Skip to content

ಗೋರಿಯ ಮೇಲೆ ಬರೆದ ಆ ಒಂದು ಸಾಲು

ಆಗಷ್ಟ್ 8, 2017
ಮರೆಯಬೇಕು ನಡೆದು ಬಂದ
ಹಾದಿಯನ್ನು,,,,
ಸವೆದ ಹಾದಿಯ ಮಣ್ಣಿನ ಗುರುತಾಗಲಿ
ನಡೆದು ಹರಿದ ಚಪ್ಪಲಿಯ ಗುರುತಾಗಲಿ
ಕಾಡಬಾರದು
ದಿನ ರಾತ್ರಿ ಕನಸಲ್ಲಿ ಬಂದು
,
ಹಳೆಯ ನೆನಪುಗಳನು ತಲೆಯೊಳಗೆ ಹೊತ್ತು
ಹೆಚ್ಚೆಂದರೆ ಎಷ್ಟು ದೂರ ನಡೆಯಬಲ್ಲೆ ನಾನು
ಹಾಗೆ ಹೊತ್ತರೆ, ಬಂದ ದಾರಿಯಲ್ಲಿಯೇ
ಸುತ್ತಬೇಕು, ಬಸವಳೆಯುತ್ತ,,,,,,,
,
ಹೀಗಾದರೆ ಹೊಸ ದಾರಿ ಹುಡುಕುವುದು ಹೇಗೆ
ಹೊಸ ನೆನಪುಗಳ ಹುಟ್ಟಿಸುವುದು ಹೇಗೆ
,
ಗಾದೆಯಿದೆ,
ಅಪ್ಪ ಹಾಕಿದ ಆಲದ ಮರ,,,
ಗಾದೆಯ ಗಾಂಭೀರ್ಯ ನೋಡಿದರೆ
ಬದುಕಿನ ಅರ್ಥ ಎದೆಗೆ ಒದೆಯಬಹುದು,
,
ಹೊಸದೊಂದು ಸುಂದರ ಮನೆ ಕೊಂಡು
ಅದರಲ್ಲಿ ಬದುಕಲಾರದೆ,
ಹಳೆಯ ಬಾಡಿಗೆ ಮನೆಯ ನೆನಪು ಕಾಡಿದರೆ
ಬದುಕು ಸಾಗುವುದೇ ಸರಾಗವಾಗಿ !
,
ಕವಿ ಹೇಳಿಲ್ಲವೇ
ಹಳೆ ಹಸಿರ ಕೆಸರಿನಿಂದ ಕಸಗೊಂಡು ಕಿತ್ತೇಳು
ಹೊಸ ಯುಗದ ಹಣೆಬರಹ ಬರೆಯೋಣ ಬಾ
,
ಹಳೆಯ ದೀಪದ ಬೆಳಕಿಗೆ ಖುಷಿಯಾಗಿ ಆ ವಿಜ್ಞಾನಿ
ಕುಳಿತಿದ್ದಿದ್ದರೆ
ಇಂದು ಜಗಮಗಿಸುವ ದೀಪ ಹುಟ್ಟುತ್ತಿತ್ತೇ ?
ಕಾಲ್ನಡಿಗೆಯಲ್ಲಿ ನಡೆಯುತ್ತಾ
ಅಲ್ಲಿಗೆ ಬದುಕನ್ನು ಸೀಮಿತವಾಗಿಸಿದ್ದಿದ್ದರೆ
ಗಾಳಿಯಲಿ ಹಾರುವ ಪ್ರಯಾಣ ಸುಖ
ನಮಗೆ ದೊರಕುತ್ತಿತ್ತೇ?
,
ಪದೇ ಪದೇ ಚುಚ್ಚುವ ಕನಸುಗಳು
ಪದೇ ಪದೇ ಕಾಲೆಳೆಯುವ ಅದೇ ಜನಗಳು
ಪದೇ ಪದೇ ನಡೆಯುವ ಅದೇ ದಾರಿ
ಎಲ್ಲವನು ಬಿಟ್ಟು ನಡೆಯಬೇಕು
ಹೊಸದೊಂದು ದಾರಿಯಲಿ
,
ಪ್ರತಿ ಕ್ಷಣವೂ ವಿಸ್ಮಯಗೊಳ್ಳುತ್ತಾ
ಅದೇ ಸೂರ್ಯನನ್ನು
ಹೊಸದಾಗಿ ಆಸ್ವಾದಿಸುತ್ತ
ಬದುಕಬೇಕು ಪ್ರತಿದಿನವೂ ಹೊಸದಾಗಿ
,
ಕೊನೆಗೊಂದು ದಿನ ಯಮ ಬಂದು
“ಹೇ ನೀನು ಇಲ್ಲಿ ಬದುಕಿದ್ದೀಯಾ ? ಅಥವಾ ಬದುಕಿದಂತೆ ನಟಿಸಿದೆಯಾ “?
ಎಂದು ಕೇಳಿದಾಗ
ಅವನ ಕಡೆ ನೋಡಿ ಮುಗುಳ್ನಕ್ಕು
ನನ್ನ ಹಾಗೆ ಯಾರೂ ಬದುಕಿಲ್ಲ ಇಲ್ಲಿ
ಎಂದು ಉತ್ಕಟತೆಯಲ್ಲಿ ನುಡಿದು
ಅವನ ಹಿಂದೆ ನಡೆಯಬೇಕು,,,,,,,,,
,
ಸಮಾದಿಯ ಮೇಲೆ
ಬರೆದ ಸಾಲು,,,,,,
ಇವನು ಇಲ್ಲಿ ಸತ್ತು ಮಣ್ಣಾಗಿಲ್ಲ,,,,,,
ಇವನು ಇಲ್ಲಿಯವರೆಗೂ ಬದುಕಿ ಮಣ್ಣಾದ,,,,,,,
ಎಂದಿರಬೇಕು
,
-ಜಿ.ಕೆ ನವೀನ ಕುಮಾರ್
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: