ವಿಷಯದ ವಿವರಗಳಿಗೆ ದಾಟಿರಿ

ಶಾಖಾಹಾರಿಯ ಶಾಖದಲ್ಲಿ ನಾನು ಬೆಚ್ಚಗಾದೆ, ಈ ಚಳಿಯಲ್ಲಿ ನಿಮಗೂ ಆ ಬೆಚ್ಚಗಿನ ಭಾವ ಬೇಕಾ?

ಫೆಬ್ರವರಿ 19, 2024

ಸಿನಿಮಾ ನಮಗೆ ಬಹಳ ಕಾರಣಗಳಿಗಾಗಿ ಇಷ್ಟವಾಗಬಹುದು,,, ನಮಗೆ ಗೊತ್ತಿಲ್ಲದ್ದು ಏನೋ ಒಂದು ಸಿನಿಮಾದಲ್ಲಿ ನಾವು ಕಂಡಾಗ ಅಥವಾ ಗೊತ್ತಿರುವುದನ್ನೇ ಬೇರೆ ತರಹ ಕಂಡಾಗ ಅಂದರೆ ನಾವು ನೋಡದೇ ಇರುವ ಕೋನದಲ್ಲಿ ಕಂಡಾಗ ಇದು ಹೀಗೂ ಇರುತ್ತದೆಯ! ಎಂದು ಅನಿಸುವುದು ಉಂಟು.

ಸಿನಿಮಾ ಯಾವ ಕಾರಣಕ್ಕಾಗಿ ಇಷ್ಟವಾಗುತ್ತದೆ ಎಂದು ಯಾರೂ ಬಹುಶಃ ಹೇಳಲಾಗುವುದಿಲ್ಲ ಸಿನಿಮಾದ ತಾಕತ್ತು ಅಂತದ್ದು. ಅದಲ್ಲದೆ ಸಿನಿಮಾವನ್ನು ಇಷ್ಟಪಡಲು ನಾವು ಹುಡುಕಿಕೊಂಡ ಕಾರಣವನ್ನು ಮೀರಿ ಸಿನಿಮಾ ಇನ್ಯಾವುದೋ ಅನೂಹ್ಯ ಭಾವವನ್ನು ನಮ್ಮೊಳಗೆ ಹುಟ್ಟಿಸಿ ಕಳುಹಿಸುರತ್ತದೆ.

ಗೆಳೆಯ ಸಂದೀಪ್ ಸುಂಕದ ಬರೆದು ನಿರ್ದೇಶಿಸಿದ ಸಿನಿಮಾ “ಶಾಖಾಹಾರಿ” ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿದೆ,

ನನಗೆ ವಯಕ್ತಿಕವಾಗಿ ಸಿನಿಮಾ ಯಾಕೆ ಇಷ್ಟ ಆಯ್ತು ಅಂತ ಹೇಳುವುದಕ್ಕಷ್ಟೇ ನಾನು ಅರ್ಹ, ನನ್ನ ಆತ್ಮಿಯ ಗೆಳೆಯ ಮಾಡಿದ ಸಿನಿಮಾ ಎಂಬ ಕಾರಣಕ್ಕಾಗಿ ನಾನು ನೋಡಲು ಹೋದದ್ದು ನಿಜ, ಆದರೆ ಆತ ಅದನ್ನು ಮೀರಿ ಇಡೀ ಚಿತ್ರರಂಗ ಹೆಮ್ಮೆ ಪಡುವ ಪರಿಸರ ಒಂದನ್ನು ನಮ್ಮ ಮುಂದೆ ಕಟ್ಟಿ ಕೊಟ್ಟಿದ್ದ, ಸಿನಿಮಾದ ಒಳಗೆ ಇಳಿದಂತೆ ನನಗೆ ಅಲ್ಲಿನ ಕಥೆ, ಅದು, ಇದು ಎಲ್ಲಕ್ಕಿಂತ ಜಾಸ್ತಿ ಇಷ್ಟ ಆಗಿದ್ದು ಅದರಲ್ಲಿನ ಉಪಭಾಷೆ, ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆಯುವ ಕತೆ, ಆದ್ದರಿಂದ ಅಲ್ಲಿನ ಸಾಧಾರಣ ಭಾಷೆ ಬಹಳ ಖ್ಹುಷಿ ಕೊಟ್ಟಿತು. ಅದೊಂತರ ಕೇಳಲು ಮುದ ನೀಡುತ್ತಿತ್ತು. (ಶಿವಮೊಗ್ಗ ನನ್ನ ಪ್ರೇಮದ ಊರುಗಳಲ್ಲಿ ಒಂದು. ಆಧುನೀಕತೆಯನ್ನು ಅಷ್ಟಾಗಿ ಅಂಟಿಸಿಕೊಳ್ಳದೇ, ಇನ್ನೂ ಪ್ರಕೃತಿಯ ಮಡಿಲಿಗೆ ತನ್ನನ್ನು ತೆರೆದುಕೊಂಡ ಊರು)

ಭಾಷೆಯ ಜೊತೆಗೆ, ಅಲ್ಲಿನ ಪರಿಸರ, ಜೀವನ ಶೈಲಿ ಎಲ್ಲವೂ ಎಷ್ಟು ನಮ್ಮನ್ನು ಆ ಊರಿನ ಭಾಗವಾಗಿ ಮಾಡುತ್ತವೆ ಅಂದರೆ, ಊರಿಗೆ ಹೋಗಿ ತಿರುಗಾಡಿ ವಾಪಸ್ ಬಸ್ ಇಳಿದು ಬಂದೆನೇನೊ ಅನಿಸಿಬಿಡ್ತು. ಅದೊಂಥರಹ ವಾವ್ ಅನಿಸುವ ಭಾವ.

ಸಿನಿಮಾದ ಟೆಕ್ನಿಕಲ್ ವಿಭಾಗದ ಬಗ್ಗೆ ಮಾತಡಬೇಕು ಅನಿಸುತ್ತಿಲ್ಲ, ಯಾಕೆಂದರೆ ನನಗೆ ಯಾವ ವಿಭಾಗವೂ ಬೇರೆ ಬೇರೇ ಯಾಗಿ ಕಂಡಿಲ್ಲ, ಕಥೆ, ಚಿತ್ರಕಥೆ, ಕ್ಯಾಮರ, ಮ್ಯೂಸಿಕ್, ಎಲ್ಲ ಒಟ್ಟಿಗೆ ಸಾಗಿ ಸಿನಿಮಾ ಒಂದೇ ಆಗಿ ಕಾಣಿಸಿದ್ದು ವಿಶೇಷ.

ಒಟ್ಟಾರೆ ನನಗಂತೂ ಬೆಚ್ಚಗಿನ ಅನುಭವ, ನಾನು ಮತ್ತೊಮ್ಮೆ ನೋಡುತ್ತೇನೆ ಆ ಭಾವಗಳು ಅಷ್ಟು ಕಾಡಿದೆ ನನಗೆ.

ಇಲ್ಲಿ ಬರೆದ ಉದ್ದೇಶ, ನನ್ನ ಗೆಳೆಯ ಮಾಡಿದ ಸಿನಿಮಾ ಅದಕ್ಕಾಗಿ ನೀವು ನೋಡಿ ಅನ್ನುವ ಕಾರಣಕ್ಕಲ್ಲ, ನಿಜವಾಗಿಯೂ ಆತ ಒಂದು ಎಲ್ಲೆ ಮೀರಿ ಅದ್ಭುತ ಪ್ರಪಂಚವನ್ನು ಕಟ್ಟಿ ಕೊಟ್ಟಿದ್ದಾನೆ, ನಮಗೆ ನಿಜವಾಗಿಯೂ ಆ ಮಧುರತೆಯ ಅನುಭವ ಆಗುತ್ತದೆ.

ಕನ್ನಡದ ಹುಡುಗನ ಪ್ರಾಮಾಣಿಕ ಪ್ರಯತ್ನ ಇದು, ನಮ್ಮ ಹಣಕ್ಕೆ ಖಂಡಿತಾ ಮೋಸವಿಲ್ಲ,,,,,,,,,,

(ಕಥೆಯ ಬಗ್ಗೆ ಏನೂ ಹೇಳಲ್ಲ ನಾನು, ನೋಡಿದ ನಂತರ ಬರೀ ಕಥೆಯಲ್ಲ, ಬೇರೆ ಒಂದಷ್ಟು ಭಾವಗಳು ಕಾಡ್ತವೆ ಅದಕ್ಕಾಗಿ.)

ಮುದ್ದು ಚಳಿಗಾಲದಲ್ಲಿ, ಶಾಖಾಹಾರಿಯ ಬೆಚ್ಚಗಿನ ಸವಿ ಸವಿಯೋಣ.

-GKN

ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮ ಟಿಪ್ಪಣಿ ಬರೆಯಿರಿ