Skip to content

ಕನ್ನಡತನದ ಮುನ್ನೋಟ

ಏಪ್ರಿಲ್ 27, 2017

ಈಗಿನ ಯುಗದಲ್ಲಿ ನಮ್ಮ ಅಸ್ತಿತ್ವಕ್ಕೆ ನಾವು ಹೋರಾಡಬೇಕು, ನಮ್ಮ ಅಸ್ಮಿತೆಯನ್ನು ನಾವು ಬಿಟ್ಟುಕೊಡದಂತೆ ಕಾಪಾಡಿಕೊಳ್ಳಬೇಕು, ಕೊನೆಗೆ ನಮ್ಮದೇ ಮನೆಯಲ್ಲಿ, ನಾವು ಹುಟ್ಟಿದಾಗಿನಿಂದ ಕೇಳಿದ, ಆಡಿದ, ಸವಿದ ಭಾಷೆಯನ್ನು ಕಾಪಾಡಿಕೊಳ್ಳಲು ನಮ್ಮವರೊಂದಿಗೇ ಹೋರಾಡಬೇಕು ಎಂಬುದು ಒಂತರ ವಿಪರ್ಯಾಸ,

ಆದರೂ, ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಾವು ಮಾಡಲೇ ಬೇಕು. ಅನ್ಯ ಭಾಷೆಯನ್ನು ತೆಗಳಿದಾಕ್ಷಣ, ಅಥವಾ ಅನ್ಯ ಭಾಷೀಯರನ್ನು ದ್ವೇಷಿಸಿದಾಕ್ಷಣ ನಮ್ಮ ಭಾಷೆ ಬೆಳೆಯುವುದಿಲ್ಲ,,,,

ನಮ್ಮ ಭಾಷೆ ಬೆಳೆಯಲು, ನಾವು ಮಾಡಬೇಕಾಗಿದ್ದು ಇಷ್ಟೇ “ನಾವದನ್ನು ಬಳಸಬೇಕು, ನಮ್ಮ ಮಾತೃ ಭಾಷೆಯಲ್ಲಿ ಮಾತನಾಡಬೇಕು, ನಮ್ಮ ಮಾತೃ ಭಾಷೆಯಲ್ಲಿ ಬರೆಯಬೇಕು, ಬೆರೆಯಬೇಕು, ಓದಬೇಕು, ನೋಡಬೇಕು, ಮನೆಯ ಮಕ್ಕಳಿಂದ ಹಿಡಿದು, ದೊಡ್ಡವರ ತನಕ, ಮಾತೃಭಾಷೆಯಲ್ಲಿ ಸಂಭಾಷಿಸಬೇಕು”

ಕೈಲಾದಷ್ಟು ಕನ್ನಡತನವನ್ನು ಹರಡಬೇಕು, ಎಂತೆಂತಹ ಮಹಾನ್ ವಿಜ್ಞಾನಿಗಳನ್ನು, ಮತ್ತು ಮಹಾಪುರುಷರನ್ನು ನೋಡಿ, ಅವರೆಲ್ಲ ಅವರವರ ಮಾತೃಭಾಷೆಯಲ್ಲೇ ಉಸಿರಾಡಿದವರು, ಕಲಿತವರು, ಬೆಳೆದವರು. ಮತ್ಯಾಕೆ ನಮ್ಮ ಪೀಳಿಗೆಗೆ ಸಾಧ್ಯವಿಲ್ಲ ? ಏಕೆಂದರೆ, ನಾವು ನಂಬುತ್ತಿರುವ ಸುಳ್ಳು, ಹೌದು, ಆಂಗ್ಲಭಾಷೆ ಗೊತ್ತಿದ್ದ ಮಾತ್ರಕ್ಕೆ, ಎಲ್ಲವೂ ತಿಳಿದಂತೆ, ಎನ್ನುವ ಸುಳ್ಳು. ಮನುಷ್ಯನಿಗೆ ಈಗ ಬೇಕಾಗಿರುವುದು, ಭಾವಗಳನ್ನು ಬೆಸೆಯುವ, ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಭಾಷೆಯೇ ಹೊರತು, ಬರಿಯ ಕಾಟಾಚಾರಕ್ಕೆ ಸಂವಹಿಸುವ ಭಾಷೆಯಲ್ಲ,

ನಮ್ಮ ಕನ್ನಡದ ಮಟ್ಟಿಗೆ, ಅನೇಕ ಜನ ಕನ್ನಡ ಕಟ್ಟುವ, ಬೆಳೆಸುವ, ಉಳಿಸುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ, ಕನ್ನಡತನವನ್ನು ಹಾಸು ಹೊದ್ದಿದ್ದಾರೆ, ಅಂತವರಲ್ಲಿ ಒಬ್ಬರು “ವಸಂತ್ ಶೆಟ್ಟಿ”. ನಾನು ಚಿಕ್ಕವನಿದ್ದಾಗಿನಿಂದ ಅವರ ಬರಹಗಳನ್ನು ಓದುತ್ತಿದ್ದೇನೆ, ಅವರ ಬರಹಗಳಲ್ಲಿ ಇರುವುದು ಅಪ್ಪಟ ಕನ್ನಡತನ, ಅವರು ಹೇಳುವುದು ಕನ್ನಡ ಮಾತ್ರ, ಅವರೀಗ ಹೊಸ ಕನ್ನಡ ಪುಸ್ತಕ ಮಳಿಗೆ ಪ್ರಾರಂಭಿಸಿದ್ದಾರೆ, ಜೊತೆಗೆ ಆನ್ಲೈನ್ ಪುಸ್ತಕ ಮಾರಾಟ ಮಳಿಗೆ ಕೂಡ, ಅದಲ್ಲದೆ ಆಗಾಗ ಕನ್ನಡತನ ಸಂವಾದಗಳು, ಚರ್ಚೆಗಳು, ನಡೆಯುತ್ತವೆ. ಅದರ ಹೆಸರು ಮುನ್ನೋಟ

ಇದು ವೆಬ್ ವಿಳಾಸ : https://munnota.com

ಕನ್ನಡಿಗರು ಹಾಗು ಕನ್ನಡೇತರರು ಖಂಡಿತಾ ಒಮ್ಮೆ ಭೇಟಿ ಕೊಡಬಹುದು.

ನಮ್ಮ ಭಾಷೆಯೇ, ನಮ್ಮ ಶಕ್ತಿ, ನಮ್ಮ ಉಸಿರು, ನಾವೇ ಮುಂದೆ ನಿಂತು ಕಾಪಾಡೋಣ, ಬಳಸುತ್ತ ಬೆಳೆಸೋಣ.

-ಜಿ.ಕೆ ನವೀನ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: