ವಿಷಯದ ವಿವರಗಳಿಗೆ ದಾಟಿರಿ

ನಿನಗೆ ಬೇರೆ ಹೆಸರು ಬೇಕೇ ??

ಏಪ್ರಿಲ್ 30, 2014

ನಗು ಮುಖದ ಮಗು ಆಕೆ
ಹೆತ್ತವಳ ಮನೆಯ ಜಗುಲಿಯಲ್ಲಿ
ಹೆತ್ತದ್ದು ಹೆಣ್ಣೆಂದು ವ್ಯಂಗ್ಯವಿಟ್ಟಾಗಲೂ

ನಗು ಮುಖದ  ವದು ಆಕೆ
ಗುರಿ ಇರದ ಮದುವೆಯಲಿ
ವರನ ಕಡೆಯವರು ದಕ್ಷಿಣೆ ಭಕ್ಷಿಸುವಾಗಲೂ

ನಗು ಮುಖದ ಮಧು ಆಕೆ
ಮಧುಚಂದ್ರ ಮುಗಿದೊರ್ಷದಲಿ
ಪತಿಯು  “ಮದ್ಯ”ದ ಮಜ್ಜನಗಯ್ಯುವಾಗಲೂ

ನಗು ಮುಖದ ತಾಯಿ ಆಕೆ
ಹೆತ್ತು ಸಲಹಿದ ಜೀವಗಳಲಿ
ಯಾವೊಂದು ತನ್ನ ಅರ್ತೈಸಿಕೊಳ್ಳದಿದ್ದಾಗಲೂ

ನೋವುಂಡು ನಲಿವಿಕ್ಕಿದಾಕೆ
ನೋವುಂಡು ಒಲವಿಕ್ಕಿದಾಕೆ
ನೋವುಂಡು ಬಲವಿಕ್ಕಿದಾಕೆ

ಕಲ್ಪಿಸಲೂ ಆಗದ ಕಲ್ಪವೃಕ್ಷ ಆಕೆ,

ನಿನ್ನನು ಪ್ರೇಮದ ಹೆಣ್ಣೆಂದರೆ ಸಾಕೆ ?
ನಿನಗೆ ಬೇರೆ ಹೆಸರು ಬೇಕೇ ??

— ಜೀ ಕೇ ನ

One Comment
  1. ಹೆಣ್ಣಿನ ಪರಿಪಾಟಲನ್ನು ಮನ ಮಿಡಿಯುವಂತೆ ಚಿತ್ರಿಸಿದ್ದೀರ.

    Like

Leave a reply to Badarinath Palavalli ಪ್ರತ್ಯುತ್ತರವನ್ನು ರದ್ದುಮಾಡಿ