ವಿಷಯದ ವಿವರಗಳಿಗೆ ದಾಟಿರಿ

ಆಕೆಗಿಲ್ಲದ ಅಹಂಕಾರ ನನಗ್ಯಾಕೆ ??

ಮೇ 24, 2014

ಅದು ನಾನು,,,,,ಇದು ನೀನು,,,,,
ನಾನು ಮಹಾ,,,, ನೀನು ಸ್ವಾಹ,,,
ವ್ಯಂಗ್ಯ ಹ್ಹ ಹ್ಹ ಹ್ಹ

ನಾನು ಈ ಪಕ್ಷ,,,, ನಿನಗಿಲ್ಲ ಮೋಕ್ಷ
ನನ್ನದು ಆ ದೇವರು,,, ನಿನ್ನದು ಉದುರಿದೆ ಹಲ್ಲು,
ಮೆಟ್ಟಿ ಮೆರೆಯುವವ ಮಹಾ ಆತ್ಮ,,,
ಶಾಂತಿ ನೀಡುವವ “ದುಡ್ಡಿನ ಆಧ್ಯಾತ್ಮ “

ಗಡ್ಡಕ್ಕೆ ಬೆಂಕಿ ಬಿದ್ದರೂ, ಪಕ್ಕದ ಗುಡ್ಡ
ಹತ್ತಿ ಉರಿಯುತ್ತಿದೆ ಎನ್ನುವ
ನರ (ವಿಲ್ಲದ) ಮಾನವ

ಪೂರ್ವಾಗ್ರಹ ಪೀಡಿತರ” ಪಾಂಡಿತ್ಯ
ಗ್ರಹವಾಸಿಗಳ ದಾಂಪತ್ಯ
ಮೇಕೆಯ ಮೇಲಿನ ಮರಣ ಮೃದಂಗ
ಸೋತವಗೆ ಬರಿ ಕಾಲಿನ ಒದೆತ

ವಿದ್ಯೆ ಸತ್ತು,,,,,,,,, ಹಣವಾಗಿ
ಗುಣ ಸುಟ್ಟು,,,,,,,, ಹೆಣವಾಗಿ
ಬಣ ಬಣ ಸುಡುವ ನಗರದ ಮದ್ಯಕ್ಕೆ
ಹೆತ್ತ ಮಕ್ಕಳನು ಅಖಾಡಕ್ಕಿಳಿಸಿ
ಕೊತ ಕೊತ ಕುಡಿಯುವ ನೀರಿನ
ಒಳಗೆ ಕೈ ಇಟ್ಟು ಸತ್ತವರು
ಹೆಣ ಸುಡಲೂ, ಸಣ್ಣವರಿಲ್ಲ

ನನ್ನೊಳಗೆ ನಾ ಸತ್ತು
ಪರಕೀಯರ ಚಪ್ಪಲಿಯ ತಲೆಮೇಲೆ ಹೊತ್ತು
ತಿರುಗಿ ತಿರುಗಿ ಮೋಕ್ಷದ ಕಾಲಕ್ಕೆ
ಮಡಿದು, ಮಣ್ಣು ಸೇರಿದೆ,
ಉಳಿದದ್ದು ಚಪ್ಪಲಿಯ ಕುರುಹು

ಬಿಚ್ಚುವ ದಾವಂತದಲಿ
ವರ್ಷಗಳಿಂದಾ ಬಚ್ಚಿಟ್ಟ
ಹಚ್ಚೆ ಬೆತ್ತಲೆಯಾಗಿದೆ,,,

ಅದು ನಾನು,,,,,ಇದು ನೀನು,,,,,
ನಾನು ಮಹಾ,,,, ನೀನು ಸ್ವಾಹ,,,
ವ್ಯಂಗ್ಯ ಹ್ಹ ಹ್ಹ ಹ್ಹ

ನನ್ನಷ್ಟು ಮಹಾ ಯಾರು ?
ನನ್ನದಲ್ಲದ ಯೋಚನೆ ಬರಿಯ ಗೌಣ.
ನಾನೇ ಮಧುರ, ನಾನೇ ಚತುರ,,
ನಾನೇ ಸತ್ಯ,,

ಯುಗಗಳಿಂದಾ ನನ್ನಂತವರನು
ಹೆತ್ತು-ಹೊತ್ತ ದೊಡ್ಡ ಭೂಮಿಕೆ ನಕ್ಕಿಹಳು
ಆಕೆಗಿಲ್ಲದ ಅಹಂಕಾರ
ನನಗ್ಯಾಕೆ ??

4 ಟಿಪ್ಪಣಿಗಳು
  1. ನಿಜವಾದ ಮಾತು, ನಾವು ಮೊದಲಿಂದಲೂ ಬೇರೊಂದು ಗೆಲ್ಲಲ್ಲಿಕ್ಕೇ ಇಲ್ಲದ ಕಸರತ್ತು ಮಾಡುತ್ತೇವೆ. ಗೆದ್ದ ಮೇಲೆ ಅಹಂ ಪಡುತ್ತೇವೆ.
    ಆದರೆ ತಾಯಿ ಧರಿತ್ರಿ ಮಾತ್ರ ನಿಗರ್ವೀ…

    Like

  2. nagalakshmi kadur permalink

    ಮಾತನಾಡದ ಮೌನಿ, ಸರ್ವ ಸಹಿಷ್ಣು, ತಾನು ಯಾತನೆಯನ್ನು ಭರಿಸುತ್ತಲೇ ಮನುಜರಿಗೆ ಸುಖ ಸಂತಸ ಆಹಾರ ನೀಡುವಾಕೆ ಈ ಧರಣಿ … !!

    Like

Leave a reply to Badarinath Palavalli ಪ್ರತ್ಯುತ್ತರವನ್ನು ರದ್ದುಮಾಡಿ