Skip to content

-: ಹಳೆ ಫೋಟೋದ ನಾನು :-

ಜೂನ್ 9, 2017

ಮದುವೆಯಾಗುವ ಹುಡುಗಿ ಕೇಳಿದಳು
ನಿನ್ನದೆರಡು ಭಾವಚಿತ್ರ ಕೊಡು ಎಂದು

ಕೊಡುವ ಮುನ್ನ ಯೋಚಿಸಿದೆ

ನನ್ನದೇ ಎರಡು ಭಾವಚಿತ್ರಗಳು
ಆದರೆ
ಎರಡೂ ಸುಳ್ಳೂ,
ಎಂದೋ ಬದುಕಿದ್ದ ನನ್ನಂತೆ ಕಾಣುವ ಅವು
ಮುಂದೆ ಎಂದಿಗೂ ಬದುಕಲಾರವೂ,

ಕ್ಷಣ ಕ್ಷಣಕ್ಕೂ ಬದಲಾಗುವ
ಮನಸಿನ ಭಾವಗಳ, ಆಲೋಚನೆಗಳ
ದೇಹದ ರಚನೆಗಳ ವಿರುದ್ಧ ಹೋಗಿ
ಮೊಬೈಲಿನಲ್ಲಿ ಸೆರೆ ಹಿಡಿದ ಎರಡು
ಭಾವಚಿತ್ರಗಳು, ನನ್ನನು ಹೇಗೆ ಪ್ರತಿನಿಧಿಸಬಲ್ಲವು ?

ಆಕೆ ಅವಳ ಗೆಳತಿಯರಿಗೆ ಫೋಟೋ ತೋರಿಸಿ
ಇವನನ್ನೇ ನಾನು ಮದುವೆಯಾಗುವುದು ಎಂದರೆ !!!
ಆ ಫೋಟೋದಲ್ಲಿ ನಾನು ಇರುವುದೇ ಇಲ್ಲ
ಅಥವಾ
ಆ ಫೋಟೋದ ನಾನು ನೈಜವಾಗಿ ಎದ್ದು ಬರಲಾಗುವುದಿಲ್ಲ
ಅದು ಇಂದಿನ ನಾನಲ್ಲ,

ಹಾಗಾದರೆ ಆ ಹುಡುಗಿ ಒಪ್ಪಿದ್ದು ಯಾರನ್ನ?

ಅವಳನ್ನು ಭೇಟಿ ಮಾಡಿದಾಗ ಉದ್ವೇಗ,
ಅವಳು ಅಂದು ನೋಡಿ,,, ಒಪ್ಪಿ ಹೋದ ಹುಡುಗ ಇಲ್ಲಿಲ್ಲ,,,,,
ಇದು ನಾನು, ಇಂದಿನ ನಾನು,,,,,
ಅವನು ಅಂದಿಗೆ ಕೊನೆಯಾಗಿದ್ದಾನೆ

ಇದನ್ನೆಲ್ಲಾ ಅವಳ ಎದುರು ಅರುಹಿದೆ,

ಆಕೆ ನನ್ನ ನೋಡಿ ನಕ್ಕು,,,,,,,
ನಾನೂ ಅಂದಿನವಳಲ್ಲ,,,,,,,,
ನೀನು ಹೊಸದಾದ ಹಾಗೆ, ನಾನೂ ಹೊಸದಾಗಿದ್ದೇನೆ,
ಪ್ರತಿ ದಿನವೂ ನಾವು ಹೊಸಬರಾಗಿ
ಹಳೆಯ ಪೊರೆ ಕಳಚಿ
ಮತ್ತೊಮ್ಮೆ,,,, ಮಗದೊಮ್ಮೆ,,,, ಹೊಸದಾಗಿ ಪ್ರೇಮಿಸೋಣ,
ಪ್ರೇಮಿಸತ್ತಲೇ ಇರೋಣ,,,,,,

ಫಸ್ಟು ಮದುವೆಯಾಗೋಣ ಎಂದು ತಲೆಗೆ ಕುಕ್ಕಿದಳು.

-ಜಿ.ಕೆ ನವೀನ್ ಕುಮಾರ್

 

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: