Skip to content

ತಲೆದಿಂಬಿನ ಪ್ರಶ್ನೆ

ಜುಲೈ 20, 2017

ಅಂತರಂಗದಲ್ಲಿ
ಅತಿ ದೊಡ್ಡ ಕಾಮುಕ ಮಾನವ
ಹೊರಗೆ ಪ್ರೇಮದ ಹೊದಿಕೆ ಅಷ್ಟೇ

ಆತ್ಮದ ಆಸೆಗಳನ್ನು
ತೀರಿಸಿಕೊಳ್ಳುವ ಮೊದಲೇ,
ಆಧ್ಯಾತ್ಮ ಹುಡುಕಿದವರು ಸಿಕ್ಕುವುದು ವಿರಳ

ಹೊಟ್ಟೆಯ ಹಸಿವು, ಮಾನವನ ಮೂಲ ಬಯಕೆ,
ಹೊಟ್ಟೆ ತುಂಬಿದ್ದೇ ತಡ,
ಇದ್ದ ಬದ್ದ ಬೇರೆ ಹಸಿವುಗಳು ಚಿಗುರೊಡೆದು
ಮಾನವನನ್ನು ಕೊಲ್ಲುವವರೆಗೂ ಬಿಡಲಾರವು

ಬದುಕು, ಪ್ರೇಮ, ಪ್ರಣಯ, ಖುಷಿ ಅಳು
ಇದರ ಹಿಂದೆ, ಬೇರೆ ಯಾರೋ ಇದ್ದು
ನಡೆಸುತ್ತಿದ್ದಾರೆ ಎನ್ನುವ ಕೌತಕ,
ಅದೇ ಕೌತುಕಕ್ಕೆ ಉತ್ತರಿಸಲಾಗದಾಗ
ದೇವರು ಸಿಕ್ಕಿರಬಹುದು, ಉತ್ತರವಾಗಿ

ಎಲ್ಲ ಪ್ರಾಣಿಗಳಂತೆ
ಮನುಷ್ಯ ತಾನಿದ್ದಂತೆ ಬದುಕುವುದಿಲ್ಲ,
ಬದಲಿಗೆ
ಚರ್ಮದ ಮೇಲೆ ಇನ್ನೊಂದು ಚರ್ಮದ ಹೊದಿಕೆ ಹಾಕಿ
ಮುಖಕ್ಕೆ ಇನ್ನೊಂದು ಮುಖವಾಡ ಹಾಕಿ
ಬಣ್ಣಬಳಿದು, ಸ್ವಂತಿಕೆಯನ್ನು ಮರೆಮಾಚಿ
ಬದುಕುತ್ತಾನೆ

ಮಾನವನಿಗೆ ಮಾನವನೇ ಆಸೆ ತೋರಿ
ಒಂದಷ್ಟು ವಸ್ತುಗಳನ್ನು ತಯಾರಿಸಿ,
ಅದನ್ನು ಮಾರಿ, ಮಾರಿದ ಹಣದಲ್ಲಿ ಇನ್ನೇನನ್ನೋ ಕೊಂಡುಕೊಂಡು,
ಅದನ್ನು ಮನೆಯ ಮುಂದೆ ಪ್ರದರ್ಶನಕ್ಕಿಟ್ಟು
ವಸ್ತುಗಳ ಬೆಲೆಯಲ್ಲಿ
ತನ್ನ ಅಂತಸ್ತನ್ನು ಅಳೆದು
ತಾನು ಬೆಳೆದೆ ಎಂದು ಬೀಗುವ ಮುನ್ನ
ಒಮ್ಮೆ ಅಂತರಾಳವನ್ನು ನೋಡಬೇಕಿತ್ತು ಮನುಜ
ಎಷ್ಟೊಂದು! ಒಂಟಿ ಆತ ಅವನೊಳಗೆ?

ಹೇಯ್,,,,,,,,, ಪುಟ್ಟ ಮುದ್ದು ಬದುಕಿಗೆ, ಇಷ್ಟೆಲ್ಲಾ ತಾಕಲಾಟ ಬೇಕಿತ್ತೆ ?
ಸಾಯುವ ಹಿಂದಿನ ದಿನ ರಾತ್ರಿ
ತಲೆದಿಂಬು ಮಾನವನಿಗೆ ಕೇಳುವ ಪ್ರಶ್ನೆ,

ಮನುಷ್ಯ ಉತ್ತರಿಸಲಾರ, ಅವನದ್ದು ಎರಡು ಹನಿ ಕಣ್ಣೀರು ಅಷ್ಟೇ

-ಜಿ.ಕೆ ನವೀನ್ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: