ವಿಷಯದ ವಿವರಗಳಿಗೆ ದಾಟಿರಿ

ಪುಟ್ ಪುಟ್ ಕಥೆಗೊಳ್ – 2

ಮಾರ್ಚ್ 14, 2017

ಕೂಗು ಹಾಕಿದಳು, ಯಾರಿಗೂ ಕೇಳಿಸಲಿಲ್ಲ,,,,,,,, ಅತ್ತಳು, ಆಗಲೂ ಯಾರೂ ನೋಡಲಿಲ್ಲ,,,,,, ಬೀದಿಗೆ ಬಂದಳು, ಆಗಲೂ ಯಾರಿಗೂ ವ್ಯವಧಾನವಿರಲಿಲ್ಲ,,,,,,,,, ಕೊನೆಗೆ ಸತ್ತಳು, ಜನ ಆಕೆಯ ಫೋಟೋಗೆ ಹಾರ ಹಾಕಿ, ಯಾತ್ರೆ ಕೈಗೊಂಡರು, ಆತ್ಮಕ್ಕೆ ಶಾಂತಿ ಸಿಗಲೆಂದು

********************************

ನೆಲ ಹದಗೊಳುವಷ್ಟು ಮಳೆ, ಅಂದು ನೆಲವನ್ನು ಅಗೆಯುತ್ತಲಿದ್ದ ಅವನನ್ನು, ರಾಜಕಾರಣಿಯೊಬ್ಬ ಕರೆದು ಹೆಂಡ ಕುಡಿಸಿ, ಓಟು ಒತ್ತಲು ಹೇಳಿದ, ಒಂದಿನದ ಹೆಂಡದ ಆಸೆಗೆ ನೆಲ ಮರೆತು ಓಡಿದ ಆತ, ಮರುದಿನದಿಂದ ಮಳೆ ನಿಂತು ಹೋಯ್ತು, ರಾಜಕಾರಣಿ ಮರೆಯಾದ, ನೆಲ ಪೈರಿಲ್ಲದೆ ಬರಡಾಯ್ತು,

********************************

ಪುಟಾಣಿ ಮಗು ಕೇಳುತ್ತಿತ್ತು,
ಅವ್ವ, ಎರೆಹುಳಕ್ಕೆ ಮಣ್ಣಲ್ಲಿ ಉಸಿರುಗಟ್ಟಲ್ಲವೇ?
ಅಪ್ಪ, ಗಿಡ ಕಾಡಿದರೆ ರಕ್ತ ಯಾಕೆ ಬರಲ್ಲ?
ಅಣ್ಣ, ನಿನ್ನ ಸೈಕಲ್ಲು ಹಿಂದೆ ಯಾಕೆ ಹೋಗಲ್ಲ?
ಅಕ್ಕ, ಕಾಡಿಗೆ ಯಾಕೆ ಹಚ್ಚಬೇಕು?
ಅಜ್ಜ, ನನ್ನ ಕೂದಲೂ ನಿನ್ನಷ್ಟೇ ಬಿಳಿ ಯಾಕಿಲ್ಲ ?
ಅಜ್ಜಿ, ನಿನ್ನ ಚರ್ಮ ಯಾಕೆ ಅಷ್ಟು ಮೃದು ?

ಎಲ್ಲರೂ ಸಾವಧಾನದಿಂದ ಉತ್ತರಿಸಿದರು

ಆ ಮಗುವೀಗ ಬೆಳೆದು, ದೊಡ್ಡ ವಿಜ್ಞಾನಿ,,,,,,, ಎಲ್ಲರ ಮನೆಯ್ಲಲೂ ಇರುತ್ತದೆ ಅಂತದೊಂದು ಮಗು, ನಾವು ಪ್ರೋತ್ಸಾಹಿಸಬೇಕು

********************************

ಯಾರಿಗೂ ಹೆದರದ ಧೈರ್ಯವಂತರು, ಸೋಮವಾರ ಬೆಳಿಗ್ಗೆಗೆ ಹೆದರಿದರು.

********************************

ಕೋವಿಯ ಮುಂದೆ ಹತಾಶನಾಗಿ ಕುಳಿತ ದಾಂಡಿಗನನ್ನು, ಕೋವಿಯ ಹಿಂದಿದ್ದವ ಗರ್ವದಲ್ಲಿ ನೋಡಿದ, ಟ್ರಿಗರ್ ಒತ್ತಿದಾಗ, ಮದ್ದುಗುಂಡು ಹಾರಲಿಲ್ಲ,,,,,,,,,,, ಮುಂದಿನದು ಹೇಳಬೇಕಿಲ್ಲ

********************************

ಎಮ್ಮೆ ಮೇಯಿಸುವ ಕಾಯಕ ಆತನಿಗೆ, ಮಂಗಳ ಗ್ರಹದಲ್ಲಿ ನೀರು ಹುಡುಕಾಟದ ಸುದ್ಧಿ ಕೇಳಿ ಒಳಗೊಳಗೇ ನಕ್ಕ, ನಮ್ಮ ಕೆರೆಯಲ್ಲೇ ನೀರಿತ್ತಲ್ಲ, ಕೇಳಿದರೆ ನಾನೇ ಹೇಳುತ್ತಿದ್ದೆ ಎಂದು.

ಮೊನ್ನೆ ಕೆರೆ ಬತ್ತಿದೆ ಎಂದು, ಮಳೆಗಾಗಿ ಕಾಯುತ್ತಿದ್ದ,

ಮಂಗಳ ಗ್ರಹದ ನೀರು ಹುಡುಕಲು ಹೊರಟ ಜನ, ಭೂಮಿಯಲ್ಲಿ ಇರುವ ನೀರನ್ನು ಉಳಿಸಿಕೊಳ್ಳಲಿಲ್ಲ,

********************************

ಕಾಡು ಕಾಯಲು ಬಂದ, ಫಾರೆಸ್ಟ್ ಆಫೀಸರಿನ ಮನೆಯ, ಮಾಳಿಗೆ ಹಸಿ ಬೀಟೆ ಮರದ ಪರಿಮಳ ಹೊಂದಿತ್ತು,

********************************

ಮಗು ಮತ್ತು ಅವ್ವ, ದೇವಸ್ಥಾನಕ್ಕೆ ಹೋದರು, ಕೈಮುಗಿದರು,
(ದೇವಸ್ಥಾನದಿಂದ ಮನೆಗೆ ಬರುವಾಗ)
ಅವ್ವ : ಪುಟ್ಟಾ ಏನಂತ ಬೇಡ್ಕೊಂಡೇ ದೇವರ ಹತ್ರ,
ಮಗು : ಮಮ್ಮಿಯ ಆಫೀಸು ಸುಟ್ಟು ಹೋಗಲಿ ಅಂತ,
ಅವ್ವ : ಯಾಕೆ,
ಮಗು : ಆಗ ನಾನು ಯಾವಾಗಲೂ ನಿನ್ನ ಜೊತೆಯೇ ಇರಬಹುದಲ್ಲ,

ಮರುದಿನ ಅವ್ವ ಆಫೀಸು ಕೆಲಸಕ್ಕೆ ರಾಜೇನಾಮಿ ನೀಡಿ, ಮನೆಯಲ್ಲಿಯೇ ಹೊಲಿಗೆ ಶುರು ಮಾಡಿದಳು, ಅದೀಗ ದೊಡ್ಡ ಕಂಪನಿ

********************************

ಹೆದ್ದಾರಿಯ ಬದಿಯ ಚಿಕ್ಕ ಕಾಲುದಾರಿ, ನನ್ನನ್ನು ನನ್ನ ಮನೆಗೆ ಕರೆದೊಯ್ಯಿತು,

ಹೆದ್ದಾರಿಗೆ ನನ್ನ ಮನೆಯ ದಾರಿ ಗೊತ್ತಿರಲಿಲ, ಆದರದು ದೂರದ ರಾಜ್ಯ ದೇಶವನ್ನೆಲ್ಲಾ ಸಂಪರ್ಕಿಸುತ್ತಿತ್ತು,

********************************

ಅಪ್ಪನ ಪ್ರೇಯಸಿಯನ್ನು ಅವ್ವ ಗೌರವದಿಂದ ಒಳ ಕರೆದಳು, ಅಪ್ಪನ ಎದೆ ದಸಕ್ ಎಂದಿತು

ಮತ್ತೆಂದೂ ಅಪ್ಪ ಅವನ ಪ್ರೇಯಸಿಯನ್ನು ಭೇಟಿ ಮಾಡಲೇ ಇಲ್ಲ

********************************

ಕತ್ತಲಾಯಿತು,
ಕತ್ತಲೆ ಆಗಿದ್ದಲ್ಲ, ಬೆಳಕು ಕಮ್ಮಿ ಆಗಿದ್ದು

,

GK Naveen Kumar

,

7 ಟಿಪ್ಪಣಿಗಳು
  1. ಪುಟ್ಟ ಕಥೆಗಳು ಚೆಂದ ಇದಾವೆ ,, ಇದಕ್ಕೊಂದು ಒಳ್ಳೆ ಟೈಟಲ್ ಇಡಬಹುದಲ್ವಾ ನೀವು ?
    ನನ್ನ ಅನಿಸಿಕೆ ,,

    Liked by 1 person

ನಿಮ್ಮ ಟಿಪ್ಪಣಿ ಬರೆಯಿರಿ