ ಆಡಿಸಿದೆ, ಮಗುವಿನಂತೆ ಅತ್ತು ಬಿಟ್ಟ, ನನ್ನ ಎದೆಯೊಳಗೆ ಮುಖ ಇಟ್ಟು,

ನಿನ್ನ ಹೆರುವವರೆಗೂ ಮಾತ್ರ ನಾನವನ ಹೆಂಡತಿ, ನೀನು ಹುಟ್ಟಿದ ಮೇಲೆ, ನಾನವನ ತಾಯಿ, ಅವನೇ ನನಗೆ ತಂದೆ

ಗಂಡನೆಂದರೆ ಹಾಗೆ,

ಇನ್ನೇನು ಹೇಳಲಿ ಮಗಳೇ,

ನಿನಗೆ ನೋವುಣಿಸಲು ಈ ಮಾತು ಹೇಳುತ್ತಿಲ್ಲ, ನನ್ನ ಆತ್ಮದ ಭಾಗ ನೀನು, ನೀನೆಂದರೆ ನಾನೇ,,,,,,,

ಮೌನ

ಮೌನ

ಮೌನ

ಮೌನ
ಅವ್ವ,,,,,,,,,,, ಐ ಲವ್ ಯೂ

,
-ಜಿ ಕೆ ನವೀನ್ ಕುಮಾರ್

Advertisements
One Comment
  1. Anupama permalink

    Aadunikatheya baduku samanathe bekendu ennu halavaru arthavilada bavodveshagalinda haraduva yelarigu edu utharavagide…

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: