Skip to content

ಪ್ರಕೃತಿಯ ನಿಟ್ಟುಸಿರು

ಫೆಬ್ರವರಿ 28, 2017

ಹೋದಲ್ಲೆಲ್ಲ ಕ್ಯಾಮರಾ ಹೆಗಲೇರಿಸಿ ಹೋಗುವುದೆಂದರೆ ಅದೇನು ಗತ್ತು, ಕೇರಳದ ಕಾಲು ಹಾದಿ, ಕಾಡಿನ ಹಾದಿಗಳು ಅದೆಷ್ಟು ಬೈದುಕೊಂಡವೋ, ಕ್ಯಾಮರಾ ನೋಡಿ, ಆದರೆ ಈ ಪ್ರಕೃತಿಗೆ ಒಂದು ವಿಶೇಷತೆ ಇದೆ, ಅದು ಬಹಳ ಸುಲಭದಲ್ಲಿ ಕ್ಯಾಮರಾಗೆ ಸೆರೆಯಾಗುವುದಿಲ್ಲ, ನಾವು ಕಣ್ಣಾರೆ ನೋಡಿ ಅನುಭವಿಸುವ ಅನುಭವದ ಮುಂದೆ, ಕ್ಯಾಮರಾ ತುಂಬಾ ಚಿಕ್ಕದು ಎನಿಸುತ್ತದೆ.

ಉಸಿರೇ ಉಸಿರೇ, ಹಾಡನ್ನು ಶೂಟ್ ಮಾಡಬೇಕೆಂದುಕೊಂಡು ಮಾಡಿದ್ದಲ್ಲ, ಹೋದಲ್ಲೆಲ್ಲ ಒಂದಷ್ಟು ವಿಡಿಯೋ-ಗಳನ್ನು ಸೆರೆ ಹಿಡಿದು, ನಂತರ ಅದಕ್ಕೆ ಹಾಡು ಸೆಟ್ ಮಾಡಿದ್ದು, ನನ್ನ ಅಲೆದಾಟದಲ್ಲಿ ಅನೇಕ ಜನ ಗೆಳೆಯರು ಜೊತೆಯಾಗಿದ್ದರು,

ಒಂದೊಮ್ಮೆ,, ದೂರದಲ್ಲಿ ಕಾಣುವ ಬೆಟ್ಟ ಒಂದರ ಮೇಲೆ ನಾನು ಹೋಗುತ್ತೇನೆ ನೀನು ಇಲ್ಲಿಂದ ಕ್ಯಾಮರಾದಲ್ಲಿ ಶೂಟ್ ಮಾಡು ಎಂದು ಕ್ಯಾಮರಾವನ್ನು ಗೆಳೆಯನಿಗೆ ಸೆಟ್ ಮಾಡಿ ಕೊಟ್ಟು, ಬೆಟ್ಟ ಹತ್ತಲು ಹೋದೆ, ಆದರೆ ಹತ್ತಲಾಗದೆ ಅನೇಕ ಸಲ ಬಿದ್ದಿದ್ದೆ, ಬೆಟ್ಟದ ಹಿಂಬಾಗದಿಂದ ಇಳಿಜಾರು ಕಮ್ಮಿ ಇದೆ ಎಂದು ಅಲ್ಲಿಗೆ ಸಾಗಿ ಹತ್ತುವಾಗ, ಅನೇಕ ಬಾರಿ ಕಾಲು ಜಾರಿ ಮತ್ತೆ ಮತ್ತೆ ಬೆಟ್ಟದ ಬುಡಕ್ಕೆ ಬಂದು ಬಿದ್ದಿದ್ದೆ, ಹಾಕಿದ ಅಂಗಿ ಎಲ್ಲ ಮಣ್ಣಾಗಿತ್ತು, ಆದರೂ ನನಗೆ ಆ ಬೆಟ್ಟದ ಮೇಲಿನ ಶಾಟ್-ಅನ್ನು ಮಿಸ್ ಮಾಡುವ ಮನಸಾಗಲಿಲ್ಲ, ನಾನು ತುಂಬಾ ಹೊತ್ತಾದರೂ ಬೆಟ್ಟದ ಮೇಲೆ ಕಾಣಿಸದ್ದನ್ನು ನೋಡಿ ಗೆಳೆಯ ಗಾಬರಿಯಾಗಿದ್ದ,,,,,, ಕಷ್ಟ ಪಟ್ಟು ಕೊನೆಗೂ ಅಲ್ಲಿಗೆ ಹತ್ತಿ, ಹೋಗಿ ಗೆಳೆಯನಿಗೆ ಕರೆ ಮಾಡಿದೆ, ನನಗೂ ಅವನಿಗೂ ಇದ್ದ ಅಂತರ ಸುಮಾರು ಮುಕ್ಕಾಲು ಕಿ.ಮೀ ನಷ್ಟುದೂರ. ಬಿದ್ದುದರಿಂದ ಕೈ-ಕಾಲು ವಿಚಿತ್ರವಾಗಿ ನೋವುತ್ತಿತ್ತು, ಆದರೂ ಸುಮ್ಮನೆ ಜೇಬಲ್ಲಿ ಕೈ ಹಾಕಿ ನಿಂತಿದ್ದೆ, ಅತ್ತ ಕಡೆ ಅವನು ಹೇಗೆ ಶೂಟ್ ಮಾಡುತ್ತಿದ್ದಾನೆ ಎನ್ನುವ ಸ್ವಲ್ಪವೂ ಐಡಿಯಾ ಇರಲಿಲ್ಲ,,,,, ಅಂತೂ ಇಂತೂ, ಅವನಿಂದ ಕರೆ ಬಂತು, “ನೀನು ಹೇಳಿದ ಹಾಗೆ ಶೂಟ್ ಮಾಡಿದ್ದೇನೆ, ಬಂದು ನೋಡು ಎಂದು. ಹತ್ತಿದ ರೀತಿ, ಇಳಿಯುವುದೂ ಕೂಡ ಕಷ್ಟ ಇತ್ತು, ಅಂತೂ ಇಂತೂ ಸುಮಾರು ಒಂದು ಗಂಟೆಯ ಶ್ರಮದಿಂದ, ಆ ಗುಡ್ಡ ಇಳಿದು ಬಂದೆ. ಒಂದು ಮಟ್ಟಕ್ಕೆ ಚೆನ್ನಾಗೆ ಬಂದಿತ್ತು ವಿಡಿಯೋ, ಚನ್ನಾಗಿ ಬಂದಿರಲಿಲ್ಲ ಎಂದರೂ, ಮತ್ತೆ ಅಲ್ಲಿಗೆ ಹೋಗುವಷ್ಟು ತ್ರಾಣ ಇರಲಿಲ್ಲ.

ಸೂರ್ಯನಿಗೆ ಎದುರಾಗಿ, ಒಂದು ವಿಡಿಯೋ ಶೂಟ್ ಮಾಡಬೇಕಿತ್ತು, ಅದು ಅಷ್ಟು ಸುಲಭವಾಗಿರಲಿಲ್ಲ, ಸೂರ್ಯ ಹುಟ್ಟುವಾಗ ಅಥವಾ ಮುಳುಗುವಾಗ ಮಾತ್ರ ಸಿಗಬಹುದಾದ ಚಿನ್ನದ ಬಣ್ಣ ಅದು, ಒಂದೈದು-ಹತ್ತು ನಿಮಿಷದಲ್ಲಿ ಮಾಯವಾಗಿ ಬಿಳಿಯಾಗಿ ಬಿಡುತ್ತದೆ, ಅದಕ್ಕಾಗೇ ಅನೇಕ ದಿನ ಸೂರ್ಯ ಹುಟ್ಟುವ ಮುಂಚೆಯೇ ಎದ್ದು ಹೋಗಿ, ಬೆಟ್ಟದ ಬುಡದಲ್ಲಿ ಕ್ಯಾಮರಾ ಹಿಡಿದು ಕಾದು ನೋಡಿ, ಸೂರ್ಯ ಚಿನ್ನದ ಬಣ್ಣದಲ್ಲಿ ಇರುವ ಸಮಯವನ್ನು ಮಾರ್ಕ್ ಮಾಡಿಕೊಂಡು ಬಂದಿದ್ದೆ, ಹೀಗೆ ಅದರ ಟೈಮಿಂಗ್ ಗೊತ್ತಾದ ನಂತರ, ಗೆಳೆಯನನ್ನು ಒತ್ತಾಯದಿಂದ ಬೆಳಿಗ್ಗೆ ಮುಂಚೆಯೇ ಕರೆದುಕೊಂಡು ಹೋಗಿ, ಆ ಸೂರ್ಯನ ಮುಂದೆ ಕ್ಯಾಮರಾ ಕೊಟ್ಟು ನಿಲ್ಲಿಸಿದ್ದೆ, ಬೆಳಿಗ್ಗೆ ಬೇಗ ಏಳಲು ಮನಸ್ಸಿಲ್ಲದಿದ್ದರೂ ನನ್ನ ಒತ್ತಾಯಕ್ಕೆ ಮಣಿದು ಬಂಡ ಗೆಳೆಯ, “ಅದುವರೆಗೂ ಆ ಜಾಗದಲ್ಲಿ ಸೂರ್ಯ ಅಷ್ಟು ಚೆನ್ನಾಗಿ ಕಾಣುತ್ತಾನೆ ಎಂಬುದೇ ಗೊತ್ತಿರಲಿಲ್ಲ” ಎಂದು ಬಹಳ ಖುಷಿ ಪಟ್ಟ

ತ್ರಿಶೂರ್ ಜಿಲ್ಲೆಯ, ಆದಿರಾಪಳ್ಳಿ ಜಲಪಾತ (ಬಾಹುಬಲಿ ಸಿನಿಮಾದ ಕೆಲವು ತುಣುಕುಗಳು ಇಲ್ಲಿ ಶೂಟ್ ಆಗಿವೆ) ಬಹಳ ಫೇಮಸ್ಸು, ಅಲ್ಲಿಗೆ ಗೆಳೆಯರೊಂದಿಗೆ ಹೋದಾಗ, ಅದನ್ನು ಹೇಗೆ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯುವುದು ಎನ್ನುವುದನ್ನು ತಿಳಿಯದೆ ತುಂಬಾ ಹೊತ್ತು ಯೋಚಿಸುತ್ತ ನಿಂತಿದ್ದೆ, ನಂತರ ದೂರದಿಂದ ಜಲಪಾತದ, ಲಾಂಗ್ ವೀವ್ ಸೆರೆ ಹಿಡಿಯುವುದೇ ಸೂಕ್ತ ಎಂದು ಸುಮಾರು ಒಂದು ಕಿ. ಮೀ ನಡೆದ ನಂತರ, ಜಲಪಾತಕ್ಕೆ ಸ್ವಲ್ಪ ಮಟ್ಟಿಗೆ ಎದುರಾಗಿ ಇರುವ ಜಾಗ ಸಿಕ್ಕಿತು, ಅಲ್ಲಿಂದ ನಿಧಾನವಾಗಿ ಜಲಪಾತವನ್ನು ಸೆರೆ ಹಿಡಿದೇ, ನಂತರ ಹಿಂದಿರುಗಿ ನಡೆದು, ಜಲಪಾತದ ಬುಡಕ್ಕೆ ಬಂದು ಇಳಿದೆವು, ಕ್ಯಾಮರಾ ಹೊರ ತೆಗೆದು ಜಲ ಪಾಠಕ್ಕೆ ಎದುರಾಗಿ ನಿಂತ ಎರಡೇ ನಿಮಿಷದಲ್ಲಿ ಜೋರಾಗಿ ಗಾಳಿ ಬೀಸಿ, ನೀರಿನ ಹನಿಗಳು ಆವಿಯಂತೆ ಹಾರಿಬಂದು ನಮ್ಮನ್ನು ಅಪ್ಪಿದವು, ಮನಸ್ಸೇನೋ ಉಲ್ಲಾಸಭರಿತವಾಯಿತು, ಆದರೆ ಕ್ಯಾಮರಾ ಸಂಪೂರ್ಣ ನೀರಿನಿಂದ ತೋಯ್ದು ಹೋಯಿತು, ನನಗಂತೂ ಬಹಳ ದುಃಖ ಆಯಿತು, ಸ್ವಲ್ಪ್ ದೂರ ಹೋಗಿ ಕ್ಯಾಮರಾವನ್ನು ಒರೆಸಿ ಬ್ಯಾಗಿನಲ್ಲಿಟ್ಟು, ನನ್ನ ಕ್ಯಾಮರಾವನ್ನು ತೋಯಿಸಿದ ಸಿಟ್ಟಿಗೆ ಡೇಂಜರ್ ಜೋನ್ ಹತ್ತಿರ ಹೋಗಿ ನಿಂತೆ, ಅಲ್ಲಿ ನಿಲ್ಲುವುದೇ ಅಪೂರ್ವ ಅನುಭವ, ನೀರಿನ ಹನಿಗಳು ಲಕ್ಷ ಕಣಗಳಾಗಿ ಒಡೆದು, ಮುಖವನ್ನು ಸವರಿ ಹೋಗುತ್ತವೆ, ಗೆಳಯರಿಬ್ಬರೂ ನನ್ನ ಹಚ್ಚಾಟಕ್ಕೆ ಬೈಯುತ್ತಾ ನಾನಿದ್ದ ಜಾಗಕ್ಕೆ ಬಂದರು, ಬೈಯಲು ಬಂದವರು ಆ ಹನಿಗಳ ಲಾವಣ್ಯದ ಮುಂದೆ ತಲೆ ಬಾಗಿ ಅಲ್ಲೇ ಕುಳಿತರು, ಬಹಳ ಹೊತ್ತು ಹಾಗೆ ಕುಳಿತಿದ್ದೆವು, ಮಾತು ಕತೆ ಏನಿಲ್ಲ, ಅದೊಂತರ ಧ್ಯಾನದಂತೆ.

ಮುನ್ನಾರಿಗೆ ಕೂಡ ಹೋಗಿದ್ದೆವು, ಅದೂ ಬೈಕಿನಲ್ಲಿ, ಮುನ್ನಾರಿನ ಮಂಜಿನಲ್ಲಿ, ಬೈಕಿನಲ್ಲಿ ಹೋಗುವ ಅನುಭವವೇ ಅಪೂರ್ವ, ಅನೇಕ ಜೋಡಿಗಳು ಆ ಪ್ರಕೃತಿಯನ್ನು ಆಸ್ವಾದಿಸುತ್ತ ಪ್ರೀತಿಸುವ ಪರಿ ಬೆರಗು ಹುಟ್ಟಿಸುತ್ತಿತ್ತು. ನಾನು ಹಾಗು ಗೆಳೆಯ ಇಬ್ಬರೂ, ಜನರಿಲ್ಲದ ಡ್ಯಾಮಿನ ಬುಡಕ್ಕೆ ಬಂದೆವು, ನೀರು ಬಹಳ ಕಮ್ಮಿ ಇತ್ತು, ಸಂಜೆ ಮುಗಿದು ಕಟ್ಟಲು ಆವರಿಸಿತ್ತು, ಸೂರ್ಯನ ಒಂದೂ ಕಿರಣವಿಲ್ಲ, ಬಾರಿಯ ಮೋಡದ ಮರೆಯ ಚಂದ್ರನ ಬೆಳಕು, ಅಷ್ಟೇ, ಖಾಲಿ ರೋಡಿನಲ್ಲಿ ಮಲಗಿ ಚಂದ್ರನನ್ನು ನೋಡುತ್ತಾ, ಹಾಗೆಯೇ ಕಳೆದು ಹೋಗಿದ್ದೆ, ಅದೆಷ್ಟು ಹೊತ್ತು ಹಾಗೆ ಮಲಗಿದ್ದೇನೋ ನನಗೇ ಗೊತ್ತಿಲ್ಲ, ಆ ರಾತ್ರಿಯ ಜೊತೆಗೊಂದು ಪ್ರೇಮ ಹುಟ್ಟಿತ್ತು, ಮುನ್ನಾರಿನ ಆ ಚಂದ್ರ ಅನೇಕ ನೆನಪುಗಳನ್ನು ತಂದಿದ್ದ,

ಅಲ್ಲೇ ಒಂದು ಹೋಟೆಲಿನಲ್ಲಿ ತಂಗಿದ್ದು, ಮರುದಿನ ಬೇಗನೆ ಹೊರಟೆವು, ಮುನ್ನಾರಿನ ಬೆಟ್ಟಗಳ ನಡುವೆ ಬೈಕಿನಲ್ಲಿ ಬರುವ ದೃಶ್ಯ ಒಂದು ಶೂಟ್ ಮಾಡಬೇಕಿತ್ತು, ಅದಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಒಂದೇ ರೋಡಿನಲ್ಲಿ ಬಹಳ ಬಾರಿ ಬೈಕಿನಲ್ಲಿ ಓಡಾಡಿದೆ, ಆದರೆ ನಮಗೆ ಬೇಕಾದ ಏಕಾಂತದ ಶಾಟ್ ಸಿಗುತ್ತಿರಲಿಲ್ಲ, ತಿರುವಿನಿಂದ ತಟಕ್ಕನೆ ಯಾವುದಾದರೂ ವಾಹನ ಬಂದು ಡಿಸ್ಟರ್ಬ್ ಮಾಡುತ್ತಿತ್ತು. ಕೊನೆಗೂ ಕಷ್ಟ ಪಟ್ಟು ಅದನ್ನು ಶೂಟ್ ಮಾಡಿದ್ದಾಯಿತು

ಉಸಿರೇ ಉಸಿರೇ

ಹೀಗೆ ಅನೇಕ ಜಾಗಗಗಳನ್ನು ಸುತ್ತಾಡಿದೆ, ಕೊಡಚಾದ್ರಿ ಪರ್ವತ, ಕೂಡ್ಲು ಫಾಲ್ಸ್, ಎಲ್ಲಾಕಡೆ ಅನೇಕ ವಿಭಿನ್ನ ಅನುಭವಗಳು,,,,,,,,

ಎಲ್ಲಕಿಂತ ಹಿರಿದಾದ ಆ ಪ್ರಕೃತಿ ಮಾತೆಗೊಂದು ನಮನ ಸಲ್ಲಿಸಲೇ ಬೇಕು ಅದೆಷ್ಟು ಚೆನ್ನಾಗಿ ಶೃಂಗರಿಸಿಕೊಂಡಿದ್ದಾಳೆ ಅವಳು,

,

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: