ಸಂಚಾರಿ ಹಾಡು – ದಯವಿಟ್ಟು ಗಮನಿಸಿ
ಕೆಲವೊಮ್ಮೆ ನಾವು ಭಾವನಾತ್ಮಕವಾಗಿ ಮಿಡಿಯುವಾಗ, ಅಥವಾ ದುಃಖ ಗೊಂಡಾಗ, ಅಥವಾ ಖುಷಿಯಲ್ಲಿದ್ದಾಗ, ಯಾವುದಾದರೂ ಹಾಡನ್ನು ನೋಡಿದರೆ, ಅಥವಾ ಕೇಳಿದರೆ ಅದು ನಮ್ಮ ಮನದ ಭಾವಗಳನ್ನೇ ನಮ್ಮ ಮನಸ್ಸಿನ ಕನ್ನಡಿ ಮೇಲೆ ರೂಪಿಸಿ, ಒಂತರ ಹಸಿ ಹಸಿ ವಿಸ್ಮಯಗಳನ್ನು ಮನಸ್ಸಿನೊಳಗೆ ಹುಟ್ಟು ಹಾಕುತ್ತದೆ, ಅಂತಹ ಹಾಡಿನ ಭಾವ ಬಹಳ ಕಾಲ ಕಾಡಿ, ನಾವು ಮತ್ತೊಮ್ಮೆ ಆ ಹಾಡು ಕೇಳಿದಾಗ, ಮೊದಲ ಬಾರಿ ಯಾವ ಪರವಶಕ್ಕೆ ಒಳಗಾಗಿದ್ದೇವೋ ಅದೇ ಪರವಶದೊಳಗೆ ಹೋಗುತ್ತೇವೆ, ಅದೇ ಹಾಡಿನ ತಾಕತ್ತು,,,,,
ಅಂತಹ, ಸೆಳೆಯುವ ಹಾಡೊಂದು ಕೇಳಿಸಿಕೊಂಡೆ, ನೋಡಿದೆ,,,,,,, ಸಾಲುಗಳ ಜೊತೆ, ಅಲೆಮಾರಿಯಾಗಿ ಅಲೆದೆ,,,,,,,,
ಸೆಳೆಯುತ್ತದೆ ನಮ್ಮನ್ನು, ಅದರ ಆಳಕ್ಕೆ,,,,,, ಬಿಡುವಾದಾಗ, ಈ ಹಾಡನ್ನು ಕೇಳಿ, ಅನುಭವಿಸಿ, ಹಿಮಾಲಯದ ತಪ್ಪಲಲ್ಲಿ ಧ್ಯಾನಿಸಿ ಬಂದ ಅನುಭವ ಸಿಗುತ್ತದೆ
,
,
ಇದರ ನಿರ್ದೇಶಕರು : ರೋಹಿತ್ ಪದಕಿ
ಚಿತ್ರ : ದಯವಿಟ್ಟು ಗಮನಿಸಿ
ಉಳಿದ ವಿವರಗಳು, ಹಾಡಿನಲ್ಲಿಯೇ ಇವೆ
Advertisements
ನಿಮ್ಮ ಟಿಪ್ಪಣಿ ಬರೆಯಿರಿ