Skip to content

ಹೆಣ್ಣೇ,,

ಮಾರ್ಚ್ 8, 2017

ಆಗೆಲ್ಲ ಅಡಿಗೆ ಮನೆಯ ಗೋಡೆಗಳನ್ನು ಬಡಿದು ಕೇಳಿದರೆ, ನನ್ನ ಅವ್ವನ ಕಣ್ಣೀರ ಕಥೆ ಹೊರ ಬರುತ್ತಿತ್ತು, ಆ ಗೋಡೆಗಳಿಗೆ ಕಣ್ಣಿಲ್ಲ, ಕಿವಿಯಿಲ್ಲ, ಆದರೂ ಅದು ನನ್ನವ್ವನ ಭಾವನಾತ್ಮಕ ಸ್ಥಳ, ನಮ್ಮೆಲ್ಲರ ಹೊಟ್ಟೆಗೆ ಅನ್ನವಿಕ್ಕುವ ಆಕೆಗೂ ಒಂದು ನೋವಿದೆ ಎಂದು ನಮಗೆ ಗೊತ್ತೇ ಇರಲಿಲ್ಲ, ಎಲ್ಲವನ್ನು ಸಹಿಸಿಕೊಂಡಳು ಆಕೆ, ಆಕೆಯ ಆ ಸಹನೆಯೇ ನಾವೆಲ್ಲಾ ತಿಂದುಂಡು ಬೆಳೆಯುವಂತೆ ಮಾಡಿದ್ದು, ನನ್ನೊಬ್ಬನ ಕತೆಯಲ್ಲ, ಎಲ್ಲ ಅಮ್ಮಂದಿರೂ ಹೀಗೆಯೇ, ಮಕ್ಕಳಿಗಾಗಿ ತಾವು ಕಲ್ಲು ಬಂಡೆಗಳಾಗುತ್ತಾರೆ, ಕಣ್ಣೀರನ್ನು ಮಕ್ಕಳ ಎದುರಲ್ಲಿ ಬಚ್ಚಿಡುತ್ತಾರೆ, ಅವ್ವನೆನ್ನುವ ಆ ಮಮತೆಯೇ ಹಾಗೆ, ಅವಳೊಳಗೆ ಅವಳು ಮಾತ್ರ ಅರಿತ ಭಾವ,

ಅವ್ವನೆನ್ನುವ ಭಾವ ಪ್ರತಿ ಗಂಡು ಹೆಣ್ಣಿನಲ್ಲೂ ಇದೆ, ಕೆಲವೊಮ್ಮೆ ಗಂಡು, ಹೆಣ್ಣಿನಂತೆಯೇ ದೊಡ್ಡ ತಾಯಿ ಆಗಬಲ್ಲ, ಆದರೆ ಅದನ್ನು ಕಾಪಾಡಿಕೊಳ್ಳಲಾರ, ಯಾವುದೋ ಮಾಯೆಯಲ್ಲಿ ನುಸುಳುವ ಏನೋ ಒಂದು ಭಾವ, ಆತ ತಾಯಿ ಆಗುವುದರಿಂದ ಹೊರ ತರಿಸಿ ಬಿಡುತ್ತದೆ.

ಮುದ್ದು ಹೆಣ್ಣಾಗಿ, ಬಾಚಿ ತಬ್ಬಿದ ಅವ್ವನ ಕೈಗಳ ಕೋಮಲತೆಗೆ, ಬೇರೆ ಯಾವುದೂ ಸಾಟಿ ಆಗುವುದಿಲ್ಲ, ಇವತ್ತು ಮಹಿಳಾ ದಿನ, ಇದ್ಯಾಕೆ ಈ ದಿನ ಇಟ್ಟರೋ ನನಗಂತೂ ಗೊತ್ತಿಲ್ಲ ಆದರೂ, ಅವ್ವನನ್ನು ಹೊಗಳಲು ದಿನ ಬೇಕಿಲ್ಲ, ಹೆಣ್ಣನು ನೆನಪಿಸಲು ಒಂದು ದಿನ ಸಾಕಾಗಲ್ಲ,

ಕೆಲವೊಮ್ಮೆ ಹೀಗನ್ನಿಸುವುದುಂಟು, ಎಲ್ಲೋ ಕುಳಿತ ದುಂಡು ಮುಖದ ಹುಡುಗಿಯ ತೊಡೆಗಳ ಮಡಿಲಲ್ಲಿ ಆತ್ಮೀಯತೆ ಸಿಗಬಹುದೇ ಎಂದು,,,,,,,,,,, ಬಹಳ ಬಾರಿ ಗಂಡು ಹುಡುಕುವುದು, ಅವ್ವನ ಮಡಿಲ ತಂಪನ್ನೇ ಹೊರತೂ ಬೇರೇನೂ ಅಲ್ಲ,,,,,,, ಮೆದು ಭಾವಗಳ, ಮೆಲು ನುಡಿಯ ಹುಡುಗಿಯೊಬ್ಬಳು ಕಂಡರೆ ಸಾಕು, ಹೊ ಇವಳು ಇಲ್ಲಿದ್ದಾಳ ಎನಿಸುವುದು, ನನಗಂತೂ ಸಾಮಾನ್ಯ, ಕೆಲವೊಮ್ಮೆ ದಣಿದು, ಬಳಲಿ ಬೆಂಡಾದಾಗ, ತಕ್ಷಣಕ್ಕೆ ತನ್ನ ಸ್ವರದ ಮಾಧುರ್ಯದಿಂದಲೇ ನೋವು ಶಮನಗೊಳಿಸುವ ಹೆಣ್ಣಿನ ಮಧುರತೆ ಸದಾ ಕಾಡುವ ಪ್ರಶ್ನೆ, ಎಲ್ಲಿಂದ ಬಂತು ಈಕೆಗೆ ಈ ಶಕ್ತಿ, ಎಂದು..

ಹೆಣ್ಣಿನ ಮೌನ, ಹೆಣ್ಣಿನ ವಯ್ಯಾರ, ಹೆಣ್ಣಿನ ಮಾಧಕತೆ, ಹೆಣ್ಣಿನ ಪ್ರೇಮ, ಎಲ್ಲವೂ ತರ್ಕಕ್ಕೆ ಮೀರಿದ್ದು, ಆಕೆ ಬದುಕಿನಲ್ಲಿ ವಹಿಸುವ ಪಾತ್ರಗಳೂ ಕೂಡ ಆಲೋಚನೆಗೆ ನಿಲುಕದ್ದು,

ಹೆಣ್ಣೇ,,,,,,,,, ಸದಾ ಹೆಣ್ಣಾಗಿರು, ಮಮತೆಯ ಹಣ್ಣಾಗಿರು,

Advertisements
2 ಟಿಪ್ಪಣಿಗಳು
  1. ಬಹಳ ಚೆನ್ನಾಗಿದೆ…

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: