Skip to content

ಹೆಣ್ಣೊಬ್ಬಳ ಭಾವ, ಯಾರೂ ಅಲ್ಲದವನಿಗೆ

ಜೂನ್ 28, 2017

ಬಾಲ್ಯದಲ್ಲಿ ಕಂಡ ಹುಡುಗ
ದೂರ ಕಣ್ಮರೆಯಾದರೂ,
ನನ್ನೊಳಗೆ ಅವನದೊಂದು ಚಿಕ್ಕ ಛಾಯೆ
ಎಡೆಬಿಡದೆ ಕಾಡುತ್ತಿದೆ

ಆಗಾಗ ತಾಕುತ್ತಿದ್ದ
ಅವನ ಕಣ್ಣೋಟ, ನನ್ನೆದೆಯನ್ನು ಈಗಲೂ
ಚುಚ್ಚುತ್ತಿದೆ,

ಹೆಚ್ಚು ಏನು ತಿಳಿಯದ
ಹೆಚ್ಚು ಏನು ಬಯಸದ
ಪುಟ್ಟ ಲಂಗ, ಪುಟ್ಟ ಅಂಗಿ,
ಒಂದು ಶಾಲೆಯ ಚೀಲ,
ಮತ್ತೆ ಮಲೆನಾಡ ಮಳೆ,
ಇವೆಲ್ಲವುದರ ನಡುವೆ ಅವನ ನೆನಪು
ಮಾಸಿಲ್ಲ,,,,,

ಅದೇನು ಹುಚ್ಚು ಪ್ರೇಮವಲ್ಲ,
ಹಠಮಾಡಿ ಸೇರುವ ಹಂಬಲವಲ್ಲ,
ಅದೊಂದು ಸಣ್ಣ ಶುದ್ಧ ಭಾವ,
ಅವನು ನನ್ನೆಡೆಗೆ ನೋಡಿದಾಗ ಆದ,
ಹೆಸರಿಲ್ಲದ ಎದೆಯೊಳಗಿನ ಬಿಸಿ ಶಾಖ

ಬೆಳೆಯುತ್ತ ಬೆಳೆಯುತ್ತ, ನಾನು ಹೆಣ್ಣಾದೆ
ಅವನು ಗಂಡಾದ,
ಪ್ರತೀ ನೋಟಕ್ಕೂ ಬೇರೆ ಬೇರೆ ಅರ್ಥಗಳು
ಈ ಪ್ರಪಂಚದ ದೃಷ್ಠಿಯಲ್ಲಿ,
ನಾನು ಒಳಗೆ ಅದೇ ಪುಟ್ಟ ಹುಡುಗಿ,
ಅವನೂ ಕೂಡ, ಅಷ್ಟೇ ಪುಟ್ಟ ಹುಡುಗ,

ದಿನ ಕಳೆಯಿತು,
ಬದುಕು ಎಲ್ಲಿಂದ ಎಲ್ಲಿಗೋ ಸಾಗಿತು
ನಾನು ಮದುವೆಯಾದೆ
ಮಗು ಹೆತ್ತು ಹೆಂಗಸಾದೆ,
ಅವನು ಯಾವಾಗಲೋ ಬಾಲ್ಯದಲ್ಲೇ ಮಾಯವಾಗಿದ್ದ
ಮತ್ತೆ ಸಿಗಲೇ ಇಲ್ಲ,,,,

ಆದರೂ ನಾನು ಅವನನ್ನು ನೆನಪಿಸಿಕೊಂಡರೆ
ಮತ್ತೆ ಅದೇ ಪುಟ್ಟ ಲಂಗದ ಪುಟ್ಟಿಯಾಗುತ್ತೇನೆ
ಅದೇ ಗದ್ದೆ ಬದುಗಳ ಮಧ್ಯ ಶಾಲೆಗೇ ನಡೆದು ಹೋಗುತ್ತೇನೆ
ಅದೇ ಮೀನು ಮಾರುವ ಹೆಂಗಸರ ಸೀರೆಯ ಪರಿಮಳವನ್ನು ಆಸ್ವಾದಿಸುತ್ತೇನೆ,
ಅವನ ನೆನಪಿನ ಜೊತೆ, ಎಷ್ಟೆಲ್ಲಾ ನೆನಪುಗಳು
ಬೆಸೆದೆಕೊಂಡಿವೆ,,,, ಎಂದು ವಿಸ್ಮಿತಳಾಗುತ್ತೇನೆ,

ಅವನೇನು ನನ್ನ ಪ್ರಿಯತಮನಲ್ಲ,
ಅಣ್ಣನಲ್ಲ, ತಮ್ಮನಲ್ಲ, ಬಂದು ಬಳಗ, ಗೆಳೆಯ ಹೀಗೆ ಏನು ಅಲ್ಲ,
ಆದರೂ ಅವನೇನೋ ಒಂಥರಾ
“ನೆನಪು ಸೆಳೆಯುವ ನಾವಿಕ”

ಅವನನ್ನು ನಾನು ಹುಡುಕಲಾರೆ,
ಬಹುಷಃ ಅವನೂ ನನ್ನನ್ನು ಹುಡುಕಲಾರ,
ಆದರೂ ಅವನ ಮನದ ಮೂಲೆಯಲ್ಲಿ ನಾನು ಬದುಕಿದ್ದೇನೆ
ಗೆಳತಿಯಾಗಿ ಅಲ್ಲ,
ಪ್ರೇಮಿಯಾಗಿ ಅಲ್ಲ,
ಏನೇನೂ ಆಗಿ,,, ಅಲ್ಲ,,,,,,, ಆದರೂ ಏನೋ ಆಗಿ ಅವನ ಮನದಲ್ಲಿದ್ದೇನೆ,
ಅವನು ನನ್ನ ಮನದಲ್ಲಿ ಬದುಕಿರುವ ಹಾಗೆ,

ನನ್ನ ನೆನಪುಗಳ ಸಾಮ್ರಾಜ್ಯಕ್ಕೆ,
ನಾನೇ ಒಡತಿ ಎಂದು, ಮತ್ತೆ ಮತ್ತೆ ನೆನಪಿಸುವ ಅವನಿಗೆ,
ನನ್ನಷ್ಟೇ ಶುದ್ಧ ನೆನಪುಗಳು ಸದಾ ಆಲಂಗಿಸಲಿ,

-ಜಿ.ಕೆ ನವೀನ್ ಕುಮಾರ್

Advertisements
2 ಟಿಪ್ಪಣಿಗಳು
  1. ಒಂದೊಳ್ಳೆಯ ಕವನ👌

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: