Skip to content

ಅಪ್ಪನೆಂಬ ಸೂರ್ಯ

ಜೂನ್ 21, 2017

ಬರಡು ಚಂದ್ರ,
ಯಾರದೋ ಬೆಳಕನ್ನು
ತನ್ನದೆಂದು ನೀಡಿದರೆ,,,,,,,,
ವಾವ್ ಬೆಳದಿಂಗಳು ಎಂದು,
ಚಂದ್ರನನು ಹೊಗಳಿದ ಮಾನವ !

ತನ್ನನೇ ಸುಟ್ಟುಕೊಂಡು
ಬೆಳಕು ನೀಡಿದ ಸೂರ್ಯನನು
ನೆನಪಿಸಿಕೊಳ್ಳಲೇ ಇಲ್ಲ…….

ಆ ಸೂರ್ಯ ಥೇಟ್ ನನ್ ಅಪ್ಪನಂತೆ

ಕಣ್ಣಿಗೆ ಕಾಣುವ
ಹೊನ್ನ ಬಣ್ಣದ ಮನೆಯ ಗೋಡೆಗಳ ಹಿಂದೆ
ನನ್ನಪ್ಪನ ದುಡಿದು ಸುಸ್ತಾದ ಕಪ್ಪು ಚರ್ಮವನ್ನು
ಮರೆತು, ನಾನು ಮೈಮರೆತಂತೆ

*********************************************

ಆ ಸೂರ್ಯ
ಹಗಲು ರಾತ್ರಿ
ಎಡೆಬಿಡದೆ ದಣಿದು
ಒಂದಷ್ಟು ಹೊತ್ತು ಕೆಂಪಾಗಿ ಮಿನುಗಿದರೆ
ಅಬ್ಬಾ ಎಂತ ಬಿಸಿ-ಸೂರ್ಯ ಎಂದು
ಜರೆವ ಜನ,,,,,,,,
ಅವನು ನೀಡಿದ ಬೆಳಕನು ತಿಂದು ತೇಗಿ
ಸುಮ್ಮನೆ ಮಲಗುವ ಜನ
ಸೂರ್ಯನೆದೆಯ ಅಳಲನ್ನು ಕೇಳಲಿಲ್ಲ,

ಅಪ್ಪನ ಕೆಂಪು ಕಂಗಳ
ಹಿಂದೊಂದು ಪ್ರೇಮದ ಸಾಗರವನು
ಅರ್ಥಮಾಡಿಕೊಳ್ಳಲಾಗದೆ
ನಾನು ಸಿಟ್ಟುಗೊಂಡ ಹಾಗೆ

*********************************************

ಸಾವಿರ- ಲಕ್ಷ – ಕೋಟಿ
ಹಣದ ಹಿಂದೆ,
ಬೆನ್ನೆಲುಬಾಗಿ ನಿಂತ
ನನ್ನಪ್ಪ ಜೇಬಿನಿಂದ ತೆಗೆದು ಕೊಟ್ಟ
ನಾಲ್ಕಾಣೆ
ಚಲಾವಣೆ ನಿಲ್ಲಿಸಿದ ಹಾಗೆ,,,,,
ಅಪ್ಪನ ಭಾವಗಳು
ಚಲಾವಣೆಗೆ ಬಾರದ ನೋಟಿನಂತೆ ಒಂಟಿಯಾಗಿ ಬಿದ್ದಿವೆ

*********************************************

ಅಪ್ಪನ ಭಾವಗಳಿಗೆ
ರೂಪ ಕೊಟ್ಟು ಎದುರು ನಿಲ್ಲಿಸಿದರೆ
ಹೊರಗೆ ಗಟ್ಟಿ ಬಂಡೆಯಂತೆ ಕಾಣಬಹುದೇನೋ
ಆದರೆ ಒಳಗೆ
ಇನ್ನೊಬ್ಬ ಅವ್ವ ಆತ,,,,,,,,,
ಅಷ್ಟೊಂದು ಮಮತೆಯ ಮೃದು,

-ಜಿ.ಕೆ ನವೀನ್ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: