Skip to content

ಪುಟ್ ಪುಟ್ ಕಥೆಗೊಳ್ – 3

ಏಪ್ರಿಲ್ 7, 2017

ಅವನು ಲೌಕಿಕದಿಂದ ಪಾರಾಗಲು
ದೂರ ದೂರ ಓಡಿದ
ಆದರೆ ನೆಮ್ಮದಿ ಸಿಗಲಿಲ್ಲ,

ಅವನ ಮನಸ್ಸಿನ ನೆರಳು ಅವನನ್ನು ಬಿಡಲಿಲ್ಲ

*********************************************

ಸೇತುವೆಯಿಂದ ನದಿಗೆ ಬಿದ್ದು ಪ್ರಾಣ ಕಳೆದುಕೊಳ್ಳಲು
ತಯಾರಾಗಿ ನಿಂತ ಆತ

ನದಿಯ ತೀರದಲ್ಲಿ ಹಣ್ಣು ಹಣ್ಣು ಮುದುಕಿ,
ಆಕೆಯ ಸೀರೆ ಒಗೆಯುತ್ತಿದ್ದಳು,
ಅದನ್ನು ನೋಡಿ, ಕಿರುನಗೆ ನಕ್ಕು ಕೆಳಗಿಳಿದ

ದೀರ್ಘ ಬದುಕು, ಒಂತರ ಸ್ಫೂರ್ತಿ

*********************************************

ಬಾಸಿಗೆ ಸದಾ ಬಯುತ್ತಾ, ನಡೆದಾಡುವ ಒಬ್ಬ
ವರ್ಷಗಳ ನಂತರ ಬಾಸ್ ಆದ,

ಅವನ ಮೇಲೆ ಅವನಿಗೆ ನಾಚಿಕೆ ಆಗಿತ್ತು,

ಮಗಳು ಅವ್ವನಾದಾಗ
ಮಗ ಅಪ್ಪನಾದಾಗ
ವಿದ್ಯಾರ್ಥಿ ಶಿಕ್ಷಕನಾದಾಗ
ಆ ಪದವಿಯ ಕಷ್ಟ ಅರಿವಿಗೆ ಬಂದಿತ್ತು

“ಬದುಕು ಸಮುದ್ರದ ಹಾಗೆ,
ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ,
ಪ್ರತಿಫಲ ಕೊಟ್ಟೇ ಕಳಿಸುತ್ತದೆ”

*********************************************

ಬಿಟ್ಟು ಹೋದ ಪ್ರೇಮಿಯ ನೆನಪಲ್ಲಿ
ಆಕೆ ಸಾಯಲು ಹೊರಟಳು

ಅವಳ ಪುಟ್ಟ ತಮ್ಮ ಅವಳಿಗಾಗಿ
ಅವನ ಅರ್ಧ ಐಸ್-ಕ್ರೀಮ್ ತೆಗೆದಿಟ್ಟ ವಿಷಯ ನೆನಪಾಗಿ
ಮತ್ತೆ ಬದುಕಿದಳು

ಪ್ರೇಮ ಮಾತ್ರ ಬದುಕಿಸಬಲ್ಲದು ಎಲ್ಲವನೂ,

*********************************************

ಪ್ರತಿ ಒರಟನ ಎದೆ ಹಿಡಿದು
ಅಲ್ಲಾಡಿಸಿ ನೋಡಿದರೆ,

ಅವನು ಕಳೆದುಕೊಂಡ ಪ್ರೇಮದ
ಅಗಾಧ ನೋವು ಪದಗಳಾಗಿ ಉದುರುತ್ತವೆ

*********************************************

ಪ್ರತಿ ದಿನವೂ ರುಚಿಯಾದ
ಅಡುಗೆ ಮಾಡುತ್ತಿದ್ದ ಅಡುಗೆಯವಳು
ಒಂದಿನ ಬರಲಿಲ್ಲ,,

ಮನೆಯಲ್ಲಿ ಒಂತರ ಮೌನ

ಬದುಕು ನಿಂತಿರುವುದೇ ಹಸಿವನ್ನು
ತಣಿಸುವವರ ಮಡಿಲ ಮೇಲೆ

*********************************************

ನೆಲದ ಮೇಲೆ ಮಗು ಬಿದ್ದರೆ
ಇನ್-ಫೆಕ್ಷನ್ ಆಗುತ್ತದೆ ಎಂದು ದೊಡ್ಡವರು
ಅದನ್ನು ಮಣ್ಣಿನಲ್ಲಿ ಆಡಲು ಬಿಡಲೇ ಇಲ್ಲ

ರಸ್ತೆ ಬದಿಯ ಮಗು, ಮಣ್ಣಿನಲ್ಲಿ ಆಡುವ ಪರಿ ಕಂಡು
ತಾನೆಷ್ಟು ಬಡವ ಎಂದು ಅಳುತ್ತಿತ್ತು ಈ ಮಗು

*********************************************

ಪ್ರತಿ ದಿನ ಮುಖ ಸಿಂಡರಿಸಿಕೊಂಡಿರುತ್ತಿದ್ದ ಹೆಂಡತಿ,

ಒಂದಿನ ನಗುಮುಖದಲ್ಲಿ ಸ್ವಾಗತಿಸಿದಳು

ಅವನಿಗೆ ಅದೇ ಸ್ವರ್ಗ

ಅಂದು ಅವನು ಕುಡಿದು ಬಂದಿರಲಿಲ್ಲ

-ಜಿ.ಕೆ ನವೀನ್ ಕುಮಾರ್

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: