Skip to content

ನಾಚಿಕೆ ಇಲ್ಲದ ಸಾಲುಗಳು – ೧೨

ಜುಲೈ 31, 2017

ಗಾಢ ನಿದ್ದೆಯಲ್ಲಿ ಪ್ರತೀ ಮನುಷ್ಯನೂ
ಬುದ್ಧನಾಗಿಯೇ ಇರುತ್ತಾನೆ,
ನಿದ್ದೆಯಿಂದ ಎದ್ದ ನಂತರವೂ
ಬುದ್ಧನಾಗಿರಬೇಕೆಂದು ಹಂಬಲಿಸಿದವನು
ಸಿದ್ದಾರ್ಥ ಮಾತ್ರ

ಮಧ್ಯರಾತ್ರಿ ಎದ್ದು ಹೊರಟವನು

************************

ಇತ್ತೀಚಿಗೆ ಪ್ರತೀ ಆತ್ಮಗಳೂ
ಮೊಬೈಲಿನ ಸ್ಕ್ರೀನಿನೊಳಗೆ
ಸಿಕ್ಕಿಹಾಕಿಕೊಂಡಿವೆ ಎನ್ನುವುದು
ಎಲ್ಲರಿಗೂ ಗೊತ್ತಿರುವ ಸತ್ಯ

************************

ಹಸುವೊಂದು ತಿಂದು ಉಳಿದ
ಹುಲ್ಲಿನ ಎಸಳು ಮತ್ತೆ ಬೆಳೆಯುತ್ತದೆ
ಮತ್ತದೇ ಹಸುವಿಗೆ ಆಹಾರವಾಗಲು,

ಕಷ್ಟಗಳನ್ನು ಎದುರಿಸಿ ಅವ್ವ-ನ್ದಿರು
ಮಕ್ಕಳಿಗಾಗಿ ಮತ್ತೊಮ್ಮೆ ಬದುಕಿದ ಹಾಗೆ

************************

ನಿನ್ನೆ ಮತ್ತು ನಾಳೆಗಳ ನಡುವೆ
ಇವತ್ತು ಎನ್ನುವುದು ಸಿಕ್ಕಿ
ವಿಲ ವಿಲ ಒದ್ದಾಡುವಾಗ
ಅದನ್ನು ನಿನ್ನೆ – ನಾಳೆಗಳಿಂದ
ಮುಕ್ತಿಗೊಳಿಸುವ ಏಕೈಕ ಶಕ್ತಿ
ಸಾವು

************************

ವ್ಯವಸ್ಥಿತ ಸಂಚು ಎನ್ನುವುದೇ

ಅವ್ಯವಸ್ಥೆಯ ಮೊದಲ ಹೆಜ್ಜೆ

************************

ಬದುಕಿನ-ವಿಚಿತ್ರ

ಮನುಷ್ಯ ಬದುಕಿನ ಕಡೆ ನಡೆದರೆ
ಸಾವು ಹಿಂಬಾಲಿಸುತ್ತದೆ

ಅದೇ ಆತ ಸಾವಿನ ಕಡೆ ನಡೆದರೆ
ಬದುಕು ಹಿಂಬಾಲಿಸುವುದಿಲ್ಲ

-GK Naveen Kumar

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: