ವಿಷಯದ ವಿವರಗಳಿಗೆ ದಾಟಿರಿ

ತನಗೆ ತಾನೇ ಶುಭ್ರವಾಗಿ,

ಅಕ್ಟೋಬರ್ 18, 2018

ಬೆಳಕಿನೊಳಗೆ ಮುಳುಗಿ ಎದ್ದು
ಕತ್ತಲೊಳಗೆ ಸರಿದು ಹೋಗೋ
ವ್ಯವಧಾನದ ಮೌನ,,,,,,
ಸುತ್ತಲೂ ಅದೇನೋ ಇದೆಯೆಂದು
ಬದುಕುವ ಆಸೆಯ ಮತ್ತಿನಲಿ
ಮುತ್ತು ಹುಡುಕುವ ಕಾಯಕ,,,,,,

ಬೆರಗು ಬದುಕು
ಒರೆಗೆ ಹಚ್ಚಿ ನೋಡುತಿರಲು,,,,,
ಎಲ್ಲವೂ ಇಲ್ಲುಂಟು,,,,
ಅಕ್ಷಯಪಾತ್ರೆ,,,,,,

ಕೊಂದ ಕ್ಷಣವ ಕೊಳ್ಳಲಾಗದು
ಕೊಲ್ಲುವ ಮುನ್ನ, ಕೊಳ್ಳುವ ಯೋಚನೆಯೇ ಇರಲಿಲ್ಲ,,,,,,,
ಈಗದು ಎಷ್ಟು ಹುಡುಕಿದರೂ,,,,,,,
ಬಾಲ್ಯದಲ್ಲಿ ಬೇಲಿ ಬದಿಯಲ್ಲಿ ಕಳೆದು ಹೋದ ಚೆಂಡು,,,,,,
ಉಳಿವುದು ಆ ಕಳೆದ ಕ್ಷಣಗಳ ನೆನಪು ಮಾತ್ರ

ಕೆಂಪು ಬಾನು, ಹಳದಿಯಾಗಿ ಕಪ್ಪಾಗಿ,,,,
ದಿನವೂ ಬಿಳಿಯಾಗುವುದು,,,,,,
ತನಗೆ ತಾನೇ ಶುಭ್ರವಾಗಿ,,,,,
ತನಗೆ ತಾನೇ ಅತ್ತು ಮಳೆ ಸುರಿಸಿ,,,,,,
ತನಗೆ ತಾನೇ ಸಾಂತ್ವನ ಹೇಳಿಕೊಳ್ಳುವುದು,,,,,

ಬಾನು ನೋವಿನಿಂದ ಬಿಕ್ಕಿ ಬಿಕ್ಕಿ ಅಳದೆ ಇದ್ದಿದ್ದರೆ,,,,,,,
ನಮಗೆಲ್ಲಿಯ ಮಳೆ ?
ಹೊಟ್ಟೆಗೆಲ್ಲಿಯಾ ಬೆಳೆ ?
ಬದುಕಿಗೆಲ್ಲಿಯ ಬೆಲೆ ?
ಹಾಗೆ,,,,,,,, ನಮಗೂ ನೋವು ಬಂದಾಗ ನಾವೇ ಅಳಬೇಕು,,,,,
ಯಾರೊಬ್ಬರ ಮೇಲು ದ್ವೇಷ ಬೆಳೆಯದಂತೆ, ತಣ್ಣನೆಯ ಮಳೆ ಹನಿಸಬೇಕು
ಮತ್ತಷ್ಟು ಪ್ರೇಮ ಬೆಳೆಯಬೇಕು,,,,,,,,,
ಪ್ರೇಮ ಮಾತ್ರ ಬದುಕು,,,,,, ಉಳಿದದ್ದು ಅದರ ಛಾಯೆ ಅಷ್ಟೇ,

ಕಾದ ಕೆಂಡ ಕೆಂಪಗೆ ಸುಂದರವಾಗೇನೋ ಕಾಣುವುದು, ಆದರೆ !!!!
ತಣ್ಣಗಾದ ಇದ್ದಿಲು ಕಪ್ಪಿದ್ದರೂ, ಅದೆಷ್ಟು ಪ್ರೇಮವನ್ನು ಹೊರಸೂಸುವುದು,,,,,,
ಇಸ್ತ್ರಿ ಪೆಟ್ಟಿಗೆಯ ಜೈಲಿನೊಳಗೆ ನಗುತ್ತಲೇ ಬಂದಿಯಾಗೋ ಇದ್ದಿಲು, ಕೆಂಡವಾಗಿ
ಬಟ್ಟೆಗೊಂದು ಹೊಸ ಆಯಾಮ ಕೊಟ್ಟು, ಸುಟ್ಟು ಸುಮ್ಮನಾಗುವುದು,,,,,,
ಅದು ಬಟ್ಟೆಯ ಮೇಲೆ ಬಿದ್ದಿದ್ದರೆ !!!! ಕೆಂಡಕ್ಕೆ ಬರಿಯ ಬೈಗುಳವೇ

ನಮ್ಮೊಳಗಿನ ಕೆಂಡವನು ಇದ್ದಿಲು ಮಾಡಿ,
ಪ್ರೇಮದ ಪೆಟ್ಟಿಗೆಯೊಳಗೆ ಹಾಕಿ, ಬದುಕನ್ನು ಸವರಿ ಇಸ್ತ್ರಿ ಮಾಡಬೇಕು,

********************************************************

ನೈಜ ಸಾವು ಇದ್ದ ಮೇಲೆ, ನೈಜ ಬದುಕು ಯಾಕಿರಬಾರದು,,
ನಾವು ಹುಟ್ಟುವಾಗಲೇ,,,,,,,,,, ನಮ್ಮ ಮಹಾ ಸಾವು ನಮ್ಮೆದೆಯೊಳಗೆ ತಣ್ಣಗೆ ಮಲಗಿರುವಾಗ,,,,,
ನಾವೇಕೆ ಕ್ರೋಧದಿಂದ ಕೂಗಾಡಬೇಕು !!
ಬದುಕಬೇಕು,,,,,,,
ಸಾವು ನಮ್ಮನ್ನು ಎಷ್ಟು ಗಾಢವಾಗಿ ಪ್ರೇಮಿಸುತ್ತದೆಯೋ,
ನಾವು ಅಷ್ಟೇ ಗಾಢವಾಗಿ ಬದುಕನ್ನು ಪ್ರೇಮಿಸಬೇಕು,,,,,,
ಸಾವು ನಮ್ಮ ಮೇಲೆ ಹಿಡಿತ ಸಾಧಿಸಿ ಗೆಲ್ಲಬಲ್ಲದು ಎಂದಾದರೆ,,,,,
ನಾವೂ ಬದುಕಿನ ಮೇಲೆ ಹಿಡಿತ ಸಾಧಿಸಿ ಗೆಲ್ಲಬಹುದು,,,,,,,,, ಪ್ರೇಮದಿಂದ ಮಾತ್ರ !!

***********************************************************

ಕನ್ನಡಿಯೊಳಗಿನ ಕಾಣುವ ಸುಂದರ ಸ್ವರೂಪವೇ ಬದುಕು,
ಪ್ರೇಮವೇ ಕನ್ನಡಿ,,,,,,,
ಕನ್ನಡಿ ಒಡೆದರೆ ಮತ್ತೆಲ್ಲ ಕತ್ತಲೆ,,,,,,,,

-ಜಿ.ಕೆ.ನ

ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮ ಟಿಪ್ಪಣಿ ಬರೆಯಿರಿ