Skip to content

“ಮಿಸ್ ಸೌತ್ ಕರ್ನಾಟಕ” – ವಿಧಾತ್ರಿ ಗೆ ಓಟ್ ಮಾಡಿ,

ಮಾರ್ಚ್ 4, 2017

ಟೀಚರ್ ನ ಪಕ್ಕ ಕುಳಿತ ಅವರ ಮಗಳು “ವಿಧಾತ್ರಿಯನ್ನು” ಕೇಳಿದೆ, ಹತ್ತನೇ ಕ್ಲಾಸ್ ಆ ನೀನು? ಅಂತ,,,,
ಸಣ್ಣಗೆ ನಾಚಿಕೊಂಡಂತೆ ನಕ್ಕಳು ಆಕೆ, “ಅಲ್ಲ ನಾನು ಡಿಗ್ರಿ ಓದ್ತಾ ಇದೀನಿ”,
ಪುಟಾಣಿ ಹುಡುಗಿ ಎಂದುಕೊಂಡಿದ್ದೆ, ಡಿಗ್ರಿ ಓದುವಷ್ಟು ದೊಡ್ಡವಳೆಂದು ಗೊತ್ತಿರಲಿಲ್ಲ,

ಆದರೂ ಆಕೆ ಡಿಗ್ರಿ ಓದುವ ದೊಡ್ಡ ಹುಡುಗಿ ಎಂದು ನಂಬಲು ನನಗೆ ಮನಸ್ಸು ಬರಲಿಲ್ಲ, ಹಾಗಾಗಿ ಹತ್ತನೇ ಕ್ಲಾಸ್ ಎಂದೇ ಮನಕ್ಕೆ ನಂಬಿಸಿಕೊಂಡು ಸುಮ್ಮನಾದೆ,

17141399_275155562919644_991042239_n

ಟ್ರೈನಿನ ಪ್ರಯಾಣ,,,,,,,,,, ಪ್ರಯಾಣ ಎಂದರೆ ಬಿಡುವು ಇರಲೇಬೇಕಲ್ಲವೇ, ಟ್ರೈನು ಯಾವುದೊ ಸ್ಟಾಪಿನಲ್ಲಿ ನಿಂತಿತು, ಆಕೆ ಟಕ್ಕನೆ ಕೆಳಗಿಳಿದು ಓಡಿದಳು, ಬೆಳಗಿನ ಜಾವದ ತಿಂಡಿ ತರಲು,,,,,, ಆದರೆ ಟ್ರೈನು, ಏನೋ ನೆನಪಾದ ಇರುವೆ ಸಡನ್ ಆಗಿ ಓಡುವಂತೆ, ಹಾರ್ನ್ ಮೊಳಗಿಸುತ್ತಾ ಒಡಲು ಪ್ರಾರಂಭಿಸಿತು, ಆದರೆ ಈಕೆಯ ಸುಳಿವಿಲ್ಲ,

ಟೀಚರ್ ಮಗಳನ್ನು ಕಾಣದೆ ಗಾಬರಿ ಆಗಿದ್ದರು, “ಅಯ್ಯೋ ವಿಧಾತ್ರಿ ಇನ್ನೂ ಬಂದಿಲ್ಲ”

ನಾನು ಟೀಚರ್ ನ ಮುಖದ ತಳಮಳ ನೋಡಿ, ಕಿಟಕಿ ಇಂದ ಫ್ಲಾಟ್-ಫಾರ್ಮ್ ನ ಕಡೆಗೆ ನೋಡಿದೆ, ಅವಳು ಅಲ್ಲೆಲ್ಲೂ ಕಾಣಲಿಲ್ಲ, ಬಹಳ ಜನರಲ್ಲಿ ಎಲ್ಲೋ ಮರೆಯಾಗಿ ಬಿಟ್ಟಿದ್ದಳು. ನಾನು ಗಾಬರಿಯಿಂದ ಎದ್ದು ಬಾಗಿಲಿನ ಕಡೆಗೆ ಧಾವಿಸಿದೆ, ಯಾವ ಮಾಯದಲ್ಲಿ ಬಂದಳೋ ಹುಡುಗಿ, ನಾನು ಬಾಗಿಲು ತಲುಪುವ ವೇಳೆಗೆ, ಆಕೆಯೂ ಹತ್ತಲು ಅನುವಾಗಿದ್ದಳು,,,,,,,,

ನನ್ನನು ನೋಡಿ ಮುಗುಳ್ನಕ್ಕು ಸೀದಾ ಟೀಚರ್-ನ ಬಳಿ ಬಂದು ಕುಳಿತಳು, ಟೀಚರ್ ನಿರಾಳ, ನಾನೂ ಕೂಡ ,

ಸ್ವಲ್ಪ ಹೊತ್ತಿನ ಬಳಿಕ, ಆಕೆಗೆ ಕೇಳಿದೆ, “ಒಂದು ವೇಳೆ ಟ್ರೈನ್ ಮಿಸ್ ಆಗಿದ್ದಿದ್ರೆ ಏನು ಮಾಡ್ತಿದ್ದೆ” ? ಎಂದು

ಕಿರುನಗೆ ನಕ್ಕು, “ದಿಲ್ವಾಲೆ ದುಲ್ಹನಿಯಾ” ಇಲ್ಲ ಅಂದ್ರೆ “ಚೆನ್ನೈ ಎಕ್ಸ್ಪ್ರೆಸ್” ಆಗ್ತಿತ್ತು ಎಂದು ತಣ್ಣಗೆ ಮೌನಿಯಾದಳು, ನಾನು ಸುಮ್ಮನೆ ತಲೆಯಾಡಿಸುತ್ತಾ ಮುಗುಳ್ನಕ್ಕೆ,

ಟೀಚರ್, ನನಗೆ ಕಿತ್ತಳೆ ಹಣ್ಣನ್ನು ಕೊಟ್ಟು ತಿನ್ನಲು ಹೇಳಿದರು, ಮನೆಗೆ ಹೋಗಿಯೇ ಊಟ ಮಾಡುವುದೆಂದು ಪಣ ತೊಟ್ಟಿದ್ದ ನಾನು, ಬ್ರಶ್ ಮಾಡದ ಕಾರಣ ಮುಂದಿಟ್ಟು ಕಿತ್ತಳೆ ಬೇಡವೆಂದೇ, ಆದರೂ ಅವರ ಒತ್ತಾಯಕ್ಕೆ ತಿನ್ನಲೇ ಬೇಕಾಯಿತು,,,,,,, ಬಹಳ ಹೊತ್ತು ನಾನು ಮತ್ತು ಟೀಚರ್ ವಿಶ್ವದ ವಿವಿಧ ವಿಷಯಗಳ ಬಗ್ಗೆ, ಚೆನ್ನಾಗಿ ಹರಟಿದೆವು,,,,,,, ಮಗಳು ಮಾತ್ರ ಆಗಾಗ ಮುಗುಳ್ನಗುತ್ತ, ಟೀಚರ್ ನ ಗಮನವನ್ನು ಆಕೆಯ ಮೊಬೈಲ್ ತೋರಿಸುವುದರ ಮೂಲಕ ಸೆಳೆಯುತ್ತಾ, ಖುಷಿಗೊಂಡಿದ್ದಳು,

ಅಂದು ಕಂಡ ಪುಟ್ಟ ಹುಡುಗಿ, ಇದೀಗ “ಮಿಸ್ ಸೌತ್ ಕರ್ನಾಟಕ” ಫೈನಲ್ ರೌಂಡ್ ಗೆ ಆಯ್ಕೆ ಆಗಿದ್ದಾಳೆ, ಅವಳಿಗೆ ಓಟ್ ಮಾಡೋಕೆ ಚಿಕ್ಕದಾದ ಎರಡು ಸ್ಟೆಪ್

ಸ್ಟೆಪ್ ೧ : ಈ ಫೇಸ್ ಬುಕ್ ಪೇಜನ್ನ ಲೈಕ್ ಮಾಡಬೇಕು,,,, ಲಿಂಕ್ : https://www.facebook.com/Elixirsfashionevents/?__mref=message_bubble&pnref=story

ಸ್ಟೆಪ್ ೨ : ನಂತರ ಆಕೆಯ ಫೋಟೋ ಇರೋ ಈ ಲಿಂಕ್ ಗೆ ಹೋಗಿ ಅಲ್ಲಿ ಕೂಡ ಲೈಕ್ ಬಟನ್ ಒತ್ತಬೇಕು, ಲಿಂಕ್ :  https://m.facebook.com/story.php?story_fbid=413384149010160&substory_index=0&id=102276286787616&__mref=message_bubble

,
(ಆರನೇ ತಾರೀಕು ಲಾಸ್ಟ್ ಡೇಟ್)

,
ನೆನಪಿಡಿ : ಪೇಜ್ ಲೈಕ್ ಮಾಡದೆ, ಆಕೆಯ ಫೋಟೋ ಇರೋ ಲಿಂಕ್, ಲೈಕ್ ಮಾಡಿದರೆ, ಅದು ವ್ಯಾಲಿಡ್ ಅಲ್ಲ.

ದಯವಿಟ್ಟು ಈ ಪುಟಾಣಿ ಹುಡುಗಿಗೆ ಓಟ್ ಮಾಡಿ,,,,,

ಇನ್ನೊಂದು ವಿಷಯ, ಈಕೆಗೆ ಡ್ಯಾನ್ಸ್ ಅಂದ್ರೆ ಪಂಚಪ್ರಾಣ,,,,, ಈಕೆ ನಡೆಯೋದು ಕೂಡ ಡ್ಯಾನ್ಸ್ ಮಾಡ್ತಾನೆ,,,,,, ಡ್ಯಾನ್ಸ್ ನ ಭರದಲ್ಲಿ, ಓದಿಗೆ ತೊಂದರೆ ಆಗಬಾರದೆಂದು, ತನ್ನ ಡ್ಯಾನ್ಸನ್ನು ಸ್ವಲ್ಪ ಕಡಿಮೆ ಮಾಡಿದ್ದಾಳೆ,,,,

ಓಟ್ ಮಾಡೋಕೆ ಮರೀಬೇಡಿ

-ಜಿ.ಕೆ. ನವೀನ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: