Skip to content

ಹುಡುಕು ನಿನ್ನನು

ಮಾರ್ಚ್ 23, 2017

ನೀನು ಇಲ್ಲಿ,,,,, ನೀನೆಂದು ಹೇಳಿದವರು ಯಾರು
ಜಾಸ್ತಿ ಬೀಗಬೇಡ,
ಹೆತ್ತವರು ಕಲಿಸಿದ ಭಾಷೆ,
ಅವರು ನೀಡಿದ ಅನ್ನ,
ಇನ್ನ್ಯಾರೋ ಹೇಳಿಕೊಟ್ಟ ಧರ್ಮ
ಯಾರೋ ಕಲಿಸಿದ ಅಕ್ಷರ

ಇದೆಲ್ಲ ನನ್ನದೇ ಎಂದು ಹಿಗ್ಗಬೇಡ
ನೀ ಬರುವ ಮುನ್ನವೂ ಇದಿತ್ತು
ನೀ ಹೋದ ನಂತರವೂ ಇರಬಹುದು
ನೀನ್ಯಾರು ಇಲ್ಲಿ,
ಬರಿಯ ದಾರಿಹೋಕ

ಪ್ರೀತಿ ನಿನ್ನದಲ್ಲ, ಪ್ರೇಮ ನಿನ್ನದಲ್ಲ,
ಅನುಕೂಲಕ್ಕೆ ನೀನು ಇಟ್ಟುಕೊಂಡ ಹೆಸರು,

ಹೆಸರೂ ನಿನ್ನದಲ್ಲ,,,
ಹೆಸರಿನ ಅಕ್ಷರಗಳು ನಿನ್ನದಲ್ಲ

ಉದ್ಯೋಗದ ಹೆಸರಲ್ಲಿ,
ಒಂದೇ ರೂಮಿನಲ್ಲಿ ಗಂಟೆಗಟ್ಟಲೆ ಕುತ್ತು
ಸಾಧಿಸಿದ್ದು ಏನೆಂದು ಸಾಯುವ ಹಿಂದಿನ ದಿನ ಯೋಚಿಸು
ಇಡೀ ಜಗತ್ತೇ ನಿನ್ನ ನೋಡಿ ನಗುತ್ತದೆ
ಆಗೊಂದು ಸಣ್ಣ ಅರಿವು,,,,
ಹೊ
ಈ ಜಗತ್ತಿಗೆ ಹೆದರಿದೇನೆ ನಾ ಇಷ್ಟು ದಿನ
ಈ ಜಗತ್ತನ್ನು ಪ್ರೇಮಿಸಿದೆನೇ ನಾ ಇಷ್ಟು ದಿನ

ಆರೋಗ್ಯ ಕುಸಿದು, ಆಯಸ್ಸು ಬಸಿದು
ಕೃಶವಾಗಿ ಕುಳಿತ ದೇಹದೊಳಗೆ,
ಅದೆಷ್ಟು ಹಸಿರು ಮನಸ್ಸಿದ್ದರೂ
ಯಾರೂ ತಲೆಕೆಡಿಸಿಕೊಳ್ಳರು,

ಎಲ್ಲರೂ ಓಡುವುದು, ಎಲ್ಲರೂ ಬದುಕುವುದು
ಯಾವುದೋ ಮುಂದೊಂದಿನ ಬರುವ ಅಂಬರಕ್ಕೆ

ಕಾಲವೆಂಬ ಮಾಂತ್ರಿಕ ಸುಮ್ಮನಿರುವುದಿಲ್ಲ
ಸರ್ವವನೂ ಸುಟ್ಟು ಸುಡುಗಾಡು ಮಾಡುತ್ತಾನೆ
ಎದ್ದು ನೋಡು ಮನುಜ,,,,,,,,
ಇಲ್ಲಿರುವುದು ನೀನಲ್ಲ,,,,,,, ನಿನ್ನದೊಂದು ಛಾಯೆ ಅಷ್ಟೇ
ಹುಡುಕು ನಿನ್ನನ್ನು, ಇರುವ ಒಂದು ಛಾಯೆ ಕಳೆದು ಹೋಗುವ ಮುನ್ನ

ಅಯ್ಯೋ ನಾನೆಲ್ಲಿ ಕಳೆದು ಹೋದೆ, ನನ್ನ ಛಾಯೆಯನು ಇಲ್ಲಿ ಬದುಕಲು ಬಿಟ್ಟು

,

-GK Nveen kumar

,

Advertisements
2 ಟಿಪ್ಪಣಿಗಳು
  1. ವಾವ್! ಬಹಳ ಚೆನ್ನಾಗಿದೆ…

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: